Advertisement
ಹೌದು, ಸತತ ಬರಗಾಲದ ಛಾಯೆ ತಾಲೂಕಿನ ಜನ ಜಾನುವಾರುಗಳಿಗೆ ಮೇಲಿಂದ ಮೇಲೆ ಬರೆ ಸಿಡಿಲು ಬಡಿದಂತೆ ಅಪ್ಪಳಿಸುತ್ತಿದೆ. ಈ ವರ್ಷ ಬಿಸಿಲನ ತಾಪ ಹೆಚ್ಚಾಗುತ್ತಿದೆ. ಜನರಿಗೆ ಉಸಿರು ಕಟ್ಟುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಜಾನುವಾರುಗಳ ಸ್ಥಿತಿ ಹೇಳ ತೀರದು. ಕೆಂಡದಂತ ಬಿಸಿಲೇ ದನಕರುಗಳ ಆಶ್ರಯ ತಾಣವಾಗಿದೆ.
Related Articles
Advertisement
ಮೇವಿನ ಅಭಾವ ರೈತರು ಕಂಗಾಲು:
ಪ್ರತಿ ವರ್ಷ ಬೇಸಿಗೆ ಆರಂಭಕ್ಕೆ ಮುನ್ನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಾಲೂಕಾಡಳಿತ ತಾಲೂಕಿನ ಜಾನುವಾರಗಳಿಗೆ ಬೇಸಿಗೆ ಸಮಯದಲ್ಲಿ ಮೇವಿನ ಕೊರತೆಯಾಗದಂತೆ ಮುಂಚಿತವಾಗಿ ಮೇವು ಸಂಗ್ರಹಿಸಿ ಅವಶ್ಯಕತೆ ಇದ್ದಲ್ಲಿ ಗೋ ಶಾಲೆ ನಿರ್ಮಿಸಬೇಕು. ಸರ್ಕಾರದ ನಿಯಮವಿದ್ದರೂ ಸತತ ಬರಗಾಲದಿಂದ ಮಳೆಯಿಲ್ಲದೇ ದನಕರುಗಳನ್ನು ಬದಿಕಿಸಲು ಜಾನುವರುಗಳು ಮಾಲೀಕರು ನಿತ್ಯ ಹೆಣಗಾಡುತ್ತಿದ್ದಾರೆ. ಸರಿಯಾದ ಮಳೆಯಿಲ್ಲದೆ ಬೆಳಯನ್ನೇ ಕಾಣದ ರೈತರು ಜಾನುವಾರುಗಳಗೆ ಮೇವು ಎಲ್ಲಿಂದ ತರಬೇಕು ಎಂಬುದು ತಿಳಿಯದೇ ಕಂಗಾಲಾಗಿದ್ದಾರೆ.
ತಾಲೂಕಿನ ಜಿಪಂ ಕ್ಷೇತ್ರಕ್ಕೊಂದರಂತೆ ಮತ್ತು ಹುನಗುಂದ ಮತ್ತು ಇಲಕಲ್ಲ ಅವಳಿ ನಗರಕ್ಕೆ ಒಂದರಂತೆ ಏಳು ಗೋಶಾಲೆ ನಿರ್ಮಿಸಬೇಕು ಎಂದು ಕಳೆದ ಎರಡು ತಿಂಗಳ ಹಿಂದೆ ರೈತ ಸಂಘದಿಂದ ಜಿಲ್ಲಾಧಿಕಾರಿ ಮತ್ತು ತಾಲೂಕಿನ ತಹಶೀಲ್ದಾರಿಗೆ ಮನವಿ ಸಲ್ಲಿಸಿದ್ಧೇವೆ. ಇಲ್ಲಿವರೆಗೆ ಒಂದು ಗೋಶಾಲೆ ತರೆದಿಲ್ಲ. ಇದರಿಂದ ಜಾನುವಾರುಗಳಿಗೆ ಮೇವು, ನೀರು, ನೆರಳು ಇಲ್ಲದೇ ನೆರಳಾಡುವ ಪರಸ್ಥಿತಿ ನಿರ್ಮಾಣವಾಗಿದೆ. –ಮಲ್ಲನಗೌಡ ತುಂಬದ, ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ.
•ಮಲ್ಲಿಕಾರ್ಜುನ ಬಂಡರಗಲ್ಲ