Advertisement
ತುಮಕೂರು: ಸೀಮೆ ಹಸುಗಳ ಭರಾಟೆಯ ನಡುವೆ ನಮ್ಮ ದೇಸಿಯ ತಳಿಯ ಹಸು, ಎತ್ತುಗಳುಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಒಂದೇ ಬಾರಿ ಸಾವಿರಾರು ದೇಸಿಯ ತಳಿಯ ಹಸು, ಎತ್ತುಗಳ ಜಾತ್ರೆಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದು, ಮಠದ ಸುತ್ತ ಎಲ್ಲಿ ನೋಡಿದರೂ ಹಸು, ಎತ್ತುಗಳ ನಡುವೆ ರೈತರ ಸಂಭ್ರಮ ಮನೆ ಮಾಡಿದೆ.
Related Articles
Advertisement
ವಿವಿಧ ಜಿಲ್ಲೆಗಳಿಂದ ರೈತರ ಆಗಮನ: ಜಾತ್ರೆಗೆ ಮೊದಲೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದಅಪಾರ ಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳಸಮೇತವಾಗಿ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಬಂದುಇಲ್ಲಿ ತಮ್ಮ ರಾಸುಗಳ ಮಾರಾಟ ಹಾಗೂ ತಾವುಇಷ್ಟಪಡುವ ರಾಸುಗಳ ಕೊಡು, ಕೊಳ್ಳುವಿಕೆ ಪ್ರಕ್ರಿಯೆಗಳು ನಡೆಯುತ್ತವೆ. ಈ ರಾಸುಗಳ ಜಾತ್ರೆಗೆ ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿತ್ರ ದುರ್ಗ ಜಿಲ್ಲೆಗಳಲ್ಲದೆ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ಕಡೆಗಳಿಂದಲೂ ಈ ಎತ್ತಿನ ಜಾತ್ರೆಯಲ್ಲಿ ಜನರು ಬರುವುದು ಈ ಹಿಂದಿನಿಂದಲೂ ರೂಢಿಯಲ್ಲಿದೆ. ಜಾತ್ರೆಯಲ್ಲಿ ರಾಸುಗಳನ್ನುಕೊಳ್ಳಲು ಮತ್ತು ಮಾರಲು ಉತ್ತಮ ಅವಕಾಶವಿದ್ದು, ಇದಕ್ಕಾಗಿಯೇ ರೈತರು ತಾವು ಸಾಕಿದ ಜಾನುವಾರುಮಾರಲು ಹಾಗೂ ತಮಗೆ ಇಷ್ಟಬಂದ ಜಾನುವಾರು ಕೊಳ್ಳಲು ಆಗಮಿಸುತ್ತಾರೆ.
ಎಲ್ಲರಿಗೂ ಪ್ರಸಾದ ವ್ಯವಸ್ಥೆ: ಆಂಧ್ರ ಗಡಿಭಾಗದ ಅಗಳಿ, ಗುಡಿಬಂಡೆ, ರಾಜ್ಯದ ದಾವಣಗೆರೆ,ಚಿತ್ರದುರ್ಗ, ಗದಗ, ಹರಿಹರ, ಬಿಜಾಪುರ, ಬಳ್ಳಾರಿ,ರಾಮನಗರ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಧಿಕಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳೊಡನೆಆಗಮಿಸುವುದರಿಂದ ಇಡೀ ಮಠದ ಸುತ್ತಮುತ್ತಜಾನುವಾರು ಕಂಡು ಬರುತ್ತಿವೆ. ಸುಡು ಬಿಸಿಲ ಬೇಗೆಏರುತ್ತಿರುವಂತೆಯೇ ಜಾನುವಾರುಗಳಿಗೆ ನೆರಳು,ವಿದ್ಯುತ್, ಕುಡಿಯುವ ನೀರು, ಆರೋಗ್ಯ ತಪಾಸಣೆ ಹಾಗೂ ಸಂಜೆಯ ವೇಳೆ ಮನರಂಜನೆ, ಕೃಷಿ ಮತ್ತುಕೈಗಾರಿಕಾ ವಸ್ತುಪ್ರದರ್ಶನ ಹಾಗೂ ಜಾತ್ರೆಗೆ ಬರುವ ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ. 50 ಸಾವಿರದಿಂದ 10 ಲಕ್ಷ ರೂ. ಬೆಲೆ ಬಾಳುವ ರಾಸುಗಳು ಇಲ್ಲಿ ಸೇರುವುದೇ ವಿಶೇಷ.
ಜಾತ್ರೆಗೆ ಮೆರಗು: ಒಂದೊಂದು ಜೋಡಿ ರಾಸು ಗಳನ್ನು ಕೊಳ್ಳಲು ರೈತರು ಬಹುದೂರದಿಂದ ಬರುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದೆಲ್ಲದರ ಜೊತೆಗೆ ಸುರಕ್ಷತೆಯದೃಷ್ಟಿಯಿಂದ ಶ್ರೀ ಸಿದ್ಧಗಂಗಾ ಜಾತ್ರೆ ರೈತರಿಗೆ ಹೆಚ್ಚುಅನುಕೂಲಕರವಾದ ಜಾತ್ರೆಯಾಗಿದೆ. ದೇಸಿಯ ತಳಿಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಕೊರೊನಾಕಾಲದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಜಾನುವಾರು ಸೇರಿ ಈ ದನಗಳ ಜಾತ್ರೆಗೆ ಮೆರಗು ನೀಡಿವೆ.
20 ಸಾವಿರದಿಂದ 20 ಲಕ್ಷ ರೂ. ಮೌಲ್ಯದ ರಾಸುಗಳು : ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿಕಾರ್,ಅಮೃತ್ ಮಹಲ್, ಕಿಲಾರಿ, ಗಿಡ್ಡ ಹೋರಿ,ನಾಟಿ ಹಸು, ಮಲೆನಾಡ ಗಿಡ್ಡ, ಕೃಷ್ಣ ವ್ಯಾಲಿಸೇರಿದಂತೆ ವಿವಿಧ ತಳಿಗಳ ರಾಸುಗಳುರಾಜ್ಯದ ವಿವಿಧ ಮೂಲೆಗಳಿಂದ ಬಂದುಸೇರಿದ್ದು, ಇಷ್ಟೂ ತಳಿಗಳನ್ನು ಒಂದೇ ಕಡೆ ನೋಡುವ ಭಾಗ್ಯ ಶ್ರೀಕ್ಷೇತ್ರದಲ್ಲಿ ದೊರೆತಿದೆ.ಈ ಬಾರಿ ಜಾತ್ರೆಯಲ್ಲಿ ಈಗ 8 ಸಾವಿರ ದನಪಾಲ್ಗೊಂಡಿದ್ದು, 20 ಸಾವಿರದಿಂದ 20 ಲಕ್ಷರೂ.ವರೆಗಿನ ರಾಸು, ಹೋರಿ, ಹಸುಗಳುಬಂದು ಸೇರಿವೆ. ಈಗಾಗಲೇ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆದಿದ್ದು,ರೈತರು ರಾಸುಗಳ ಗುಣಗಾನ ಹಾಗೂ ರಾಸುಗಳಲ್ಲಿ ಇರುವ ತಪ್ಪು ಹುಡುಕಿ ಅಲ್ಲಗಳೆಯುವಿಕೆಮಾಡುತ್ತಿರುವುದು ಸಹ ಸಾಮಾನ್ಯವಾಗಿದೆ. ತಮಗೆ ಗಿಟ್ಟಿದ ದರದಲ್ಲಿ ರೈತರು ರಾಸು ಖರೀದಿಸಿ ತಮ್ಮ ಊರಿಗೆ ಟೆಂಪೋ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬರುತ್ತಿವೆ.
ಸೀಮೆ ಹಸು ಸಾಕಲು ಜನ ಮುಂದಾಗಿರುವ ಹಿನ್ನೆಲೆ, ನಮ್ಮ ನಾಟಿ ಹಸುಗಳು, ಎತ್ತುಗಳ ಸಂಖ್ಯೆ ಕಡಿಮೆ ಆಗುತ್ತಿದೆ.ಈ ಭಾಗದಲ್ಲಿ ಹಳ್ಳಿಕಾರ್ ತಳಿ ಬಹು ಅಪರೂಪದ ತಳಿ. ಈ ಸಂತತಿ ಉಳಿಯ ಬೇಕು. ನಾವು ಪ್ರತಿವರ್ಷ ನಮ್ಮ ತಂದೆಕಾಲದಿಂದಲೂ ಶ್ರೀಮಠದ ಜಾತ್ರೆಯಲ್ಲಿಎತ್ತುಗಳನ್ನು ಕಟ್ಟುತ್ತೇವೆ. ಇಲ್ಲಿ ಎತ್ತುಗಳನ್ನುಮಾರಾಟ ಮಾಡಿ ಬೇರೆ ಎತ್ತು ಕೊಂಡುಕೊಳ್ಳುತ್ತೇವೆ. ನಾವು ಸಾಕಿದ ಎತ್ತುಗಳಿಗೆ ಪ್ರತಿವರ್ಷ ಬಹುಮಾನ ಬಂದಿದೆ.–ರಾಮಣ್ಣ, ರೈತರು, ಅಗಳಿ ಗ್ರಾಮ
ಶ್ರೀಮಠದಲ್ಲಿ ನಡೆಯುವ ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯಅಂಗವಾಗಿ ದನಗಳ ಪರಿಷೆಯನ್ನು ಡಾ. ಶ್ರೀಶಿವಕುಮಾರ ಸ್ವಾಮೀಜಿ ಮಾರ್ಗದರ್ಶನ ದಲ್ಲಿನಡೆಸಿಕೊಂಡು ಬರುತಿತ್ತು. ಈಗ ಸಿದ್ಧಲಿಂಗಶ್ರೀಮುಂದುವರಿಸಿದ್ದಾರೆ. ಈ ವರ್ಷವೂ ಜಾತ್ರೆಗೆರಾಜ್ಯದ ವಿವಿಧ ಭಾಗ ಗಳಿಂದ ಸಾವಿರಾರುರಾಸುಗಳು ಬಂದಿವೆ. 8 ಲಕ್ಷ ರೂ. ಮೇಲ್ಪಟ್ಟಬೆಲೆ ಬಾಳುವ ರಾಸು ಈಗಾಗಲೇ ಬಂದಿವೆ.ಕಳೆದ ಮೂರು ದಿನಗಳಿಂದ ಹಲವುರಾಸುಗಳು ಬರುತ್ತಿವೆ. ಉತ್ತರ ಕರ್ನಾಟಕಭಾಗದ ಭೂಮಿ ಉಳುಮೆ ಮಾಡಲುಹಳ್ಳಿಕಾರ್ ತಳಿ ಎತ್ತು ಉತ್ತಮ ವೆಂದುಖರೀದಿಸಲು ಗುಲ್ಬರ್ಗಾ, ರಾಯ ಚೂರು ಭಾಗದಿಂದಲೂ ರೈತರು ಬರುತ್ತಿದ್ದಾರೆ.– ಸಿದ್ದರಾಮಣ್ಣ, ರೈತರು
-ಚಿ.ನಿ. ಪುರುಷೋತ್ತಮ್