Advertisement

ಜಾನುವಾರು ದೊಡ್ಡಿ ಹರಾಜು ಪ್ರಕ್ರಿಯೆ: ಗ್ರಾಮಸ್ಥರಿಂದ ಅಡ್ಡಿ

01:27 AM Jun 17, 2019 | sudhir |

ಶನಿವಾರಸಂತೆ: ಸಮೀಪದ ನಿಡ್ತ ಗ್ರಾಮ ಪಂಚಾಯತ್‌ಗೆ ಸೇರಿದ ಜಾಗ ನಹಳ್ಳಿ ಗ್ರಾಮದಲ್ಲಿರುವ ಜಾನುವಾರು ದೊಡ್ಡಿಯ ಹರಾಜು ಪ್ರಕ್ರಿಯೆಯನ್ನು ಶನಿವಾರ ಏರ್ಪಡಿ ಸಲಾಗಿತು.

Advertisement

ಸುಮಾರು 45 ವರ್ಷಗಳ ಹಿಂದೆ ನಿರ್ಮಿಸಿದ್ದ ಜಾನುವಾರು ದೊಡ್ಡಿಯು ಶಿಥಿಲಗೊಂಡಿದ್ದು ದೊಡ್ಡಯೊಳಗೆ ಕಾಡುಗಿಡ, ಪೊದೆಗಳು ಬೆಳೆದುನಿಂತಿವೆ, ಹಲವಾರು ವರ್ಷಗಳಿಂದ ಶಿಥಿಲ ಗೊಂಡಿರುವ ದೊಡ್ಡಿಯಲ್ಲಿ ಸರಿ ಯಾದ ವ್ಯವಸ್ಥೆ ಇಲ್ಲದಿರುವುದನ್ನು ವಿರೋಧಿಸಿ ಗ್ರಾಮಸ್ಥರು ದೊಡ್ಡಿಯನ್ನು ದುರಸ್ತಿಗೊಳಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾ.ಪಂ.ಅಧ್ಯಕ್ಷರು, ಪಿಡಿಒ ಗಳಿಗೆ ಮನವಿ ಮಾಡಿದರೂ ಸಹ ಪ್ರತಿವರ್ಷ ದೊಡ್ಡಿಯ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸದರಿ ಗ್ರಾ.ಪಂ.ಯು ಕಳೆದ 15 ದಿನಗಳ ಹಿಂದೆ ಇದೆ ಶಿಥಿಲಗೊಂಡ ದೊಡ್ಡಿಯ ವಾರ್ಷಿಕ ಹರಾಜು ಪ್ರಕ್ರಿಯೆ ನಡೆಸುವಂತೆ ತೀರ್ಮಾನಿಸಿದ್ದರು ಆಗ ಮಾಹಿತಿ ತಿಳಿದ ಗ್ರಾಮಸ್ಥರು ಶಿಥಿಗೊಂಡ ಹಾಗೂ ಯಾವುದೆ ವ್ಯವಸ್ಥೆ ಇಲ್ಲದ ದೊಡ್ಡಿಯ ಹರಾಜು ಪ್ರಕ್ರಿಯೆ ನಡೆಸದಿರುವಂತೆ ವಿರೋಧ ವ್ಯಕ್ತ ಪಡಿಸಿದ್ದರು.

ಆದರೂ ಸಹ ಶನಿವಾರ ಬೆಳಗ್ಗೆ ನಿಡ್ತ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ದೊಡ್ಡಿಯ ಹರಾಜು ಪ್ರಕ್ರಿಯೆಯನ್ನು ನಡೆಸಲಾಯಿತು ಈ ವೇಳೆ ಅಲ್ಲಿಗೆ ಬಂದ ಗ್ರಾಮಸ್ಥರು ಹಾಗೂ ಸದರಿ ಗ್ರಾ.ಪಂ.ಯ ಸದಸ್ಯನೊಬ್ಬ ಸೇರಿಕೊಂಡು ಯಾವುದೆ ವ್ಯವಸ್ಥೆ ಇಲ್ಲದ ಭದ್ರತೆ ಇಲ್ಲದ ದೊಡ್ಡಿಯ ಹರಾಜು ಪ್ರಕ್ರಿಯಯನ್ನು ನಡೆಸಬೇಡಿ ದೊಡ್ಡಿಯನ್ನು ದುರಸ್ತಿಗೊಳಿಸಿ ದೊಡ್ಡಿಗೆ ವ್ಯವಸ್ಥೆ ಕಲ್ಪಿಸಿ ಕೊಟ್ಟ ಮೇಲೆನೆ ಹರಾಜು ಪ್ರಕ್ರಿಯೆ ನಡೆಸಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರ ಮಧ್ಯೆ ಮಾತಿನ ಚಕಮುಕಿ ನಡೆಯಿತು. ಕೊನೆಗೆ ಮಧ್ಯಪ್ರವೇಶಿದ ಗ್ರಾ.ಪಂ.ಪಿಡಿಒ ಪ್ರತಿಮಾ, ಗ್ರಾ.ಪಂ.ಅಧ್ಯಕ್ಷ ಮುಸ್ತಾಪ ಇನ್ನು 1 ತಿಂಗಳ ಒಳಗೆ ಶಿಥಿಗೊಂಡಿರುವ ದೊಡ್ಡಿಯನ್ನು ದುರಸ್ತಿ ಪಡಿಸುವುದು ಮತ್ತು ದೊಡ್ಡಿಗೆ ಸಕಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಅನಂತರ ಹರಾಜು ಪ್ರಕ್ರಿಯೆಯನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸೋಮೇಶ್‌, ಈರಪ್ಪ, ಸುಬ್ಬಪ್ಪ ಗ್ರಾ.ಪಂ.ಸದಸ್ಯ ಅಶೋಕ್‌ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next