Advertisement
ಮಾರಣಾಂತಿಕವಾದ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಲ್ಲಿ ಪ್ರಧಾನವಾಗಿ ರೋಗಿ ಮತ್ತು ರೋಗಿ ಆರೈಕೆಯನ್ನು ನೋಡಿಕೊಳ್ಳುತ್ತಿರುವವರ ಜೀವನ ಗುಣಮಟ್ಟವನ್ನು ಉತ್ತಮಪಡಿಸುವುದೇ ಉಪಶಾಮಕ ಆರೈಕೆಯ ಪ್ರಧಾನ ಗುರಿಯಾಗಿದೆ. ರೋಗವನ್ನು ಆದಷ್ಟು ಬೇಗನೆ ಪತ್ತೆಹಚ್ಚುವುದು, ವಿಶ್ಲೇಷಿಸುವುದು ಹಾಗೂ ನೋವು ಮತ್ತು ದೈಹಿಕ, ಮಾನಸಿಕ, ಆಧ್ಯಾತ್ಮಿಕ ವಿಚಾರಗಳನ್ನು ನಿಭಾಯಿಸುವುದು ಮತ್ತಿತರ ಮಾರ್ಗಗಳ ಮೂಲಕ ನರಳುವಿಕೆಯನ್ನು ತಡೆಯುವುದು ಅಥವಾ ಅದರಿಂದ ಮುಕ್ತಿ ಒದಗಿಸುವುದು, ಘನತೆ ಮತ್ತು ಸುಸ್ಥಿತಿಯನ್ನು ಖಾತರಿಪಡಿಸುವುದರಿಂದ ಇದನ್ನು ಸಾಧಿಸಬಹುದು.
Related Articles
Advertisement
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಪ್ರಕರಣಗಳಲ್ಲಿ ಉಪಶಾಮಕ ಆರೈಕೆಯ ಪ್ರಧಾನ ಗುರಿಗಳಲ್ಲಿ ಈ ಕೆಳಗಿನವುಗಳಿಗೆ ನೆರವು ಚಿಕಿತ್ಸೆಗಳು ಸೇರಿರುತ್ತವೆ: ನೋವು
ದೇಹದಲ್ಲಿ ದ್ರವಾಂಶ ಮತ್ತು ಪೌಷ್ಟಿಕತೆಯನ್ನು ಕಾಪಾಡಿಕೊಳ್ಳುವುದು
ಜೀರ್ಣಾಂಗ ವ್ಯೂಹದ ಅಸ್ವಾಸ್ಥ್ಯ ಲಕ್ಷಣಗಳಿಂದ ಮುಕ್ತಿ
ಉದ್ವಿಗ್ನತೆ, ಖನ್ನತೆ
ಸಿಟ್ಟು
ಡಿಸ್‌ಫೇಜಿಯಾ
ಡಿಸ್‌ಪ್ನೊàಯಿಯಾ
ರಕ್ತಸ್ರಾವ
ಉಸಿರಾಟ ಮಾರ್ಗದ ನಿರ್ವಹಣೆ
ಕ್ಯಾಲ್ಸಿಯಂ ಆಧಿಕ್ಯ
ಕಾಯಿಲೆಯ ಮುಂದಿನ ಹಂತಗಳ ಬಗ್ಗೆ ಆಪ್ತ ಸಮಾಲೋಚನೆ ಶಸ್ತಕ್ರಿಯಾತ್ಮಕ ಚಿಕಿತ್ಸೆ
ಗಡ್ಡೆಯ ಭಾರವನ್ನು ಇಳಿಸುವ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯ ಭಾರವನ್ನು ಇಳಿಸಬಹುದು, ನೋವನ್ನು ಕಡಿಮೆ ಮಾಡಬಹುದು ಮತ್ತು ರಕ್ತಸ್ರಾವವನ್ನು ತಗ್ಗಿಸಬಹುದು. ಅಲ್ಲದೆ ನುಂಗುವ ಸಾಮರ್ಥ್ಯವನ್ನು ಹೆಚ್ಚಿಸಬಹುದು, ಪೌಷ್ಟಿಕಾಂಶ ಉತ್ತಮಪಡಿಸಬಹುದು, ಶ್ವಾಸೋಚ್ಛಾ$Ìಸ ಮಾರ್ಗವನ್ನು ಉತ್ತಮಪಡಿಸಬಹುದು.
ಎಂಬೊಲೈಸೇಶನ್ ಮತ್ತು ವೆಸೆಲ್ ಸ್ಟೆಂಟಿಂಗ್‌ನಂತಹ ಅತ್ಯಾಧುನಿಕ ಎಂಡೊವಾಸ್ಕಾಲಾರ್ ತಂತ್ರಜ್ಞಾನಗಳು ಭಾರೀ ವಾಸ್ಕಾಲಾರ್ ಹಾನಿಗೆ ಸಂಬಂಧಿಸಿದಂತೆ ರಕ್ತಸ್ರಾವದಂತಹ ಲಕ್ಷಣಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಅಲ್ಲದೆ, ಪ್ರಧಾನ ರಕ್ತನಾಳಗಳು ಕ್ಷಯಿಸುವ ಅತಿಹೆಚ್ಚು ಅಪಾಯ ಹೊಂದಿರುವ ರೋಗಿಗಳಿಗೂ ಈ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಬಹುದು.
ಈ ಕೆಳಗಿವುಗಳನ್ನು ಒಳಗೊಂಡಿದೆ:
ರೇಡಿಯೇಶನ್
ನೋವಿನ ನಿಯಂತ್ರಣದ ವಿಚಾರದಲ್ಲಿ ನಿರ್ದಿಷ್ಟವಾಗಿ ಪ್ರತಿಸ್ಪಂದನೆ ಹೊಂದಿರುವ ಆಯ್ದ ರೋಗಿಗಳಲ್ಲಿ ಶೇ.80ರಷ್ಟು ಮಂದಿಗೆ ರೇಡಿಯೇಶನ್ ಮೂಲಕ ಲಕ್ಷಣಗಳ ನಿಯಂತ್ರಣವನ್ನು ಸಾಧಿಸಬಹುದು. ಕೀಮೋಥೆರಪಿ
ಕೀಮೋಥೆರಪಿಯನ್ನು ಅದೊಂದೇ ಆಗಿ ಅಥವಾ ರೇಡಿಯೋಥೆರಪಿಯ ಜತೆಗೆ ಜಂಟಿಯಾಗಿ ನಡೆಸಬಹುದು. ಡಿಸ್‌ಫೇಜಿಯಾಕ್ಕೆ ಉಪಶಾಮಕ ಆರೈಕೆ
ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಲ್ಲಿ ಶೇ.40ರಷ್ಟು ಮಂದಿ ಡಿಸ್‌ಫೇಜಿಯಾಕ್ಕೆ ತುತ್ತಾಗುತ್ತಾರೆ. ಇದಕ್ಕೆ ಕಾರಣಗಳೆಂದರೆ,
ಯಾಂತ್ರಿಕ ಅಡಚಣೆ
ಕ್ರಿಯಾತ್ಮಕ ಅಡಚಣೆ
ಔಷಧಗಳಿಂದ ಅಡ್ಡ ಪರಿಣಾಮಗಳು
ಮೂಲವ್ಯಾಧಿ
ನೋವು
ಬಾಯಿಯ ಮೂಲಕ ನುಂಗಲು ಸಾಧ್ಯವಿರುವ ರೋಗಿಗಳಲ್ಲಿ ಫಂಕ್ಷನಲ್ ಎಂಡೊಸ್ಕೊಪಿಕ್ ಇವಾಲ್ಯುಯೇಶನ್ ಆಫ್ ಸ್ವಾಲೋಯಿಂಗ್ (ಎಫ್ಇಇಎಸ್) ಮೂಲಕ ವಿಶ್ಲೇಷಣೆಯನ್ನು ನಡೆಸಬೇಕು.
ನುಂಗಲು ಸಾಧ್ಯವಿಲ್ಲದ ರೋಗಿಗಳಲ್ಲಿ ನ್ಯಾಸೊಗ್ಯಾಸ್ಟ್ರಿಕ್ ಟ್ಯೂಬ್ (ಮೂಗಿನ ಮುಖಾಂತರ – ಎನ್‌ಜಿಟಿ) ಅಥವಾ ಗ್ಯಾಸ್ಟ್ರೊಸ್ಟ್ರೊಮಿ ಮೂಲಕ ನೀರು ಪೂರೈಕೆ, ಪೌಷ್ಟಿಕಾಂಶ ಪೂರೈಕೆ, ಔಷಧ ಪೂರೈಕೆ ಮಾಡಬಹುದು.
ಉಸಿರಾಟ ಮಾರ್ಗದ ಉಪಶಾಮಕ ಆರೈಕೆ ಉಸಿರಾಟ ಮಾರ್ಗದಲ್ಲಿ ಅಡಚಣೆ ಇದ್ದರೆ ಟ್ರೇಕಿಯೊಸ್ಟೊಮಿಯನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ. ನೋವು
ನೋವು ನಿವಾರಣೆಗೆ ಅನಾಲೆಸಿಕ್ ಔಷಧಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿರುವ ಮೂರು ಸ್ತರಗಳ “ಪೇಯ್ನ ಲ್ಯಾಡರ್’ ಅನುಸರಿಸಿ ನೀಡಲಾಗುತ್ತದೆ. ಇದನ್ನು ನೋವಿನ ಹೆಚ್ಚಳದ ಸಂಭಾವ್ಯಆಧರಿಸಿ ರೂಪಿಸಲಾಗಿದೆ ಹಾಗೂ ನೋವಿನ ತೀವ್ರತೆ ಮತ್ತು ಪ್ರತಿಸ್ಪಂದನೆಯನ್ನು ಆಧರಿಸಿ ಉಪಯೋಗಿಸಲಾಗುತ್ತದೆ. ಇಲ್ಲಿ ನೋವಿನ ತೀವ್ರತೆಯು ಉಪಯೋಗಿಸುವ ಅನಾಲೆjಸಿಕ್ ಔಷಧದ ಶಕ್ತಿಯನ್ನು ಹಾಗೂ ಪ್ಯಾಥೋಫಿಸಿಯಾಲಜಿಯು ಬಳಕೆಯಾಗುವ ಸಹ ಔಷಧವನ್ನು ಸೂಚಿಸುತ್ತದೆ. ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಮಲಬದ್ಧತೆ
ಈ ಲಕ್ಷಣಗಳು ಕಂಡುಬಂದಾಗ ಆ್ಯಂಟಿಎಮೆಟಿಕ್ಸ್ ಮತ್ತು ಲ್ಯಾಕ್ಸೇಟಿವ್‌ಗಳನ್ನು ಉಪಯೋಗಿಸಬೇಕು. ಪ್ರೊಫಿಲ್ಯಾಕ್ಟಿಕ್ ಲ್ಯಾಕ್ಸೇಟಿವ್‌ಗಳ ಸಮರ್ಪಕ ಬಳಕೆ ಮತ್ತು ನಿರ್ಜಲೀಕರಣೈ ಕ್ಯಾಲ್ಸಿಯಂ ಅಂಶ ಆಧಿಕ್ಯ (ಹೈಪರ್‌ಕ್ಯಾಲ್ಸೇಮಿಯಾ) ಮತ್ತು ಹೈಪೊಥೈರಾಯಿxಸಮ್‌ನಂತಹ ದೈಹಿಕ ಕಾರಣಗಳನ್ನು ಸರಿಪಡಿಸುವ ಮೂಲಕ ದೂರವಿಡಬಹುದು. ಗೊಂದಲ ಮತ್ತು ಉದ್ವಿಗ್ನ
ಗೊಂದಲವುಂಟಾಗಲು ಇರುವ ವಿತ್‌ಡ್ರಾವಲ್‌ನಂತಹ ಸಾವಯವ ಕಾರಣಗಳನ್ನು ಗುರುತಿಸಿ ಸಮರ್ಪಕವಾಗಿ ಸರಿಪಡಿಸಬೇಕು. ಇದಾಗದಿದ್ದರೆ ಬೆಂಝೊಡಯಾಝಪೈನ್‌ಗಳು ಅಥವಾ ಆ್ಯಂಟಿಸೈಕಾಟಿಕ್ಸ್‌ಗಳನ್ನು ಪರಿಗಣಿಸಬೇಕು. ಸ್ರಾವಗಳು
ನಿಯಮಿತವಾಗಿ ತೆಗೆದುಹಾಕಬೇಕು.
ಮರಣಶಯೆಯಲ್ಲಿರುವವರ ಆರೈಕೆಯು ಉತ್ತಮ ಉಪಶಾಮಕ ಆರೈಕೆಯ ಪ್ರಾಮುಖ್ಯ ಭಾಗವಾಗಿದೆ. ಅಂತ್ಯ ಸನ್ನಿಹಿತವಾಗಿರುವ ರೋಗಿಗಳಲ್ಲಿ ಲಕ್ಷಣಗಳು ತೀವ್ರತರಹದಲ್ಲಿರಬಹುದು ಮತ್ತು ಕ್ಷಿಪ್ರವಾಗಿ ಬದಲಾಗಬಹುದು. ಜತೆಗೆ ಇನ್ನು ಮುಂದಿನ ಚಿಕಿತ್ಸೆ ಸೂಕ್ತವಲ್ಲ ಎಂಬುದು ಖಚಿತವಾಗಿರಬಹುದು. ಈ ಕಾರಣಗಳಿಂದಾಗಿ ಸರಿಯಾದ ಸಮಯದಲ್ಲಿ ವಿಶ್ಲೇಷಣೆ, ನಿಯಮಿತ ಪರಿಶೀಲನೆ ಮತ್ತು ದೃಢವಾದ ರೋಗಲಕ್ಷಣಗಳ ನಿಯಂತ್ರಣ ಅತ್ಯಗತ್ಯವಾಗಿರುತ್ತವೆ. ಡೇಮ್ ಸಿಸೆಲಿ ಹೇಳಿರುವ ಮಾತು ಸ್ಮರಣಾರ್ಹ, “ವ್ಯಕ್ತಿಗಳು ಹೇಗೆ ಮರಣಿಸಿದರು ಎಂಬುದು ಬದುಕುಳಿದವರ ಸ್ಮರಣೆಯಲ್ಲಿರುತ್ತದೆ’. ಆದ್ದರಿಂದ ಸೂಕ್ಷ್ಮ ಮತ್ತು ಪ್ರಾಮಾಣಿಕ ಸಂವಹನದ ಜತೆಗೆ ಸಂವೇದನಶೀಲ ಮತ್ತು ಸಕ್ರಿಯಾತ್ಮಕ ನಿರ್ಧಾರಗಳು ಅತ್ಯಗತ್ಯವಾಗಿರುತ್ತವೆ. ಕಾಯಿಲೆಗಳಿಗೆ ನೀಡುವ ಚಿಕಿತ್ಸೆಗಳು ರೋಗಪತ್ತೆಯನ್ನು ಆಧರಿಸಿದ್ದು, ಸ್ತೂಲವಾಗಿ ವೈದ್ಯಕೀಯ ಮತ್ತು ಶಸ್ತ್ರಕ್ರಿಯಾತ್ಮಕ ಎಂಬುದಾಗಿ ವರ್ಗೀಕರಿಸಬಹುದು. ಹಲವು ಈಸೋಫೇಜಿಯಲ್ ಅನಾರೋಗ್ಯಗಳನ್ನು ವೈದ್ಯಕೀಯವಾಗಿ ಚಿಕಿತ್ಸೆಗೆ ಒಳಪಡಿಸಬಹುದಾಗಿದ್ದರೂ ರೋಗಲಕ್ಷಣಗಳು ತೀವ್ರವಾಗಿದ್ದಾಗ ಶಸ್ತ್ರಚಿಕಿತ್ಸೆ ನಡೆಸುವುದು ಅನಿವಾರ್ಯವಾಗಿರುತ್ತದೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಜೀವನಶೈಲಿ ಬದಲಾವಣೆಗಳು ಮತ್ತು ಪ್ರೊಟೋನ್ ಪಂಪ್ ಇನ್‌ಹಿಬಿಟರ್‌ಗಳು ಒಳಗೊಂಡಿರುತ್ತವೆ. ಶಸ್ತ್ರಚಿಕಿತ್ಸೆಯಲ್ಲಿ ವಿಸ್ತರಣೆ ಅಥವಾ ಶಸ್ತ್ರಕ್ರಿಯೆಯ ಮೂಲಕ ತೆಗೆದುಹಾಕುವುದು ಮತ್ತು ರಿಅನಸ್ಟಮೋಸಿಸ್ ಸೇರಿರುತ್ತವೆ. ಕಾಯಿಲೆ ಬೆಳವಣಿಗೆ ಹೊಂದುತ್ತ ಹೋದಂತೆ ಉಂಟಾಗಬಹುದಾದ ಅಂಗಹಾನಿಗಳನ್ನು ಕಡಿಮೆ ಮಾಡಲು ಆರಂಭಿಕ ಹಂತಗಳಲ್ಲಿಯೇ ರೋಗಪತ್ತೆ ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ಡಾ| ಪಾಂಡುರಂಗ ಕಾಮತ್
ಇಎನ್‌ಟಿ ಕನ್ಸಲ್ಟಂಟ್, ಕೆಎಂಸಿ ಆಸ್ಪತ್ರೆ, ಮಂಗಳೂರು