Advertisement

State Govt; ರಾಜ್ಯದ ಎಲ್ಲ ಕೋರ್ಟ್‌ಗಳಲ್ಲಿ ಕಲಾಪಗಳ ನೇರ ಪ್ರಸಾರ

11:35 PM Feb 16, 2024 | |

ಬೆಂಗಳೂರು: ಹೈಕೋರ್ಟ್‌ಗಷ್ಟೇ ಸಿಮೀತವಾಗಿದ್ದ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ಮಾಡುವ ಯೋಜನೆ ಇದೀಗ ರಾಜ್ಯದ ಎಲ್ಲಾ ನ್ಯಾಯಾಲಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ.

Advertisement

ರಾಜ್ಯದ ಎಲ್ಲ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮಾಡಲು ಮತ್ತು ನ್ಯಾಯಾಲಯಗಳ ಆಡಳಿತ ವ್ಯವಸ್ಥೆ ಆಧುನೀಕರಿಸಲು 94 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈ ಉದ್ದೇಶಕ್ಕಾಗಿ 180 ಕೋಟಿ ರೂ. ಒದಗಿಸಲಿದೆ. ಇನ್ನು ರಾಜ್ಯದ ವಿವಿಧ ಕೋರ್ಟ್‌ಗಳ ಕಟ್ಟಡಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಗಳನ್ನು ಅಭಿವೃದ್ಧಿಪಡಿಸ ಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಈ ಉದ್ದೇಶಕ್ಕಾಗಿ 175 ಕೋಟಿ ರೂ. ಅನುದಾನ ಒದಗಿಸಲಾಗುವುದು.

ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.

ಹಿಂದುಳಿದ ತಾಲೂಕುಗಳಿಗೆ
ಹೊಸ ಅಭಿವೃದ್ಧಿ ಸೂಚ್ಯಂಕ
ಬೆಂಗಳೂರು: ಡಾ.ಎಂ.ನಂಜುಂಡಪ್ಪ ವರದಿಯ ಆಧಾರದಲ್ಲಿ ರೂಪಿಸಿರುವ ಯೋಜನೆಗಳಿಂದ ಆಗಿರುವ ಬದಲಾವಣೆ ಮತ್ತು ಪರಿಣಾಮಗಳ ಅಧ್ಯ ಯನಕ್ಕೆ ಉನ್ನತಾಧಿಕಾರಿ ಸಮಿತಿ ರಚಿಸುವ ಹಾಗೆಯೇ ಆ ಸಮಿತಿ ನೀಡುವ ವರದಿಯ ಆಧಾರದಲ್ಲಿ ಹೊಸ ಅಭಿವೃದ್ಧಿ ಸೂಚ್ಯಂಕ ವನ್ನು ತಯಾರಿಸುವ ತೀರ್ಮಾ ನವನ್ನು ಸರ್ಕಾರ ಪ್ರಕಟಿಸಿದೆ. ನಂಜುಂಡಪ್ಪ ವರದಿಯನ್ನು 2002ರಲ್ಲಿ ಸಲ್ಲಿಸಲಾಗಿದ್ದು, ಕಳೆದ 22 ವರ್ಷಗಳಲ್ಲಿ ಈ ವರದಿಯ ಆಧಾರದ ಮೇಲೆ ಹಿಂದುಳಿದ ಪ್ರದೇಶಗಳಲ್ಲಿ ಅಸಮ ತೋಲನೆ ನಿವಾರಿಸಲು ಬಹಳಷ್ಟು ಯೋಜನೆ ಗಳನ್ನು ಮತ್ತು ಬಂಡವಾಳ ಹೂಡಿಕೆ ಮಾಡಲಾಗಿದೆ. ಇದರಿಂದ ಆಗಿರುವ ಬದ ಲಾ ವಣೆಗಳು ಮತ್ತು ಪರಿಣಾಮಗಳನ್ನು ಈ ಸಮಿತಿ ಅಧ್ಯಯನ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next