Advertisement

ಸ್ವಾಭಿಮಾನದಿಂದ ಬದುಕು ಸಾಗಿಸಿ: ಶ್ರೀ ಬೋಧಸ್ವರೂಪಾನಂದ

09:26 PM May 16, 2019 | sudhir |

ಮಡಿಕೇರಿ : ಹೆಣ್ಣು, ಗಂಡೆಂಬ ಭೇದವಿಲ್ಲದೆ ಸ್ವಾಭಿಮಾನದಿಂದ ಬದುಕು ಸಾಗಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದು ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಶ್ರೀಬೋಧಸ್ವರೂಪಾನಂದ ಸ್ವಾಮಿ ಮಹಾರಾಜ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಶ್ರೀರಾಮಕೃಷ್ಣ ಶಾರದಾಶ್ರಮದ ವತಿಯಿಂದ ನಗರದ ಶ್ರೀಸದ್ಗುರು ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗ ಣದಲ್ಲಿ ಮಳೆಹಾನಿ ಸಂತ್ರಸ್ತರಿಗಾಗಿ ಆಯೋಜಿಸಿರುವ ಉಚಿತ ಹೊಲಿಗೆ ಮತ್ತು ಕಂಪ್ಯೂಟರ್‌ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತ ನಾಡಿದರು. ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾಕಷ್ಟು ಕಷ್ಟ, ನಷ್ಟ ಉಂಟಾಗಿದೆ. ಶ್ರೀರಾಮಕೃಷ್ಣ ಶಾರದಾಶ್ರಮದ ವತಿಯಿಂದ ರೂ. 75 ಲಕ್ಷ ಮೌಲ್ಯದ ಸಾಮಾಗ್ರಿಗಳನ್ನು ಈಗಾಗಲೇ ಸಂತ್ರಸ್ತರಿಗೆ ವಿತರಿಸಲಾಗಿದೆ. ಇದೀಗ ವೃತ್ತಿ ಕೌಶಲ್ಯ ಶಿಕ್ಷಣವನ್ನು ನೀಡಲಾಗುತ್ತಿದ್ದು, ಮಾದಾಪುರ, ಸೂರ್ಲಬಿ ಭಾಗಗಳಲ್ಲಿ ಜೇನು ಸಾಕಾಣೆ ತರಬೇತಿಯನ್ನು ನೀಡಿ, 64 ಸಂತ್ರಸ್ತರಿಗೆ ಜೇನು ಪೆಟ್ಟಿಗೆಯನ್ನು ವಿತರಿಸಲಾಗಿದೆ ಎಂದರು.

ಹಿರಿಯ ಪತ್ರಕರ್ತ ಬಿ.ಜಿ.ಅನಂ ತಶಯನ ಮಾತನಾಡಿ, ಶ್ರೀರಾಮಕೃಷ್ಣ ಶಾರದಾಶ್ರಮ ನಿರಂತ ರವಾಗಿ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಹೊಸ ಸ್ಫೂರ್ತಿಯನ್ನು ತುಂಬುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀವನದಲ್ಲಿ ಕಷ್ಟಗಳು ಎದುರಾದಾಗ‌ ಧೈರ್ಯ ಮತ್ತು ಚೈತನ್ಯಪೂರ್ಣರಾಗಿ ಮುನ್ನುಗ್ಗಬೇಕು, ಆಗ ಮಾತ್ರ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬದು ಕಿನಲ್ಲಿ ಯಶಸ್ಸನ್ನು ಕಾಣಬೇಕೆಂದರು.

ಹಿರಿಯ ನಾಗರೀಕರ ವೇದಿಕೆಯ ಪ್ರಮುಖರಾದ ಜಿ.ಟಿ.ರಾಘವೇಂದ್ರ ಮಾತನಾಡಿ, ಶೈಕ್ಷಣಿಕ ಸಾಧನೆಯ ಮೂಲಕ ಜೀವನದ ಸಾರ್ಥಕತೆಯನ್ನು ಕಾಣಬೇಕೆಂದು ಕರೆ ನೀಡಿದರು.

ಶ್ರೀಸದ್ಗುರು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಾಮ್‌ ಪ್ರಸಾ ದ್‌, ಸಿಬಂದಿ ವರ್ಗ, ಶಿಬಿರಾರ್ಥಿಗಳು, ತರಬೇತುದಾರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next