ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 24 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಶತಃಸಿದ್ಧ ಎಂದರು.
Advertisement
2014ರ ಚುನಾವಣೆಯ ವೇಳೆ 60 ತಿಂಗಳ ಅಧಿಕಾರ ನೀಡಿದರೆ ಕಾಂಗ್ರೆಸ್ ಪಕ್ಷದ 2ಜಿ ಕಲ್ಲಿದ್ದಲು ಪ್ರಕರಣ, ವಿದೇಶದಲ್ಲಿ ಕಪ್ಪು ಹಣ ಎಂದು ಜನರನ್ನು ಮರುಳು ಮಾಡಿ ಬಿಜೆಪಿ ಅಧಿಕಾರ ಪಡೆದರು. ಆದರೆ 10 ವರ್ಷ ಆದರೂ ಆ ಹಗರಣವನ್ನು ಸಾಬೀತು ಪಡಿಸಲು ಆಗಿಲ್ಲ. ಕಪ್ಪು ಹಣ ವಾಪಸು ತಂದಿಲ್ಲ. ಮತ್ತೆ 2019ರಲ್ಲಿ ಪುಲ್ವಾಮಾ ದಾಳಿಯಾಯಿತು. ಬಳಿಕ ರಾಮ ಮಂದಿರವನ್ನು ಮುನ್ನೆಲೆಗೆ ತಂದರು. ಆದರೆ ಈ ಬಾರಿ ವಿದೇಶಿ ಕೈವಾಡಗಳಿಂದ ನನಗೆ ಕುತ್ತು ಬಂದಿದೆ. ಕರಿಮಣಿ ಸರಕ್ಕೆ ಕುತ್ತು ಬಂದಿದೆ. ಸಂಪತ್ತು ಹಂಚಿಕೆ ಆಗಲಿದೆ ಎಂದು ಹೇಳುವ ಮೂಲಕ ಹತಾಶೆ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಬಳಿಕದ ಭಾರತದಲ್ಲಿ ಯಾವೊಬ್ಬ ಪ್ರಧಾನಿಯೂ ಇಂತಹ ಹತಾಶೆಯ ಮಾತುಗಳನ್ನಾಡಿಲ್ಲ ಎಂದರು.
Related Articles
Advertisement
ಮಂಜುನಾಥ ಭಂಡಾರಿ ಪ್ರಶ್ನೆಗಳುಕಾಂಗ್ರೆಸ್ ಅವಧಿ 2014ರವರೆಗೆ ದೇಶದ ಸಾಲ 55 ಲಕ್ಷ ಕೋಟಿ ಇದ್ದರೆ, ಬಿಜೆಪಿ ಬಂದ 10 ವರ್ಷಗಳಲ್ಲೇ ದೇಶದ ಸಾಲ 150 ಲಕ್ಷ ಕೋ.ರೂ.ಗಳಾಗಿದ್ದು ಹೇಗೆ? ಕಪ್ಪು ಹಣ ತರಲು 60 ದಿನ ಕೊಡಿ ಎಂದವರಿಗೆ 10 ವರ್ಷವಾದರೂ ಯಾಕೆ ತರಲು ಸಾಧ್ಯವಾಗಿಲ್ಲ? ಚುನಾವಣೆ ದಿನಾಂಕ ಹತ್ತಿರವಾದಂತೆ ಕೇಂದ್ರ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿದ್ದು ಯಾಕೆ? ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾದ ಮೋದಿ ಅವರು ಮಾಂಗಲ್ಯಸರ ಸಹಿತ ಭಾವನಾತ್ಮಕ ವಿಷಯವಾಗಿ ಹತಾಶರಾಗಿದ್ದು ಸೋಲಿನ ಭಯವೇ? ಅಬಕಾರಿ ನೀತಿ ಸರಿಯಿಲ್ಲವೆಂಬ ಕಾರಣಕ್ಕೆ ಅರವಿಂದ ಕೇಜ್ರಿವಾಲ್ ಬಂಧನವಾದರೆ, ಚುನಾವಣೆ ಬಾಂಡ್ ಸರಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಯಾರ ಬಂಧನವಾಗಬೇಕಿತ್ತು? ಜನರ ಅಭಿವೃದ್ಧಿ ವಿಷಯದಲ್ಲಿ ನಡೆಯಬೇಕಾದ ಚುನಾವಣೆಯನ್ನು ಮಂದಿರ, ಮಸೀದಿ ವಿಷಯವನ್ನು ಮುನ್ನೆಲೆಗೆ ತರುವುದು ಸಮ್ಮತವೇ?
ಕಾಂಗ್ರೆಸ್‌ನಲ್ಲಿದ್ದಾಗ ಭ್ರಷ್ಟಾಚಾರಿಗಳು, ಬಿಜೆಪಿಗೆ ಹೋದಾಗ ಅವರು ಸಭ್ಯರು ಆಗುವುದು ಹೇಗೆ?