Advertisement

ಕರಕುಶಲವೇ ಕ್ಷೇಮ! 

01:45 PM May 15, 2018 | |

ಮಣ್ಣಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಪರಿಕಲ್ಪನೆ ಸಾವಿರಾರು ವರ್ಷಗಳಿಂದಲೂ ಇದೆ. ಶಿಲಾಯುಗದ ಮಾನವ ಮೊದಲಿಗೆ ಬೆಂಕಿಯ ಬಳಕೆಯ ಬಗ್ಗೆ ತಿಳಿದುಕೊಂಡ ಆನಂತರ ಮಣ್ಣಿನ ಬಳಕೆಯನ್ನು ಕಲಿತ. ಮಡಕೆ- ಕುಡಿಕೆಗಳನ್ನು ತಯಾರಿಸಿ, ಅದನ್ನು ನಿತ್ಯೋಪಯೋಗಿ ವಸ್ತುವಿನಂತೆ ಬಳಸಲು ಶುರುಮಾಡಿದ. ಕಾಲಾಂತರದಲ್ಲಿ ಲೋಹದ ಬಳಕೆ ನಿರಂತರವಾದಾಗ, ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಕುಸಿಯಿತು. ಈಗ ಮತ್ತೆ ಕಾಲ ಒಂದು ರೌಂಡ್‌ ತಿರುಗಿದೆ. ಮಣ್ಣಿನ  ವಸ್ತುಗಳಿಗೆ ಡಿಮ್ಯಾಂಡ್‌ ಬಂದಿದೆ. ಅದೀಗ ಸೆರಾಮಿಕ್‌ ಕಲೆ ಎಂದು ಹೆಸರಾಗಿದೆ. ಮಣ್ಣು ಸೇರಿದಂತೆ, ವಿವಿಧ ವಸ್ತುಗಳಿಂದ ತಯಾರಿಸಿದ ಕರಕುಶಲ ವಸ್ತುಗಳನ್ನು ತಯಾರಿಸುವವರು ಸೆರಾಮಿಕ್‌ ಆರ್ಟಿಸ್ಟ್‌ಗಳು. ಈ ಮಾದರಿಯ ಕಲಾವಿದರಾಗಬೇಕೆಂದರೆ…

Advertisement

ದಶಕಗಳ ಹಿಂದೆ, ಹಳ್ಳಿ ಮನೆಯಲ್ಲಿ ಮಣ್ಣಿನ ಮಡಕೆಯನ್ನು ಒಡೆದು ಹಾಕಿದರೆ ದೊಡ್ಡ ರಾದ್ಧಾಂತವೇ ನಡೆಯುತ್ತಿತ್ತು. ಮತ್ತೆ ವಾರದ ಸಂತೆಗೆ ಹೋಗಿ ಹೊಸ ಮಡಕೆಗೆ ಮನೆ ಯಜಮಾನ ಹಣ ಹೊಂದಿಸುವುದೂ ದೊಡ್ಡ ಸಾಹಸವಾಗುತ್ತಿತ್ತು. ಮನೆಯ ನಿತ್ಯೋಪಯೋಗಿ ವಸ್ತುಗಳಿಂದ ಆರಂಭಿಸಿ, ಧಾನ್ಯ ತುಂಬುವ ತನಕ ಮಣ್ಣಿನ ಪರಿಕರಗಳೇ ಬಳಕೆಯಾಗುತ್ತಿದ್ದವು. ಈ ಕಲ್ಪನೆ ದೇಶದಿಂದ ದೇಶಕ್ಕೆ ಭಿನ್ನವಾಗಿತ್ತು. ಭಾರತದಲ್ಲಿ ಮಡಕೆ, ಹೂಜಿಗಳಿದ್ದರೆ, ಚೀನಾ-ಜಪಾನ್‌ಗಳಲ್ಲಿ ಪಿಂಗಾಣಿ ವಸ್ತುಗಳಿದ್ದವು. ಇಟಲಿಯಲ್ಲಿ ಮಾರ್ಬಲ್‌ ಮಾದರಿ ವಸ್ತುಗಳ ಬಳಕೆಯಿತ್ತು. ಲೋಹಗಳ ಬಳಕೆ ಹೆಚ್ಚಿದಂತೆ, ಮಣ್ಣಿನ ವಸ್ತುಗಳ ಬಳಕೆ ಇಳಿಯಿತು. 

  ಇತ್ತೀಚೆಗೆ ಮತ್ತೆ ಮಣ್ಣನ್ನು ಪ್ರಧಾನವಾಗಿಟ್ಟುಕೊಂಡು ಗೃಹೋಪಯೋಗಿ, ಅಲಂಕಾರಿಕ ವಸ್ತುಗಳನ್ನು ನಿರ್ಮಿಸಿಕೊಡುವ ಪ್ರಬಲ ಮಾಧ್ಯಮವೊಂದು ಬೆಳೆದಿದೆ. ಗಾಜು, ಮರಗಳು, ಬಣ್ಣಗಳನ್ನು ಬಳಸಿ ಅಲಂಕಾರಿಕ ಪ್ರದರ್ಶನದ ವಸ್ತುಗಳನ್ನು ವಿವಿಧ ವಿನ್ಯಾಸಗಳಲ್ಲಿ ತಯಾರಿಸುವ ಮಂದಿಯೇ ಸೆರಾಮಿಕ್‌ ಆರ್ಟಿಸ್ಟ್‌ಗಳು. ನಿತ್ಯೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಗೋಡೆಯ ಅಲಂಕಾರ, ಗೃಹಾಲಂಕಾರ, ಮಕ್ಕಳ ಆಟಿಕೆ ಇತ್ಯಾದಿಯಾಗಿ ಅನೇಕ ವಸ್ತುಗಳನ್ನು ತಯಾರಿಸುವವರು ಸೆರಾಮಿಕ್‌ ಕಲಾವಿದರು. 

ಶಿಕ್ಷಣ ಹೀಗಿರಲಿ…
ಯಾವುದೇ ವಿಷಯದಲ್ಲಿ ಪಿಯು ಓದಿನ ಬಳಿಕ ಪದವಿಯಲ್ಲಿ ಬ್ಯಾಚುಲರ್‌ ಆಫ್ ಫೈನ್‌ ಆರ್ಟ್‌, ಸೆರಾಮಿಕ್‌ ಆರ್ಟ್‌ ಟ್ರೆ„ನಿಂಗ್‌ ಪಡೆದು ಸೆರಾಮಿಕ್‌ ಆರ್ಟಿಸ್ಟ್‌ ಆಗಬಹುದು. ಮತ್ತೂಂದು ಮಾರ್ಗದಲ್ಲಿ ಪಿಯು ಬಳಿಕ ಸೆರಾಮಿಕ್‌ ಸ್ಟುಡಿಯೋದಲ್ಲಿ ಅಪ್ರಂಟಿಸ್‌ ಆಗಿ ಕಾರ್ಯ ನಿರ್ವಹಿಸಿ ಸೆರಾಮಿಕ್‌ ಅರ್ಟಿಸ್ಟ್‌ ಆಗಬಹುದು. ಅಲ್ಲದೆ ಇನ್ನೊಂದು ವಿಧದಲ್ಲಿ ಪಿಯು ಬಳಿಕ ಎನ್‌ಐಡಿ ಪ್ರವೇಶ ಪರೀಕ್ಷೆ ಬರೆದು ಪದವಿಯಲ್ಲಿ ಸೆರಾಮಿಕ್‌ ಆ್ಯಂಡ್‌ ಗ್ಲಾಸ್‌ ಡಿಸೈನ್‌ ಕೋರ್ಸ್‌ ಮಾಡಿಯೂ ಗುರಿ ಸಾಧಿಸಬಹುದು.

ಏನೇನು ಕೌಶಲ ಬೇಕು?
– ವಿವಿಧ ಬಗೆಯ ಮಣ್ಣುಗಳ ಗುಣಾವಗುಣಗಳ ಬಗ್ಗೆ ತಿಳಿವಳಿಕೆ
-ಮಣ್ಣು ಮತ್ತು ಶಾಖ ಬೇಯುವಿಕೆ ಪ್ರಮಾಣದ ಅರಿವು
– ಮಣ್ಣು, ಗಾಜು, ಪಾಟ್‌, ಚರ್ಮ, ರತ್ನಗಳ ಬಳಕೆ ಬಗೆಗೆ ಜಾnನ
– ಬಣ್ಣಗಳ ಮಿಶ್ರಣ ಮತ್ತು ಮಣ್ಣಿನ ಮಿಶ್ರಣ ಕುರಿತ ಜಾnನ
– ಕಲ್ಪನಾ ಶಕ್ತಿ, ಬೆಂಕಿಯ ಬಳಕೆ ಬಗೆಗೆ ಅರಿವು 
– ಸಮಯಪ್ರಜ್ಞೆ ಮತ್ತು ಪ್ರಕೃತಿ ಸೌಂದರ್ಯದ ತಿಳಿವಳಿಕೆ

Advertisement

ಎಲ್ಲೆಲ್ಲಿ ಅವಕಾಶಗಳು? 
ಆರ್ಟ್‌ ಗ್ಯಾಲರಿಗಳು, ಆರ್ಟ್‌ ಸ್ಕೂಲ್‌ ಆ್ಯಂಡ್‌ ಕಾಲೇಜು, ಸೆರಾಮಿಕ್‌ ಉತ್ಪನ್ನ 
ಕಾರ್ಖಾನೆಗಳು ಮತ್ತು ಸ್ಟುಡಿಯೋಗಳು, ಕಾಟೇಜ್‌ ಕೈಗಾರಿಕೆಗಳು, ಕ್ರಾಫ್ಟ್ ಎಂಪೋರಿಯಂ, ನ್ಯಾಷನಲ್‌ ಮ್ಯೂಜಿಯಮ್‌

ಕಲಿಯುವುದು ಎಲ್ಲಿ?
– ವಿಶ್ವೇಶ್ವರಯ್ಯ ಟೆಕ್ನಾಲಜಿಲಿಕಲ್‌  ಕಾಲೇಜು ಬೆಂಗಳೂರು, ಗುಲ್ಬರ್ಗಾ ಮತ್ತು ಮೈಸೂರು
– ಎಚ್‌ಇಕೆ ಸೊಸೈಟಿ ಪಿಡಿಎ ಕಾಲೇಜ್‌ ಆಫ್ ಎಂಜಿನಿಯರಿಂಗ್‌, ಗುಲ್ಬರ್ಗಾ
– ಕ್ಲೈ ಸೊಲ್ಯೂಷನ್‌ ಆರ್ಟ್‌ ಸ್ಟುಡಿಯೋ ಪ್ರೈವೇಟ್‌ ಲಿಮಿಟೆಡ್‌, ಬೆಂಗಳೂರು
– ಎಂಐಡಿಎಸ್‌ ಟಚ್‌- ಆರ್ಟ್‌ ಆ್ಯಂಡ್‌ ಕ್ರಾಫ್ಟ್ ಗ್ಲಾಸಸ್‌, ಆರ್‌.ಟಿ.ನಗರ, ಬೆಂಗಳೂರು

– ಅನಂತನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next