Advertisement

ವ್ಯಾಜ್ಯ ರಹಿತ ನೆಮ್ಮದಿ ಜೀವನ ನಡೆಸಿ; ಸುರೇಶ ಸವದಿ

06:20 PM Sep 18, 2021 | Nagendra Trasi |

ಮುದ್ದೇಬಿಹಾಳ: ಸಾರ್ವಜನಿಕರು ಉಚಿತವಾಗಿ ಲಭ್ಯವಿರುವ ಕಾನೂನು ಸೇವೆಗಳ ಮತ್ತು ಜನತಾ ನ್ಯಾಯಾಲಯಗಳ ಸದುಪಯೋಗ ಪಡೆದುಕೊಂಡು ವ್ಯಾಜ್ಯ ರಹಿತ ನೆಮ್ಮದಿ ಜೀವನ ನಡೆಸಲು ಮುಂದಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಆಗಿರುವ ಜೆಎಂಎಫ್‌ಸಿ ಕೋರ್ಟ್‌ ಸಿವಿಲ್‌ ನ್ಯಾಯಾಧೀಶರಾದ ಸುರೇಶ ಸವದಿ ಹೇಳಿದರು.

Advertisement

ಅಹಿಲ್ಯಾದೇವಿ ಹೋಳ್ಕರ್‌ ಶಿಕ್ಷಣ ಸಂಸ್ಥೆಯ ಅಭ್ಯುದಯ ಸೈನ್ಸ್‌ ಪಿಯು ಕಾಲೇಜು, ಎಂಜಿಎಂಕೆ ಕಾಲೇಜು ಹಾಗೂ ಹಡಲಗೇರಿ ಮತ್ತು ಬಿದರಕುಂದಿ ಗ್ರಾಮಗಳಲ್ಲಿ ಸರ್ವೋತ್ಛ ನ್ಯಾಯಾಲಯ, ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ನಡೆದ ಉಚಿತ ಕಾನೂನು ಸೇವೆಗಳ ಮತ್ತು ಜನತಾ ನ್ಯಾಯಾಲಯದ ಪ್ರಯೋಜನಗಳ ಅರಿವು-ನೆರವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರತಿಯೊಂದು ಕೋರ್ಟ್‌ನಲ್ಲಿ ಕಾನೂನು ಸೇವಾ ಸಮಿತಿ ಇರುತ್ತದೆ. ಇದು ಬಡವರಿಗೆ ಉಚಿತ ಕಾನೂನು ಸಲಹೆ, ಸಹಕಾರ, ನೆರವು ನೀಡುತ್ತದೆ. ಸಾರ್ವಜನಿಕರು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಪಡೆಯಲು ಅಲ್ಲಿ ಅವಕಾಶವಿದೆ. ಬಡವರಿಗೆ ಹಣಕಾಸಿನ ತೊಂದರೆಯಿಂದ ವಕೀಲರನ್ನು ಸಂಪರ್ಕಿಸಿ ಶುಲ್ಕ ನೀಡಿ ವಾದ ನಡೆಸುವುದು ಸಾಧ್ಯವಾಗದ ಕಾರಣ ಇಂಥ ಸಮಿತಿಗಳನ್ನು ಸುಪ್ರೀಂಕೋರ್ಟ್‌, ಹೈಕೋರ್ಟ್‌ಗಳಿಂದ ಸ್ಥಾಪಿಸಲಾಗಿದೆ. ಪ್ರತಿಯೊಬ್ಬರ ಮನೆಗೆ ನ್ಯಾಯ ಒದಗಿಸಲು ಇದು ಪ್ರಯೋಜನಕಾರಿ ಎಂದರು.

ಅಭ್ಯುದಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆದ ಜೆಎಂಎಫ್‌ಸಿ ಕೋರ್ಟ್‌ ಹಿರಿಯ ಸಿವಿಲ್‌ ನ್ಯಾಯಾಧಿಶರಾದ ಲಕ್ಷ್ಮೀ ಗರಗ ಸಸಿಗೆ ನೀರೆರೆದು ಉದ್ಘಾಟಿಸಿದರು. ಹಿರಿಯ ನ್ಯಾಯವಾದಿಗಳಾದ ಎಂ.ಎಚ್‌. ಹಾಲಣ್ಣವರ್‌, ಎನ್‌.ಬಿ. ಮುದ್ನಾಳ ಉಚಿತ ಕಾನೂನು ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್‌. ಕ್ವಾರಿ, ಅಹಿಲ್ಯಾದೇವಿ ಹೋಳ್ಕರ್‌ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್‌. ಮದರಿ, ಹಿರಿಯ ನ್ಯಾಯವಾದಿಗಳಾದ ಎಂ.ಎಸ್‌. ಅಮಲ್ಯಾಳ, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ರವಿ ಜಗಲಿ ಸೇರಿದಂತೆ ಇತರರಿದ್ದರು.

Advertisement

ಹಡಲಗೇರಿ: ಹಡಲಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಬಿ.ಆರ್‌.ನಾಡಗೌಡ ಬಾಲ್ಯ ವಿವಾಹದ ದುಷ್ಪರಿಣಾಮಗಳು ಮತ್ತು ರಕ್ಷಣೆಗೆ ಇರುವ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು. ಅಪರ ಸರ್ಕಾರಿ ವಕೀಲರಾದ ಎಂ.ಆರ್‌.ಪಾಟೀಲ, ಎಪಿಪಿ ಬಿ.ಎ. ಆಹೇರಿ, ಗ್ರಾಪಂ ಸದಸ್ಯ ಹಣಮಂತ ತಳ್ಳಿಕೇರಿ, ಮುಖಂಡ ವಿಠuಲ ಹರಿಂದ್ರಾಳ ಮತ್ತಿತರರು ಇದ್ದರು. ಎಂ.ಬಿ. ಗುಡಗುಂಟಿ ನಿರ್ವಹಿಸಿದರು. ಇಲ್ಲಿ ನಡೆಯುತ್ತಿದ್ದ ಲಸಿಕಾ ಸ್ಥಳಕ್ಕೆ ನ್ಯಾಯಾ ಧೀಶರು ಭೇಟಿ ನೀಡಿ ಪರಿಶೀಲಿಸಿದರು. ಎಂಜಿಎಂಕೆ ಶಾಲೆ ಮತ್ತು ಬಿದರಕುಂದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ತಜ್ಞ ವಕೀಲರಿಂದ ವಿವಿಧ
ಕಾನೂನು ಸೇವೆಗಳ ತಿಳಿವಳಿಕೆ ಹಾಗೂ ಕೋವಿಡ್‌ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕೊರೊನಾ ಭೀಕರತೆಗೆ ಸಾಕಷ್ಟು ಜನರು ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ನಿಯಮ ಪಾಲಿಸುವ ಜೊತೆಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಚಿಕ್ಕ ಮಕ್ಕಳಿಗೆ ರಕ್ಷಣೆಗೆ ಪಾಲಕರು ಹೆಚ್ಚಿನ ಆದ್ಯತೆ ಕೊಡಬೇಕು.
ಸುರೇಶ ಸವದಿ, ನ್ಯಾಯಾಧೀಶ

Advertisement

Udayavani is now on Telegram. Click here to join our channel and stay updated with the latest news.

Next