Advertisement

ಉದ್ಯಾವರ : ಲಿವಾ ಮಿಸ್‌ ದಿವಾ ವಿಜೇತೆ ಆ್ಯಡ್ಲಿನ್‌ ಕ್ಯಾಸ್ತೆಲಿನೋ ಅಭಿನಂದನ ಮೆರವಣಿಗೆ

11:26 PM Feb 29, 2020 | Sriram |

ಉದ್ಯಾವರ: ಲಿವಾ ಮಿಸ್‌ ದಿವಾ ಯೂನಿವರ್ಸ್‌ 2020 ಕಿರೀಟ ಮುಡಿಗೇರಿಸಿಕೊಂಡ ಉದ್ಯಾವರ ಕೊರಂಗ್ರಪಾಡಿಯ ಮಿಸ್‌ ಆ್ಯಡ್ಲಿನ್‌ ಕ್ಯಾಸ್ತೆಲಿನೋ ಅವರಿಗೆ ಹುಟ್ಟೂರಿನ ಅಭಿನಂದನೆಗೆ ಮುನ್ನ ಉದ್ಯಾವರ ಜೈ ಹಿಂದ್‌ ಕಾಂಪ್ಲೆಕ್ಸ್‌ ಬಳಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.

Advertisement

ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿ ಶೇಖರ್‌, ಉಪಾಧ್ಯಕ್ಷ ರಿಯಾಜ್‌ ಪಳ್ಳಿ, ಸಮಾಜ ಸೇವಕ, ಹಲೀಮಾ ಸಾಬುj ಟ್ರಸ್ಟ್‌ ಅಧ್ಯಕ್ಷ ಜಲೀಲ್‌ ಸಾಹೇಬ್‌ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆ ಉದ್ಯಾವರ ಪೇಟೆಯಿಂದ ಮೇಲ್ಪೇಟೆ ಗುಡ್ಡೆ ಅಂಗಡಿ ಮೂಲಕ ಸಾಗಿ ಬಂದು ಉದ್ಯಾವರ ಸಂತ ಫ್ರಾನ್ಸಿಸ್‌ ಜೇವಿಯರ್‌ ದೇವಾಲಯದ ವಠಾರದಲ್ಲಿ ಸಮಾಪನಗೊಂಡಿತು. ಕಂಬಳದ ಕೋಣಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾ ಗಿದ್ದವು. ಬಳಿಕ ಕ್ಯಾಸ್ತೆಲಿನೋ ಅವರು ಚರ್ಚಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಧರ್ಮಗುರು ರೆ|ಫಾ| ಸ್ಟಾನಿ ಬಿ. ಲೋಬೋ, ಚರ್ಚ್‌ ಉಪಾಧ್ಯಕ್ಷ ಮೆಲ್ವಿನ್‌ ನೊರೋನ್ಹಾ, ಮಿಸ್‌ ಆ್ಯಡ್ಲಿನ್‌ ಕ್ಯಾಸ್ತೆಲಿನೋ ಅವರ ತಾಯಿ ಮೀರಾ ಕ್ಯಾಸ್ತೆಲಿನೋ, ಲಾರೆನ್ಸ್‌ ಡೇಸಾ, ಸ್ಟೀವನ್‌ ಕುಲಾಸೋ, ಊರ ಗಣ್ಯರು, ಗ್ರಾಮಪಂಚಾಯತ್‌ ಸದಸ್ಯರು, ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next