Advertisement

ಕಾನೂನು ವ್ಯಾಪ್ತಿಗೆ ಬಾರದ ಲಿಟಲ್‌ಕಿಡ್ಸ್‌, ಡೇಕೇರ್‌ಗಳು

10:53 AM Nov 13, 2021 | Team Udayavani |

ನೆಲಮಂಗಲ: ಲಿಟಲ್‌ ಕಿಡ್ಸ್‌ ಹಾಗೂ ಡೇ ಕೇರ್‌ಗಳನ್ನು ಕಾನೂನು ವ್ಯಾಪ್ತಿಗೆ ತರುವಲ್ಲಿ ವಿಫ‌ಲವಾಗಿರುವ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರವಾಗಿ ನಡೆಸುತ್ತಿರುವುದು ಕಂಡು ಬಂದರೂ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ.

Advertisement

ಅನುಮಾನ: ಜಿಲ್ಲೆಯ ನಾಲ್ಕು ತಾಲೂಕಿನ ವಿವಿಧ ಬಡಾವಣೆಯಲ್ಲಿ ಸಾಕಷ್ಟು ಲಿಟಲ್‌ ಕಿಡ್ಸ್‌ ಹಾಗೂ ಡೇ ಕೇರ್‌ಗಳು ಕಾರ್ಯನಿರ್ವಹಿಸುತ್ತಿದ್ದು 2.5 ವರ್ಷದಿಂದ 5ವರ್ಷದ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:- ಭಾರತದಲ್ಲಿ 24ಗಂಟೆಗಳಲ್ಲಿ 11,850 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ

ಒಂದು ತಿಂಗಳಿಗೆ ಲಕ್ಷಾಂತರ ರೂ. ಹಣವನ್ನು ಪಡೆಯುವ ಲಿಟಲ್‌ಕಿಡ್ಸ್‌ ಹಾಗೂ ಡೇ ಕೇರ್‌ಗಳು ಇಲ್ಲಿಯವರೆಗೂ ಯಾವ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಮಾಹಿತಿ ಅಧಿಕಾರಿಗಳ ವಲಯದಲ್ಲಿಯೇ ಉತ್ತರವಿಲ್ಲ, ಕಾನೂನು ಪಾಲನೆ ಮಾಡದೇ ಹಗಲು ದರೋಡೆ ಮಾಡುತ್ತಿರುವ ಇಂತಹ ಸಂಸ್ಥೆಗಳ ಜತೆ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು ಇದಕ್ಕೆ ಉದಾಹರಣೆ ಎಂಬಂತೆ ಕಾನೂನು ಉಲ್ಲಂಘನೆ ಮಾಡಿದ್ದರೂ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಪುಷ್ಠಿ ನೀಡಿದಂತಾಗಿದೆ.

ಸ್ಥಳೀಯ ಅನುಮತಿ ಇಲ್ಲ: ನಗರಸಭೆ, ಪುರಸಭೆ ಅಥವಾ ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಉದ್ಯೋಗ ಆರಂಭ ಮಾಡುವುದಾಗಲಿ, ಶಿಕ್ಷಣ ಸಂಸ್ಥೆಗಳ ಆರಂಭ ಮಾಡಲು ಸ್ಥಳೀಯವಾಗಿ ಅನುಮತಿ ಪಡೆದುಕೊಳ್ಳಬೇಕಾಗಿದೆ. ಆದರೆ ಡೇ ಕೇರ್‌ ಹಾಗೂ ಲಿಟಲ್‌ಕಿಡ್ಸ್‌ ಲಕ್ಷಾಂತರ ವ್ಯವಹಾರ ನಡೆ ಯುವ ಕಲಿಕಾ ಸಂಸ್ಥೆಗಳಾಗಿದ್ದು ಸ್ಥಳೀಯವಾಗಿಯೂ ಅನುಮತಿ ಪಡೆಯದಿರುವುದು ಅನುಮಾ ನಕ್ಕೆ ಕಾರಣವಾಗಿದೆ.

Advertisement

ಕೊರೊನಾ ಸಂಕಷ್ಟದಲ್ಲಿಯೇ ಆರಂಭ: ಕೊರೊನಾ ಸಂಕಷ್ಟದಿಂದ ಶಾಲಾ ಕಾಲೇಜುಗಳೇ ಆರಂಭವಾಗದ ಸಮಯದಲ್ಲಿ ಲಿಟಲ್‌ ಕಿಡ್ಸ್‌ ಹಾಗೂ ಡೇ ಕೇರ್‌ ಗಳು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿ ಸುತ್ತಿವೆ. ಸಣ್ಣ ಸಣ್ಣ ಮಕ್ಕಳ ಜೀವದ ಜತೆ ಚೆಲ್ಲಾಟವಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುವುದಾಗಲಿ, ಕಾನೂನು ವ್ಯಾಪ್ತಿಗೆ ತರುವ ಕೆಲಸವಾಗಲಿ ಮಾಡದಿರುವುದು ಬೇಸರದ ಸಂಗತಿ.

ಪಟ್ಟಿ ಮಾಡಿಲ್ಲ ಜಿಲ್ಲಾಧಿಕಾರಿ ಸೂಚನೆಗೆ ಕಿಮ್ಮತ್ತಿಲ್ಲ: ಡೇ ಕೇರ್‌ ಹಾಗೂ ಲಿಟಲ್‌ಕಿಡ್ಸ್‌ ಯಾವ ಇಲಾಖೆಗಳಿಗೂ ಬರುವುದಿಲ್ಲ ಎಂದು ಹೇಳಲಾಗುವು ದಿಲ್ಲ. ಕೊನೆಯದಾಗಿ ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ ಗಮನಿಸಬೇಕು. ಆ ಕೆಲಸವನ್ನು ಈಗಾಗಲೇ ಮಾಡಲಾಗುತ್ತಿದೆ. ಪಟ್ಟಿ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀನಿವಾಸ್‌ ಸೂಚನೆ ನೀಡಿದ್ದರು. ಆದರೆ, ಇಲ್ಲಿಯವರೆಗೂ ಕೇರ್‌ಗಳನ್ನು ಪಟ್ಟಿ ಮಾಡುವುದು, ಕಾನೂನು ವ್ಯಾಪ್ತಿಗೆ ತರುವುದು ಹಾಗೂ ಅದರ ನಿಯಮ ತಿಳಿಸುವ ಕೆಲಸವನ್ನೂ ಮಾಡಿಲ್ಲದಿರುವುದು ಬೇಸರದ ಸಂಗತಿ.

“ಲಿಟಲ್‌ಕಿಡ್ಸ್‌ ಹಾಗೂ ಡೇಕೇರ್‌ಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಯಾವ ಇಲಾಖೆಗೆ ಬರುವುದಿಲ್ಲ ಎಂದರೆ ಕೊನೆಯದಾಗಿ ನಮ್ಮ ಇಲಾಖೆಗೆ ಬರುತ್ತದೆ. ನಾವು ಅದರ ಬಗ್ಗೆ ಕ್ರಮಕೈಗೊಳ್ಳುತ್ತೇವೆ.” – ಶ್ರೀನಿವಾಸ್‌, ಜಿಲ್ಲಾಧಿಕಾರಿ.

“ಲಿಟಲ್‌ಕಿಡ್ಸ್‌ ಹಾಗೂ ಡೇಕೇರ್‌ಗಳನ್ನು ಪಟ್ಟಿ ಮಾಡಲು ತಿಳಿಸಲಾಗಿದೆ. ಶೀಘ್ರಅವರು ಪಡೆದಿರುವ ಅನುಮತಿ ಅಥವಾ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆಯೇ ಎಂಬುದರ ಬಗ್ಗೆ ತನಿಖೆ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತದೆ.” – ಮಂಜುನಾಥ್‌, ತಹಶೀಲ್ದಾರ್‌, ನೆಲಮಂಗಲ.

Advertisement

Udayavani is now on Telegram. Click here to join our channel and stay updated with the latest news.

Next