Advertisement

ಸ್ವಲ್ಪ ನಿಲ್ಲಿ, ಇದು ನೆಲನೆಲ್ಲಿ

07:25 PM Oct 22, 2019 | Lakshmi GovindaRaju |

ನೆಲ್ಲಿಕಾಯಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ, ಹೆಚ್ಚಿನವರಿಗೆ ನೆಲನೆಲ್ಲಿಯ ಬಗ್ಗೆ ಗೊತ್ತಿಲ್ಲ. ನೆಲನೆಲ್ಲಿ ಅಥವಾ ಕೀಳುನೆಲ್ಲಿ ಎಂದು ಕರೆಯಲ್ಪಡುವ ಗಿಡ, ಹಳ್ಳಿಗಳ ಕಡೆ ಗದ್ದೆ/ ತೋಟಗಳಲ್ಲಿ ಕಳೆಯಂತೆ ಬೆಳೆಯುತ್ತದೆ. ಸರಿಯಾಗಿ ಗಮನಿಸದಿದ್ದರೆ, ಕಳೆಯ ಮಧ್ಯೆ ಕಳೆದೇ ಹೋಗಿಬಿಡುವ ಔಷಧೀಯ ಗಿಡ ಇದು.

Advertisement

ನೆಲ್ಲಿಯ ಎಲೆಗಳನ್ನೇ ಹೋಲುವುದರ ಜೊತೆಗೆ, ನೆಲ್ಲಿ ಕಾಯಿಯನ್ನು ಹೋಲುವ, ಸಾಸಿವೆ ಗಾತ್ರದ ಕಾಳುಗಳು ಎಲೆಯ ಹಿಂಬದಿಗೆ ಅಂಟಿ ಕೊಂಡಿರುತ್ತವೆ. ಹಾಗಾಗಿ, ಈ ಗಿಡಕ್ಕೆ ನೆಲ ನೆಲ್ಲಿ ಎಂಬ ಹೆಸರು. ಹಸಿರು-ಕೆಂಪು ಮಿಶ್ರಿತ ಕಾಂಡದ ಈ ಗಿಡವು ಸಂಸ್ಕೃತದಲ್ಲಿ ಭೂಮ್ಯಾಮಲಕ, ಹಿಂದಿಯಲ್ಲಿ ಭೂ ಆಮ್ಲ ಎಂದು ಕರೆಸಿಕೊಳ್ಳುತ್ತದೆ. ಕೇವಲ ಹೆಸರಷ್ಟೇ ಅಲ್ಲ, ಗುಣದಲ್ಲಿಯೂ ಇದು ಬೆಟ್ಟದ ನೆಲ್ಲಿ ಯನ್ನು ಹೋಲುತ್ತದೆ. ಈ ಸಸ್ಯದ ಆಯುರ್ವೇದ ಗುಣಗಳು ಹೀಗಿವೆ.

-ನೆಲನಲ್ಲಿ ಸಸ್ಯದ ಕಷಾಯವನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸಿದರೆ ಅತಿಸಾರ ಭೇದಿ ನಿಲ್ಲುತ್ತದೆ.

-ನೆಲನೆಲ್ಲಿ ಸಸ್ಯದ ರಸವನ್ನು ಹಾಲು ಅಥವಾ ಮಜ್ಜಿಗೆಯೊಂದಿಗೆ ಬೆರೆಸಿ ಸೇವಿಸುವುದರಿಂದ ಕಾಮಾಲೆ ರೋಗ ನಿಯಂತ್ರಣಕ್ಕೆ ಬರುತ್ತದೆ (ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು.)

-ಯುನಾನಿ ವೈದ್ಯ ಪದ್ಧತಿಯಲ್ಲಿ, ನೆಲನೆಲ್ಲಿ ಗಿಡದ ರಸವನ್ನು ಕಜ್ಜಿ, ಗಾಯಗಳಿಗೆ ಲೇಪಿಸಲಾಗುತ್ತದೆ.

Advertisement

-ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸಿದರೆ ಚರ್ಮರೋಗಗಳು ಗುಣವಾಗುತ್ತದೆ.

-ನೆಲನೆಲ್ಲಿ ಸೊಪ್ಪಿನ ಕಷಾಯಕ್ಕೆ, ಚಿಟಿಕೆ ಇಂಗನ್ನು ತುಪ್ಪದಲ್ಲಿ ಹುರಿದು ಬೆರೆಸಿ ಕುಡಿದರೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ.

-ಮುಟ್ಟಿನ ದಿನಗಳಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ನೆಲನೆಲ್ಲಿ ಸೊಪ್ಪಿನ ಚಟ್ನಿ ಅಥವಾ ಕಷಾಯ ಸೇವಿಸಬೇಕು.

-ನೆಲ ನೆಲ್ಲಿಯ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next