ಬೆಂಗಳೂರು: ಗ್ರೀಸ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ “ಲಿಟಲ್ ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದ ಭಾರತೀಯ ಮಕ್ಕಳ ಪೈಕಿ ಬೆಂಗಳೂರಿನ ಸೋಫಿಯಾ ಹೈಸ್ಕೂಲ್‌ನ 7ನೇ ತರಗತಿಯ ಪೂರ್ವಿ ಜಿ.ವಿ., 12 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ “ಬೆಸ್ಟ್ ಪರ್‌ಫಾರ್ಮೆನ್ಸ್ ಟ್ಯಾಲೆಂಟ್ ಅವಾರ್ಡ್’ಗೆ ಪಾತ್ರರಾಗಿದ್ದಾರೆ.
ದೀವಾ ಫ್ಯಾಷನ್ ಗ್ರೂಪ್ ಹಾಗೂ ಉಕ್ರೇನ್ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ ಅವರು 17
ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ “ಲಿಟಲ್ ಮಿಸ್ ವರ್ಲ್ಡ್’ ಸ್ಪರ್ಧೆ ಆಯೋಜಿಸುತ್ತಿದ್ದಾರೆ. ಬೆಂಗಳೂರು ಹಾಗೂ ಚೆನ್ನೈನಲ್ಲಿ ನಡೆದ ಆಡಿಷನ್ ಬಳಿಕ ಪೂರ್ವಿ, ಗ್ರೀಸ್‌ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಹೊಯ್ಸಳ ವಾಸ್ತುಶಿಲ್ಪ ಶೈಲಿಯ ವಸOಉ ವಿನ್ಯಾಸದೊಂದಿಗೆ ಕಾಣಿಸಿಕೊಂಡ ಪೂರ್ವಿ, ದೇಶೀಯ ಕಥಕ್ ಹಾಗೂ ಸಮಕಾಲೀನ ನೃತ್ಯ ಪ್ರದರ್ಶಿಸಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. 12 ವರ್ಷ ದೊಳಗಿನ ಮಕ್ಕಳ ವಿಭಾಗದಲ್ಲಿ ಪೂರ್ವಿ, “ಬೆಸ್ಟ್ ಪರ್‌ಫಾರ್ಮೆನ್ಸ್ ಅವಾರ್ಡ್’ ಮುಡಿಗೇರಿಸಿಕೊಂಡರು.