Advertisement
ಇಂದಿನ ಮಕ್ಕಳಿಗೂ ಅಷ್ಟೇ. ಮೊಬೈಲೇ ಪ್ರಪಂಚವಾಗಿದೆ. ಸಣ್ಣ ಸಣ್ಣ ಕತೆಗಳ ಪರಿಚಯವಿಲ್ಲ. ಹೊಸ ವಿಷಯಗಳ ತಿಳಿಯುವ ಮನಸ್ಸಿಲ್ಲ. ಓದುವುದರಿಂದ ಅನೇಕ ವಿಷಯಗಳು ಸಿಕ್ಕರೂ ಅದು ಕಡೆಗಣನೆಯತ್ತ ಸಾಗುತ್ತಿದೆ. ಹಾಗಂತ ಓದುವವರೇ ಇಲ್ಲ ಎಂದರೆ ತಪ್ಪಾಗುತ್ತದೆ. ನಗರ, ಗ್ರಾಮೀಣ ಪ್ರದೇಶದಲ್ಲೂ ಪುಸ್ತಕ ಪ್ರಿಯರಿದ್ದಾರೆ. ಆದರೆ ಗ್ರಂಥಾಲಯಗಳು ದೂರವಿರುವುದರಿಂದ, ಬೇಕಾದ ಪುಸ್ತಕ ಖರೀದಿ ಮಾಡಿ ತರುವ ಆಸಕ್ತಿ ಇಲ್ಲದೇ ಇರುವುದರಿಂದ ಓದುವ ಮನಸ್ಸಿದ್ದರೂ ಪುಸ್ತಕವಿಲ್ಲ ಎಂದು ಕೊಂಡು ಸುಮ್ಮನಾಗುತ್ತಾರೆ.
ಜನರು ತಮ್ಮ ಸೃಜನಶೀಲ ಕಲ್ಪನೆಗೆಕಿಸುಲಿ ಹಾಕಿ ತಂದ ಯೋಚನೆ, ಯೋಜನೆಯೇ ಲಿಟಲ್ ಫ್ರೀ ಲೈಬ್ರೆರಿ ಲಿಟಲ್‌ಫ್ರೀ ಲೈಬ್ರೆರಿ ಇದೊಂದು ವಿಭಿನ್ನ ಕಾನ್ಸೆಪ್ಟ್ ಆಗಿದ್ದು, ತಮ್ಮ ಮನೆಯಲ್ಲಿ ಓದಿ ಮುಗಿಸಿದ ಪುಸ್ತಕಗಳನ್ನು ಬೇರೆಯವರಿಗೆ ಉಚಿತವಾಗಿ ಓದಿಸಿ ನಾವು ಬೇರೊಂದು ಪುಸ್ತಕವನ್ನು ಉಚಿತವಾಗಿಯೇ ಓದುವ ಪ್ರಕ್ರಿಯೆಯನ್ನು ಮಾಡುವಂತದ್ದಾಗಿದೆ. ಸಂಕ್ಷಿಪ್ತವಾಗಿ ಅಲ್ಲಲ್ಲಿ ಆಕರ್ಷಕ ಪುಸ್ತಕ ಸ್ಟಾಂಡ್‌ಗಳು ನಿರ್ಮಿಸಿ ಇಲ್ಲಿ ನಾವು ಓದಿರುವ ಪುಸ್ತಕಗಳನ್ನು ಬಿಟ್ಟು ನಮಗೆ ಇಷ್ಟವೆನಿಸಿದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದು.
Related Articles
Advertisement
ಮಂಗಳೂರಿಗೂ ಬರಲಿಮಂಗಳೂರು ಸುತ್ತಮುತ್ತ ಅನೇಕ ಪಾರ್ಕ್‌ಗಳಿವೆ. ಆಕರ್ಷಕ ಪಾದಚಾರಿ ರಸ್ತೆಗಳೂ ಇವೆ. ಇಲ್ಲಿ ಎಲ್ಲ ಲಿಟಲ್ ಫ್ರೀ ಲೈಬ್ರೆರಿಯನ್ನು ನಿರ್ಮಾಣ ಮಾಡಬಹುದಾಗಿದೆ. ಕೆಲವೊಂದು ಸಂಘ ಸಂಸ್ಥೆಗಳು ಈ ಬಗ್ಗೆ ಗಮನ ಕೊಟ್ಟರೆ ನಗರಕ್ಕೊಂದು ಹೊಸ ಕಲ್ಪನೆಯ ಜತೆಗೆ ಕೊಡುಗೆಯನ್ನು ನೀಡಿದಂತಾಗುತ್ತದೆ. ವಿಶ್ವಾಸ್ ಅಡ್ಯಾರ್