Advertisement

ಕಸ ಸಂಗ್ರಹ ವಾಹನಕ್ಕೆ ಕಸ ಹಾಕಿ

03:31 PM Nov 10, 2021 | Team Udayavani |

ಲಿಂಗಸುಗೂರು: ಕಸ ಸಂಗ್ರಹಿಸಲು ಪುರಸಭೆ ಆಟೋಗಳು ಮನೆಗೆ ಬರುತ್ತಿದ್ದು, ಆಟೋಗಳಿಗೆ ಕಸ ಹಾಕಿ ಸಾರ್ವಜನಿಕರು ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ ಮನವಿ ಮಾಡಿದರು.

Advertisement

ಪಟ್ಟಣದ 14ನೇ ವಾರ್ಡ್‌ನಲ್ಲಿ ಕಸ ಹೆಚ್ಚು ಸಂಗ್ರಹವಾಗುವ ಪ್ರದೇಶಗಳನ್ನು ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಿ ಅಲ್ಲಿನ ನಿವಾಸಿಗಳಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಮನೆಯಲ್ಲಿನ ಕಸ ಎಲ್ಲೆಂದರಲ್ಲಿ ಹಾಕುವುದರಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಕಸ ಸಂಗ್ರಹಕ್ಕಾಗಿ ಮನೆ-ಮನೆಗೆ ಬರುವ ಆಟೋಗಳಲ್ಲಿ ಹಾಕಬೇಕು. ಪಟ್ಟಣದ ಸ್ವತ್ಛತೆ ಕಾಪಾಡುವುದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯವಾಗಿದೆ. ಸ್ವತ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. ಈ ವೇಳೆ ಪುರಸಭೆ ಸದಸ್ಯ ರೌವೂಫ್‌ ಗ್ಯಾರಂಟಿ, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next