Advertisement

ಉಷ್ಣಹವೆಗೆ 700ಕ್ಕೂ ಅಧಿಕ ಸಾವು : ಕೊಲಂಬಿಯಾ ಪ್ರಾಂತ್ಯದ ಲಿಟ್ಟೆನ್‌ ಹಳ್ಳಿ ಭಸ್ಮ

02:24 AM Jul 04, 2021 | Team Udayavani |

ಟೊರಂಟೊ: ಬಿಸಿಗಾಳಿಯ ಪ್ರಭಾವಕ್ಕೆ ಕೆನಡಾದಲ್ಲಿ ಒಂದು ವಾರದ ಅವಧಿಯಲ್ಲಿ 719ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.

Advertisement

ಇದರ ಜತೆಗೆ ಪೆಸಿಫಿಕ್‌ ವಲಯದ ವಾಯವ್ಯ ಭಾಗದಲ್ಲಿ ಹಲವು ದಿನಗಳಿಂದ ಬಿಸಿಗಾಳಿಯ ಪ್ರಕೋಪ ಹೆಚ್ಚಾಗಿದ್ದು, ಈ ಪೈಕಿ, ಕೆನಡಾದಲ್ಲಿ ಅತ್ಯಂತ ಹೆಚ್ಚು ಪ್ರತಿಕೂಲ ಪರಿಣಾಮ ಉಂಟಾಗಿದೆ. ಅದರ ತೀವ್ರತೆ ಎಷ್ಟಿದೆ ಎಂದರೆ ಬ್ರಿಟಿಷ್‌ ಕೊಲಂಬಿಯಾದಲ್ಲಿರುವ ಲಿಟ್ಟೆನ್‌ ಎಂಬ ಹಳ್ಳಿ ನೋಡನೋಡುತ್ತಿದ್ದಂತೆ ಕಾಡ್ಗಿಚ್ಚಿಗೆ ಆಹುತಿಯಾಗಿದೆ.

ಲಿಟ್ಟೆನ್‌ ಬಳಿಯ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿ, ಕೇವಲ 15 ನಿಮಿಷಗಳಲ್ಲಿ ಹಳ್ಳಿಯನ್ನು ತಲುಪಿತು. ಅಲ್ಲಿದ್ದ, 250 ಮನೆಗಳಿದ್ದ ನಿವಾಸಿಗಳು, ತಮ್ಮ ಅತ್ಯವಶ್ಯ ವಸ್ತುಗಳನ್ನೂ ಕೈಗೆತ್ತಿಕೊಳ್ಳದೆ ತಮ್ಮ ಮನೆಗಳಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಒಂದೇ ದಿನ, ಕೆನಡಾದ ಅರಣ್ಯ ಪ್ರದೇಶಗಳ ನಾನಾ ಸ್ಥಳಗಳಲ್ಲಿ ಸುಮಾರು 12,000 ಸಿಡಿಲುಗಳು ಬಡಿದು 150 ಸ್ಥಳಗಳಲ್ಲಿ ಕಾಳಿYಚ್ಚು ಕಾಣಿಸಿಕೊಂಡಿದೆ. ಇದರಿಂದ ಹೊತ್ತಿಕೊಂಡಿ ರುವ ಬೆಂಕಿಯಿಂದ ಬ್ರಿಟಿಷ್‌ ಕೊಲಂಬಿಯಾ ಹಾಗೂ ಇನ್ನಿತರ ಪ್ರಾಂತ್ಯಗಳಲ್ಲಿ ವಾತಾವರಣ ಉಷ್ಣಾಂಶ 49.6 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತೆಂದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಅಲ್ಲಲ್ಲಿ ಬಿಸಿಗಾಳಿ
ಉತ್ತರ ಭಾರತದ ಹಲವು ಕಡೆ, ಉಷ್ಣ ಹವೆ ಬೀಸುತ್ತಿದ್ದು, ಹರಿಯಾಣ ಮುಂತಾದ ಕಡೆ ಶುಕ್ರವಾರ-ಶನಿವಾರಗಳಂದು ಸಾಮಾನ್ಯ ದಿನದ ಉಷ್ಣಾಂಶ 3ರಿಂದ 4 ಡಿಗ್ರಿ ಏರಿಕೆಯಾಗಿ ತ್ತೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜು. 1-2ರಂದು ಪಶ್ಚಿಮದ ರಾಜ್ಯಗಳ ಕೆಲವೆಡೆ ಉಷ್ಣಹವೆ ಆವರಿಸುವುದಾಗಿ ಇಲಾಖೆ ಮೊದಲೇ ಎಚ್ಚರಿಸಿತ್ತು. “ಮೊದಲೇ ತಿಳಿಸಿದಂತೆ ಹರಿಯಾಣ, ಪಂಜಾಬ್‌, ದಿಲ್ಲಿ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗದ ಕೆಲವು ಸ್ಥಳಗಳಲ್ಲಿ ಉಷ್ಣಹವೆ ಸಂಚಾರವಾಗಿದೆ’ ಎಂದು ಐಎಂಡಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next