Advertisement
ಇದರಿಂದ ವಿದ್ಯುತ್‌ಚಾಲಿತ ಕಾರುಗಳಿಗೆ ಅಗತ್ಯವಾಗಿರುವ ಬ್ಯಾಟರಿಗಳನ್ನು ಸಿದ್ಧಪಡಿಸುವ ಕೇಂದ್ರ ಸರ್ಕಾರದ ಯೋಜನೆಗೆ ಹೆಚ್ಚು ಬಲ ಬರಲಿದೆ. ಇದೊಂದು ಐತಿಹಾಸಿಕ ದಿನ. ಇಂಧನ ಕ್ಷೇತ್ರದಲ್ಲಿ 2 ದೇಶಗಳ ನಡುವೆ ಸಹಭಾಗಿತ್ವಕ್ಕೆ ಇದು ನೆರವಾಗಲಿದೆ ಎಂದು ಜೋಷಿ ಬರೆದುಕೊಂಡಿದ್ದಾರೆ.
Related Articles
Advertisement
15,703 ಹೆಕ್ಟೇರ್- ಗಣಿಗಾರಿಕೆ ನಡೆಯುವ ಪ್ರದೇಶ
05 – ಸಿಕ್ಕಿರುವ ಒಟ್ಟು ಬ್ಲಾಕ್‌ಗಳು
200 ಕೋಟಿ ರೂ. – ಒಪ್ಪಂದದ ಒಟ್ಟು ಮೌಲ್ಯ
ಅನುಕೂಲ ಏನು?
– ಲೀಥಿಯಂ ಬ್ಯಾಟರಿ ಉತ್ಪಾದನೆಯಲ್ಲಿ ಚೀನಾ ಅವಲಂಬನೆ ಪ್ರಮಾಣ ಕಡಿಮೆ
– ಚೀನಾ ಉತ್ಪನ್ನಗಳ ಬಹಿಷ್ಕಾರ ನಡುವೆ ದೇಶೀಯ ಉತ್ಪಾದನೆಗೆ ಬೆಂಬಲ
– ಅರ್ಜೆಂಟೀನಾ-ಭಾರತದ ನಡುವೆ ಬಾಂಧವ್ಯ ವೃದ್ಧಿಗೆ ಅನುಕೂಲ
ಏನಿದು ಲೀಥಿಯಂ?
ಲೀಥಿಯಂ ಎನ್ನುವುದು ಅತ್ಯಂತ ಹಗುರವಾದ ಲೋಹ. ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್, ಡಿಜಿಟಲ್ ಕ್ಯಾಮೆರಾ ಮುಂತಾದ ಸಾಧನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ಪ್ರಧಾನ ಖನಿಜ. ಸೆಮಿ ಕಂಡಕ್ಟರ್‌ಗಳ ತಯಾರಿಕೆಗೂ, ಸೆರಾಮಿಕ್, ಗಾಜು, ಗ್ರೀಸ್, ಔಷಧ, ಎಸಿ, ಅಲ್ಯೂಮಿನಿಯಂ ಉತ್ಪಾದನೆಯಲ್ಲೂ ಇದರ ಬಳಕೆಯಿದೆ.