Advertisement

ಸಾಮಾಜಿಕ ಸಂದರ್ಭದಿಂದ ಸಾಹಿತ್ಯ ಸೃಷ್ಟಿ

11:54 AM Jul 24, 2018 | Team Udayavani |

ಬೆಂಗಳೂರು: ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಆಧುನಿಕ ಪರಿಭಾಷೆಯನ್ನು ಮೈಗೂಡಿಸಿಕೊಂಡು ಹೊಸ ಸಾಹಿತ್ಯ ಕಟ್ಟಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ.

Advertisement

ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ “ವಜ್ರದ ಬೇರುಗಳು  -ಸಾಹಿತ್ಯ ಪ್ರಕಾರ ಮಾಲಿಕೆ’ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಸಾಮಾಜಿಕ ಸಂದರ್ಭ ಸಾಹಿತ್ಯವನ್ನು ರೂಪಿಸುತ್ತದೆ. ಹೀಗೆ, ಹುಟ್ಟಿಕೊಂಡು ಎಲ್ಲಾ ಪ್ರಕಾರಗಳ ಸಾಹಿತ್ಯಗಳು ಒಂದಕ್ಕಿಂತ ಒಂದು ಭಿನ್ನ ಸ್ವರೂಪಗಳದ್ದಾಗಿವೆ. ಹೀಗಾಗಿ, ಸಾಂಪ್ರದಾಯಿಕ ಪರಿಭಾಷೆಯಲ್ಲೆ ಹೊಸತನ್ನು ಸೃಷ್ಟಿಸಿ ಓದುಗರಿಗೆ ನೀಡಬೇಕು ಎಂದು ಹೇಳಿದರು.

ವಜ್ರದ ಬೇರುಗಳು ಸಾಹಿತ್ಯ ಮಾಲಿಕೆ ವಿಭಿನ್ನ ಯೋಜನೆಯಾಗಿದೆ. ಸಾಹಿತ್ಯದ ಬಗ್ಗೆ ಅಭಿರುಚಿ ಉಳ್ಳವರು ಹಲವರು ನಮ್ಮಲ್ಲಿ ದ್ದಾರೆ. ಇದರಲ್ಲಿ ಕೆಲವರು ಸಾಹಿತ್ಯ ರಚಿಸಬೇಕು ಎಂಬ ಉತ್ಸಾಹ ಉಳ್ಳವರಾಗಿದ್ದಾರೆ. ಆದರೆ, ಅವರಿಗೆ ಹೇಗೆ ಕೃತಿಯನ್ನು ಆರಂಭಿಸಬೇಕು ಎಂಬ ಬಗ್ಗೆ ಅರಿವು ಇರುವುದಿಲ್ಲ. ಅಂತವರಿಗೆ ವಜ್ರದ ಬೇರುಗಳು ಸಾಹಿತ್ಯ ಮಾಲಿಕೆ ಕೈಪಿಡಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮಾಲಿಕೆ ಬರಹಗಾರರಿಗೆ ಮಾರ್ಗದರ್ಶನ ನೀಡಿದ ಮಾಲಗತ್ತಿ, ಸಾಹಿತ್ಯ ರಚಿಸುವವರಿಗೆ ಹೊಸ ನೆಲಗಟ್ಟನ್ನು ಈ ಸಂಪುಟ ನೀಡಬೇಕು. ವಿಭಿನ್ನ ರೀತಿಯ ಚಿಂತನೆಯನ್ನು ನಿರೂಪಿಸಬೇಕು. ತಾತ್ವಿಕ ವಿಷಯಗಳನ್ನು ಚರ್ಚಿಸಿ ಉದಾಹರಣೆ ಸಮೇತ  ಅವುಗಳನ್ನು ವಿವರಿಸಬೇಕು. ಸರಳ ರೀತಿಯಲ್ಲಿ ಸಾಹಿತ್ಯ ರಚಿಸುವುದನ್ನು ಹೇಳಿಕೊಡಬೇಕು ಎಂದರು.

“ವಜ್ರದ ಬೇರುಗಳು -ಸಾಹಿತ್ಯ ಪ್ರಕಾರ ಮಾಲಿಕೆ ‘ಸಂಪಾದಕ ಡಾ.ಬಸವರಾಜ ಕಲ್ಗುಡಿ ಮಾತನಾಡಿ, ಈ ಕೃತಿ ಸಾಹಿತ್ಯ ಚರಿತ್ರೆಯನ್ನಾಗಲಿ, ಕವಿಚರಿತ್ರೆಯನ್ನಾಗಲಿ ಪ್ರತಿನಿಧಿಸುವುದಿಲ್ಲ. ಬದಲಾಗಿ ಪ್ರತಿಯೊಂದು ಸಾಹಿತ್ಯದ ಪ್ರಕಾರಗಳ ತಾತ್ವಿಕ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

Advertisement

“ವಜ್ರದ ಬೇರುಗಳು ಸಾಹಿತ್ಯ ಪ್ರಕಾರ ಮಾಲಿಕೆ’ಯ ಸಲಹಾ ಸಮಿತಿಯ ಸದಸ್ಯ ಡಾ.ಎನ್‌.ಎಸ್‌.ತಾರಾನಾಥ್‌, ವಿಮರ್ಶಕ ಎಸ್‌.ಆರ್‌.ವಿಜಯ ಶಂಕರ, ಸಾಹಿತ್ಯ ಅಕಾಡೆಮಿಯ ರಿಜಿಸ್ಟಾರ್‌ ಕರಿಯಪ್ಪ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next