Advertisement
ನಗರದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮೂರು ದಿನಗಳು ಅಂದಾಜು 6 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಹೀಗಾಗಿ ಸಮ್ಮೇಳನಕ್ಕೆಂದು ಆಗಮಿಸುವ ಗಣ್ಯರು, ಅತಿಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ರುಚಿ-ಶುಚಿಯಾದ ಊಟ, ತಿಂಡಿ ವ್ಯವಸ್ಥೆ ಮಾಡಲು ಸಮ್ಮೇಳನದ ಆಹಾರ ಸಮಿತಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
Related Articles
Advertisement
ಈ ಬಾರಿಯ ಆಹಾರ ನಿರ್ವಹಣೆಯನ್ನು ಬೆಂಗಳೂರಿನ ಉದಯ್ ಕೆಟರರ್ ವಹಿಸಿಕೊಂಡಿದ್ದು, ಅಡುಗೆ ವಿಭಾಗದಲ್ಲಿ 60 ಮಂದಿ, ಸರ್ವಿಸ್ ಮಾಡಲು 150 ಹಾಗೂ ಸ್ವತ್ಛತಾ ಕೆಲಸ ನಿರ್ವಹಿಸಲು 50 ಮಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ ದಿನದ 3 ಹೊತ್ತು ಊಟ-ತಿಂಡಿ ಸೇವಿಸಿದ ಸಾರ್ವಜನಿಕರು, ಹೊರ ಜಿಲ್ಲೆಗಳ ಪ್ರತಿನಿಧಿಗಳು ಆಹಾರ ವ್ಯವಸ್ಥೆ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಂಗಲ್ ಸೂಪರ್, ವೆಜ್ ಬಿರಿಯಾನಿ, ಅಕ್ಕಿ ಪಾಯಸ ಬೊಂಬಾಟ್: ಸಮ್ಮೇಳನದ ಮೊದಲ ದಿನದಂದು ಬೆಳಗಿನ ಉಪಹಾರದಲ್ಲಿ ಸಿಹಿ ಪೊಂಗಲ್, ಖಾರ ಪೊಂಗಲ್, ಟೀ-ಕಾಫಿ ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ಪೂರಿ ಸಾಗು, ಕಜಾjಯ, ಮೆಂತ್ಯ ಸೊಪ್ಪಿನ ಬಾತ್, ಅನ್ನ ಸಂಬಾರ್, ಮೊಸರನ್ನ ಹಾಗೂ ಉಪ್ಪಿನಕಾಯಿ ನೀಡಿದರೆ, ರಾತ್ರಿ ಊಟಕ್ಕೆ ವೆಜ್ ಬಿರಿಯಾನಿ, ಅಕ್ಕಿ ಪಾಯಸ, ಅನ್ನ, ತಿಳಿಸಾರು, ಮೊಸರನ್ನ ಹಾಗೂ ಉಪ್ಪಿನಕಾಯಿ ನೀಡಲಾಯಿತು.
ಇಂದಿನ ಹೊಟ್ಟೆಪಾಡು: 2ನೇ ದಿನವಾದ ನ.25ರಂದು ಬೆಳಗ್ಗಿನ ಉಪಹಾರದಲ್ಲಿ ಉಪ್ಪಿಟ್ಟು, ಕೇಸರಿಬಾತ್, ಮಸಾಲ ವಡೆ, ಟೀ-ಕಾಫಿ. ಮಧ್ಯಾಹ್ನದ ಊಟಕ್ಕೆ ಅಕ್ಕಿರೊಟ್ಟಿ, ಕಳ್ಳೆಹುಳಿ, ಹೋಳಿಗೆ, ತುಪ್ಪ, ಮೇಲುಕೋಟೆ ಪುಳಿಯೊಗರೆ, ಅನ್ನಸಾಂಬರ್, ಮೊಸರನ್ನ, ಹಪ್ಪಳ, ಉಪ್ಪಿನಕಾಯಿ ಹಾಗೂ ರಾತ್ರಿ ಊಟದಲ್ಲಿ ಬಾದ್ ಶಾ, ವೆಜ್‌ಪಲಾವ್, ಅನ್ನ, ತಿಳಿಸಾರು, ಮೊಸರನ್ನ, ಉಪ್ಪಿನಕಾಯಿ ಇರಲಿದೆ.