Advertisement
ಕೇಂದ್ರ ಅಥವಾ ರಾಜ್ಯ ಸರಕಾರಗಳು ಪ್ರಾಯೋಜಿಸುತ್ತಿರುವ ಅನೇಕ ಪ್ರಶಸ್ತಿಗಳಿವೆ. ಅದನ್ನು ಪಡೆದುಕೊಳ್ಳಲು ಹಾತೊರೆಯುವ ಮಂದಿ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಪ್ರಶಸ್ತಿಗೆ ಆಸೆ ಪಡದೆ ದೂರ ಉಳಿಯುವವರೂ ಹಲವರಿದ್ದಾರೆ. ಅಂಥವರಲ್ಲಿ ಹೆಚ್ಚಿನವರು ಪ್ರಶಸ್ತಿ ಪಡೆದವರಿಗಿಂತ ಹೆಚ್ಚಿನ ಅರ್ಹತೆ ಉಳ್ಳವರಾಗಿರುತ್ತಾರೆ. ಹಾಗಿದ್ದರೆ ಸರ್ಕಾರ ನೀಡುವ ಪ್ರಶಸ್ತಿಗಳ ಮಾನದಂಡಗಳು ಎಷ್ಟು ಸಂವಿಧಾನಾತ್ಮಕವಾಗಿವೆ? ಇಂಥ ಪ್ರಶಸ್ತಿಗಳನ್ನು ಸ್ವೀಕರಿಸಲು ತವಕಿಸುವ ಸಾಹಿತಿಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹರಾಗುತ್ತಾರೆ?
Related Articles
Advertisement
ಇವತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಭೆ ದುರ್ಬಲವಾಗುತ್ತಿದೆ, ಪ್ರತಿಭಾವಂತರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ಆದರೂ ಗಂಭೀರ ಚಿಂತನೆಯ ಸಮುದಾಯವೊಂದು ಅದರಷ್ಟಕ್ಕೆ ಜಾಗ್ರತ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ಮರೆಯಬಾರದು. ಅವರಲ್ಲಿ ಹೆಚ್ಚಿನವರು ಯುವ ಹರೆಯದವರು. ಸಾಹಿತ್ಯದಲ್ಲಿ ಆಸಕ್ತಿ ಇರುವ ಕಂಪ್ಯೂಟರ್ ಇಂಜಿನಿಯರ್, ಸಿನೆಮಾ ನಿರ್ಮಾಣದಲ್ಲಿ ಅನುಭವ ಇರುವ ಡಾಕ್ಟರ್, ಯಕ್ಷಗಾನ ಕಲೆಯಲ್ಲಿ ಪರಿಣತಿ ಇರುವ ವಕೀಲ… ಹೀಗೆ ಇವತ್ತಿನ ಕಾಲಘಟ್ಟದಲ್ಲಿ ಆಸಕ್ತಿಯ ವಿಷಯ ಬೇರೆ, ವೃತ್ತಿ ಬೇರೆ- ಆಗಿರುತ್ತದೆ. ಅಂಥವರು ತಮ್ಮ ವಿರಾಮದ ವೇಳೆ ಆಸಕ್ತಿಯ ಕ್ಷೇತ್ರಗಳಲ್ಲಿ ಸಕ್ರಿಯರಾಗುತ್ತಾರೆ, ಪೋಷಣೆ ನೀಡುತ್ತಾರೆ. ನಮ್ಮ ಸಾಹಿತ್ಯ- ಕಲೆಗಳು ಬೆಳೆದು ಬಂದದ್ದು ಇಂಥ ಸಹೃದಯ ಆಸಕ್ತಿಯಲ್ಲಿಯೇ ಅಲ್ಲವೆ? ಇಂಥ ಸಮುದಾಯ ಆಯಾ ಕ್ಷೇತ್ರಗಳ ವಿದ್ಯಮಾನಗಳನ್ನು ಗಂಭೀರವಾಗಿ ಗಮನಿಸುತ್ತಿರುತ್ತಾರೆ. ಲಘುತ್ವವೇ ಅಧಿಕವಾಗಿ, ವಿಶ್ವಾಸಾರ್ಹತೆ ಕುಸಿಯತೊಡಗಿದರೆ ತಮ್ಮ “ಹವ್ಯಾಸ’ದ ಕ್ಷೇತ್ರದಿಂದ ದೂರ ಉಳಿಯುತ್ತಾರೆ. ಸಾಹಿತ್ಯವಾಗಲಿ, ಕಲೆಯಾಗಲಿ, ಪ್ರೋತ್ಸಾಹ-ಪೋಷಣೆಯಿಂದ ವಂಚಿತವಾದರೆ ಅವರ ಬೆಳವಣಿಗೆಗೆ ಕಷ್ಟಸಾಧ್ಯ.
ಪ್ರಕಾಶಕರೊಬ್ಬರು ಈಗ ಪುಸ್ತಕಗಳ ವ್ಯವಹಾರ ಕುಸಿದಿದೆ ಎಂದು ದೂರುತ್ತಾರೆ. ಅವರು ಈ ಹಿಂದೆ ಸಾವಿರಾರು ಪುಸ್ತಕಗಳನ್ನು ಪ್ರಿಂಟ್ ಮಾಡಿಸಿ ಹಣ ಗಳಿಸಿದ್ದರು. ಆದರೆ, ಅವರು ಮುದ್ರಿಸಿದ ಪುಸ್ತಕಗಳ ಲೇಖಕರು “ಸಮಾಜದ ವಿಶ್ವಾಸಾರ್ಹತೆ’ಯನ್ನು ಯಾವಾಗ ಕಳೆದುಕೊಂಡರೋ ಅಂದಿನಿಂದ ವ್ಯವಹಾರ ಕುಸಿಯಲಾರಂಭಿಸುತ್ತದೆ. ಈಗ ಮುದ್ರಣಗೊಳ್ಳುತ್ತಿರುವ ಪುಸ್ತಕಗಳ ಸಂಖ್ಯೆಗೆ ಹೋಲಿಸಿದರೆ ಓದುತ್ತಿರುವವರ ಸಂಖ್ಯೆ ಹೇಗೆ ಕಡಿಮೆಯಾಗುತ್ತದೆ! ಯಾವನೇ ಲೇಖಕ ತನ್ನಷ್ಟಕ್ಕೆ ತಾನು ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕಾದ ಕಾಲವಿದು: “ನನ್ನ ಪುಸ್ತಕವನ್ನು ಯಾವನಾದರೂ ಯಾಕೆ ಓದಬೇಕು?’ ಬೇರೆಯವರು ಓದುವುದಕ್ಕಿಂತ ಮೊದಲು ಪ್ರತಿಯೊಬ್ಬನೂ ತಾನು ಬರೆದದ್ದನ್ನು ತಾನೇ ಮತ್ತೂಮ್ಮೆ ಓದಿಕೊಳ್ಳುವುದು ಮತ್ತು ಎಷ್ಟು ವಿಶ್ವಾಸಾರ್ಹವಾಗಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.ಹಣ, ಜಾತಿ, ನೀತಿ- ಎಲ್ಲ ವಿಚಾರಗಳಲ್ಲಿಯೂ ಒಂದು ರೀತಿಯ “ಮಿಥ್ಯಾತಣ್ತೀ’ಗಳು ಕ್ರಿಯಾಶೀಲವಾಗಿವೆ. ಇವುಗಳನ್ನು ಆಧರಿಸಿದ ಸಂಗತಿಗಳು ಬಹು ಕಾಲ ಬಾಳಿಕೆ ಬರುವುದು ದುರ್ಲಭ! ಇತ್ತೀಚೆಗೆ ಸಾಹಿತಿಗಳು ತಮ್ಮ ಭಾಷಣಗಳಲ್ಲಿ ಎಷ್ಟೊಂದು ಬಾಲಿಶ ಸಂಗತಿಗಳನ್ನು ಬಳಸುತ್ತಾರೆ! ನೈತಿಕತೆಯನ್ನು ಹೆಣ್ಣಿನ ಕನ್ಯತ್ವಕ್ಕೆ ಹೋಲಿಸುತ್ತಾರೆ, ಅರ್ಧ ಬರೆದು ಎಸೆದ ಕತೆಗಳನ್ನು “ಭ್ರೂಣಹತ್ಯೆ’ ಎಂದು ಕರೆಯುತ್ತಾರೆ, ಕ್ರಿಯಾಶೀಲವಾಗದೇ ಉಳಿಯುವುದಕ್ಕೆ “ಮುಟ್ಟು ನಿಂತಿದೆ’ ಎಂದು ಬಣ್ಣಿಸುತ್ತಾರೆ. ಅದೇ ಚರ್ವಿತಚರ್ವಣ ಉಪಮೆಗಳು. ನಾವು ಹದಿಮೂರನೆಯ ಶತಮಾನದಲ್ಲಿ ನಿಂತು ಮಾತನಾಡುತ್ತಿಲ್ಲ ಎಂಬ ಕನಿಅರಿವಾದರೂ ಇವರಿಗೆ ಬೇಕಲ್ಲ !
ಇಂಥ ಸಾಹಿತಿಗಳ ಮಾತುಗಳಿಗೆ ಎಂಥ ವಿಶ್ವಾಸಾರ್ಹತೆ ಇರಬಹುದು? – ಎ. ಕೃಷ್ಣ