Advertisement

ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಸಾಹಿತ್ಯಿಕ ಕಮ್ಮಟ ಕಾರ್ಯಕ್ರಮ

04:40 PM Feb 26, 2019 | |

ಮುಂಬಯಿ: ಮುಂಬಯಿ ವಿವಿ ಕನ್ನಡ ವಿಭಾಗದ ವತಿಯಿಂದ ಇತ್ತೀಚೆಗೆ ವರದಿ, ಲೇಖನ ಹಾಗೂ ಕೃತಿ ವಿಮರ್ಶೆಯ ಕುರಿತಾಗಿ ಸಾಹಿತ್ಯ  ಕಮ್ಮಟವನ್ನು ಆಯೋಜಿಸಲಾಗಿತ್ತು.

Advertisement

ಸಂಪನ್ಮೂಲ ವ್ಯಕ್ತಿಗಳಾಗಿ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಸುವರ್ಣ, ಅಕ್ಷಯ ಪತ್ರಿಕೆಯ ಸಂಪಾದಕ ಡಾ|  ಈಶ್ವರ ಅಲೆವೂರು ಹಾಗೂ ಹಿರಿಯ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಭಾಗವಹಿಸಿದ್ದರು.

   ಅಧ್ಯಕ್ಷತೆ ವಹಿಸಿದ್ದ ಕನ್ನಡ  ವಿಭಾಗದ  ಮುಖ್ಯಸ್ಥ ಡಾ|  ಜಿ. ಎನ್‌. ಉಪಾಧ್ಯ ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಉದಯೋನ್ಮುಖ ಬರಹಗಾರರು ಉತ್ತಮ ಬರವಣಿಗೆಯನ್ನು ಯಾವ ರೀತಿಯಲ್ಲಿ ರೂಢಿಸಿಕೊಳ್ಳಬಹುದು ಎಂದು ಪ್ರಾಯೋಗಿಕವಾಗಿ ತಿಳಿಸಿಕೊಡುವ ಉದ್ದೇಶದಿಂದ ಈ ಕಮ್ಮಟವನ್ನು ಆಯೋಜಿಸಲಾಗಿದೆ. ಲೇಖಕನಿಗೆ ಗುರುತರವಾದ ಜವಾಬ್ದಾರಿಯಿದೆ. ಸಮುದಾಯದ ಹಿತವನ್ನು ಕಾಯುವ ಹೊಣೆಗಾರಿಕೆ ಲೇಖಕನದು. ಲೇಖಕನಾಗಲು ತೆರೆದ ಕಣ್ಣುಗಳು ಮತ್ತು ತೆರೆದ
ಮನಸ್ಸು ಅಗತ್ಯಎಂದರು.

ವರದಿಯ ಕುರಿತಾಗಿ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್‌  ಸುವರ್ಣ ಉಪನ್ಯಾಸ ನೀಡಿ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ವರದಿಗಾರರ
¨ªಾಗಿದೆ  ಎಂದರು. 

ಲೇಖನದ ಕುರಿತಾಗಿ ಸಾಹಿತಿ ಮತ್ತು ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಉಪನ್ಯಾಸ ನೀಡಿ, ಅಕ್ಷರಗಳನ್ನು ಅರ್ಥವತ್ತಾಗಿ ಜೋಡಿಸುವ ಕಲೆಯನ್ನು ಕರಗತ ಮಾಡಿಕೊಂಡವರು ಲೇಖನ ಗಳನ್ನು ಬರೆಯಬಹುದು. ಲೇಖನ ಬರೆಯುವವರ ಓದು ಅಧ್ಯಯನಗಳು ವಿಸ್ತಾರವಾಗಿರಬೇಕು. ಲೇಖಕನ ಓದನ್ನು ಹೊಂದಿಕೊಂಡು ಲೇಖನ ರೂಪುಗೊಳ್ಳುತ್ತವೆ. ಉತ್ತಮ ಓದುಗ ಮಾತ್ರ ಗುಣಮಟ್ಟದ ಲೇಖನಗಳನ್ನು ಬರೆಯಬಹುದು. ಕಲ್ಪನಾ ಶಕ್ತಿ, ಶಬ್ದ ಸಂಪತ್ತು, ವಿಷಯಗಳ ಆಯ್ಕೆ, ಸಮಕಾಲೀನ ವಿದ್ಯಮಾನಗಳು ಹಾಗೂ ಲೇಖನ ಪ್ರಕಟನೆಗೆ ಯಾವ ಪತ್ರಿಕೆ ಸೂಕ್ತ ಎನ್ನುವ ಪರಿಜ್ಞಾನ ಲೇಖಕನಿಗಿರಬೇಕಾದ ಐದು ಅರ್ಹತೆಗಳ ಬಗೆಗೆ ಬೆಳಕು ಚೆಲ್ಲಿ ಮಾನವೀಯ ಲೇಖನಗಳು ಬಹುಬೇಗನೆ ಪ್ರಕಟಗೊಳ್ಳುತ್ತವೆ ಎಂದರು.

Advertisement

  ಕೃತಿ ವಿಮರ್ಶೆಯ ಬಗ್ಗೆ ಅಕ್ಷಯ ಪತ್ರಿಕೆಯ ಸಂಪಾದಕ  ಡಾ| ಈಶ್ವರ ಅಲೆವೂರು ಮಾತನಾಡಿ, ಭಾರತೀಯ ಕಾವ್ಯ ಮೀಮಾಂಸೆ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ನೆಲೆಯಲ್ಲಿ ಚರ್ಚಿಸಿ, ಕೃತಿಯೊಂದನ್ನು ಆಮೂಲಾಗ್ರವಾಗಿ ಓದಿ ಅದರಲ್ಲಿರುವ ಜೊಳ್ಳು ಯಾವುದು ಕಾಳು ಯಾವುದು ಎಂಬುದನ್ನು ತಿಳಿಯುವ ಅರ್ಹತೆ ವಿಮರ್ಶಕನಲ್ಲಿರಬೇಕು. ವಿಮರ್ಶಕ ಕೃತಿಕಾರ ಮತ್ತು ಓದುಗನ ನಡುವಿನ ಸೇತುವೆಯಾಗಬೇಕು ಎಂದು ಹೇಳಿದರು.  ಕನ್ನಡ ವಿಭಾಗದ ವಿದ್ಯಾರ್ಥಿಗಳು  ಸಾಹಿತ್ಯ  ಕಮ್ಮಟದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next