Advertisement

“ಬಂಗಾರದ ಎಲೆ’ಯಲ್ಲಿ ಸಾಹಿತಿಗಳ ಮಾಹಿತಿ

05:13 PM Jul 20, 2018 | |

ಬೆಂಗಳೂರು: ಬಂಗಾರದ ಎಲೆಗಳು’ ಎಂಬ ಯೋಜನೆ ಅಡಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನಾಡಿನ ಹಿರಿ-ಕಿರಿಯ ಸಾಹಿತಿಗಳ ವಿವರಗಳನ್ನೊಳಗೊಂಡ ಕನ್ನಡ ಸಾಹಿತಿಗಳ ಕೋಶ’ ವನ್ನು ಹೊರತರಲು ಮುಂದಾಗಿದೆ. ಅಪರೂಪದ ಈ ಕೋಶದಲ್ಲಿ ಸುಮಾರು, ಎರಡು ಶತಮಾನದ ಸಾಹಿತಿಗಳ ಸಮಗ್ರ ಪರಿಚಯ ಇರಲಿದೆ. ಕ್ರಿ.ಶ 1820 ರಿಂದ 2020ರ ವರೆಗಿನ ಕನ್ನಡ ಸಾಹಿತಿಗಳ ಪೂರ್ಣಚಿತ್ರಣ ಒಂದು ಕೋಶದ ರೂಪದಲ್ಲಿ ತೆರೆದಿಡುವ ಪ್ರಯತ್ನ ಇದಾಗಿದ್ದು, ಸುಮಾರು 8 ಸಂಪುಟಗಳಲ್ಲಿ ಹೊರತರಲಾಗುತ್ತದೆ. 

Advertisement

ಯೋಜನೆಗೆ 50 ಲಕ್ಷ ವೆಚ್ಚ ಇದು 50 ಲಕ್ಷ ರೂ.ಗಳ ಯೋಜನೆಯಾಗಿದ್ದು, ಒಂದೊಂದು ಸಂಪುಟ ಐದು ನೂರು ಪುಟಗಳನ್ನು ಮೀರಲಿದೆ. ಯಾರಿಗೂ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಒಂದು ಪುಸ್ತಕ ಬರೆದ ಲೇಖಕನನ್ನೂ ಕೂಡ ಈ ಕೋಶದಲ್ಲಿ ಸೇರಿಸುವ ಆಲೋಚನೆ ಮಾಡಲಾಗಿದೆ. ಆದರೆ, ರಾಜಕೀಯ ಶಾಸ್ತ್ರ, ಇತಿಹಾಸ ಶಾಸ್ತ್ರದ ಬಗ್ಗೆ ಬರೆದವರನ್ನು ಹೊರಗಿಡಲಾಗಿದೆ. ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ಕನ್ನಡ ಕೋಶದ
ರೂಪರೇಷೆಗಳ ಬಗ್ಗೆ ಸಮಾಲೋಚನೆ ನಡೆದು ಯೋಜನೆಗೆ ಒಪ್ಪಿಗೆ ದೊರೆತಿದೆ. ಹೀಗಾಗಿ ನಾಡಿನ ಹಿರಿಯ ಮತ್ತು ಕಿರಿಯ ಸಾಹಿತ್ಯಗಳ ಹುಡುಕಾಟ ಕೂಡ ನಡೆದಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಕೆಲಸಕ್ಕೆ ಅಂತಿಮ ರೂಪ ಸಿಗಲಿದೆ ಎಂದು
ಉದಯವಾಣಿ’ಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೂರು ಭಾಗದ ಕೋಶ ಮೊದಲ ಭಾಗದಲ್ಲಿ ಸಾಹಿತಿಗಳ ಬದುಕಿನ ವೈಯಕ್ತಿಕ ಚಿತ್ರಣ, ಅವರ ತಂದೆ -ತಾಯಿ ಮತ್ತು
ಊರಿನ ವಿವರ. ಎರಡನೇ ಭಾಗದಲ್ಲಿ ಯಾವ ವಲಯದಲ್ಲಿ ಕೆಲಸ? ಯಾವ ರೀತಿಯ ಕೃತಿ? ಎಷ್ಟು ಕೃತಿಗಳನ್ನು ರಚನೆ ಮಾಹಿತಿ. ಮೂರನೇ ಭಾಗದಲ್ಲಿ ಸರ್ಕಾರದ ಅಕಾಡೆಮಿಗಳಲ್ಲಿನ ಕೆಲಸ, ಇನ್ನಿತರ ಅಂಕಿ-ಅಂಶ ಎರಡು ಶಾಖೆ ಬಂಗಾರದ ಎಲೆಗಳು’, ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಬೆಂಗಳೂರು ಮತ್ತು ಮೈಸೂರು ವಿಭಾಗ ಎಂಬ
ಎರಡು ಶಾಖೆಗಳನ್ನ ಸ್ಥಾಪಿಸಲಾಗಿದೆ.

ಬೆಂಗಳೂರು ವಿಭಾಗ: ಮೊದಲ ಶತಮಾನದ (1870-1920) ಸಾಹಿತ್ಯ ಡಾ.ಎನ್‌.ಎಸ್‌. ತಾರಕನಾಥ, ಪ್ರೊ.ಜಿ.ಅಶ್ವತ್ಥನಾರಾಯಣ, ಡಾ.ಟಿ.ಗೋವಿಂದರಾಜು ಮತ್ತು ಬೆ.ಗೋ ರಮೇಶ್‌

ಮೈಸೂರು ವಿಭಾಗ: ಎರಡನೇ ಶತಮಾನದ (1920-2020) ಸಾಹಿತ್ಯ ಡಾ.ಅಕ್ಕಮಹಾದೇವಿ, ಡಾ.ಎನ್‌.ಎನ್‌. ಚಿಕ್ಕಮಾದು, ಡಾ. ಕೆ.ಟಿ.ಕೆಂಪೇಗೌಡ, ಜೀವನಹಳ್ಳಿ ಸಿದ್ಧಲಿಂಗಪ್ಪ, ಡಾ.ಜ್ಯೋತಿ ಶಂಕರ್‌ ಮತ್ತು ಬಿ.ವೆಂಕಟರಾಮಣ್ಣ ಜಿಲ್ಲೆಗೊಬ್ಬ ತಜ್ಞರು: ಆಯಾ ಜಿಲ್ಲಾ ವ್ಯಾಪ್ತಿಯ ಸಾಹಿತಿಗಳ ಮಾಹಿತಿ ಕಲೆ ಹಾಕಲು, ಜಿಲ್ಲೆಗೊಬ್ಬ ಕ್ಷೇತ್ರ ತಜ್ಞರ ನೇಮಕ. ಕಸಾಪದಲ್ಲಿ ಕೆಲಸ ಮಾಡಿರುವ
ವ್ಯಕ್ತಿಗಳಿಗೆ ಮನ್ನಣೆ. ಅಂತರ್ಜಾಲದಲ್ಲೂ ಲಭ್ಯವಿರಲಿದ್ದಾರೆ. ಕನ್ನಡ ಸಾಹಿತ್ಯ ಕೋಶ ಪುಸ್ತಕ ರೂಪದಲ್ಲಿ ಬಂದ ಬಳಿಕ, ಅದು ಜಾಲತಾಣದಲ್ಲೂ ಕೂಡ ಸಿಗಲಿದೆ.

Advertisement

ಸಲಹಾ ಸಮಿತಿ ನೇಮಕ
ಕನ್ನಡ ಸಾಹಿತಿಗಳ ಕೋಶ ಹೊರತರುವ ಸಂಬಂಧ ಅಕಾಡೆಮಿ ಸಲಹಾ ಸಮಿತಿ ನೇಮಿಸಿದೆ. ನಾಡಿನ ಎಲ್ಲ ಸಾಹಿತಿಗಳ ಹೆಸರು ಈ ಸಮಿತಿ ಮುಂದೆ ಬರಲಿದ್ದು, ಕೋಶದಲ್ಲಿ ಯಾರ್ಯಾರು ಇರಬೇಕು ಎಂಬುದು ಅಂತಿಮವಾಗಲಿದೆ. ಸಮಿತಿಯಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರೊ.ಬಿ.ಎ.ವಿವೇಕ ರೈ, ಪ್ರೊ.ಸಿ.ಎನ್‌. ರಾಮಚಂದ್ರನ್‌, ಡಾ.ಕೆ.ಸಂಧ್ಯಾರೆಡ್ಡಿ ಇದ್ದಾರೆ. ಅಲ್ಲದೆ, ಯೋಜನಾ ಸಂಪಾದಕರಾಗಿ ಶಾ.ಮಂ. ಕೃಷ್ಣ (ಬೆಂಗಳೂರು ಕೇಂದ್ರ) ಮತ್ತು ಪ್ರೊ.ಡಿ.ಕೆ. ರಾಜೇಂದ್ರ (ಮೈಸೂರು ಕೇಂದ್ರ)ಅವರು ಕಾರ್ಯನಿರ್ವಹಿಸಲಿದ್ದಾರೆ.

ಬಂಗಾರದಲೆಗಳು’ಯೋಜನೆಯಡಿ ಕೋಶ ರಚನೆ ಕಾರ್ಯಕ್ಕೆ ಅಕಾಡೆಮಿ ಮುಂದಾಗಿದೆ. ಈಗಾಗಲೇ 4 ಸಾವಿರ ಸಾಹಿತಿಗಳ ಹೆಸರುಗಳನ್ನು ಸಂಗ್ರಹಿಸಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 
 ಅರವಿಂದ ಮಾಲಗತ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

„ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next