Advertisement

“ಕೃತಿಯ ಅನನ್ಯತೆಯಲ್ಲೇ ಸಾಹಿತ್ಯ ವಿಮರ್ಶೆ ಅಗತ್ಯ’

10:41 PM Feb 27, 2020 | Sriram |

ಉಡುಪಿ: ಸಾಹಿತ್ಯ ಕೃತಿಗಳ ಅನನ್ಯತೆಯನ್ನು ಇಟ್ಟುಕೊಂಡೇ ವಿಮರ್ಶೆ ಮಾಡಬೇಕು ಎಂದು ಶಿವಮೊಗ್ಗ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

Advertisement

ಗುರುವಾರ ಎಂಜಿಎಂ ಕಾಲೇಜಿನ ವಾರ್ಷಿಕೋತ್ಸವ, ಮುದ್ದಣ ಸಾಹಿತ್ಯೋ ತ್ಸವದ ಅಂಗವಾಗಿ ವಿ.ಎಂ. ಇನಾಂದಾರ್‌ ವಿಮರ್ಶಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. “ಆಯ್ದ ವಿಮರ್ಶಾ ಲೇಖನಗಳು’ ಕೃತಿಗೆ ಪ್ರಶಸ್ತಿ ಪ್ರದಾನ ನಡೆಯಿತು.

ವಿಮರ್ಶಾ ಕ್ಷೇತ್ರ ಸಂದಿಗ್ಧ ಸ್ಥಿತಿಯಲ್ಲಿದೆ. ವೈಚಾರಿಕತೆ ಮಾದರಿ ಬದಲಾಗುತ್ತಿದೆ. ಪಶ್ಚಿಮದ ವಿಮರ್ಶಾ ಮಾರ್ಗ ಅನುಸರಿ ಸಬೇಕೋ? ನವ್ಯ, ನವೋದಯದ ಮಾರ್ಗ ಅನುಸರಿಸಬೇಕೋ ಎಂಬ ಪ್ರಶ್ನೆ ಬರುತ್ತದೆ. ಹಾಗಿದ್ದರೆ ಪರ್ಯಾಯ ಮಾರ್ಗದ ಅಗತ್ಯವಿದೆ. ಸಾಹಿತ್ಯ ವಿಮರ್ಶೆ ಅಂದರೆ ಲೋಕ ವಿಮರ್ಶೆ ಎಂದು ಡಿ.ಆರ್‌. ನಾಗರಾಜ್‌ ಹೇಳುತ್ತಿದ್ದುದು ಉಲ್ಲೇಖ ನೀಯ. ಸಾಹಿತ್ಯ ಕೃತಿಗಳು ಸಮಾಜ ಬದ್ಧ ವಾಗಿರುತ್ತದೆ. ಕೃತಿಯ ಅನನ್ಯತೆಯನ್ನು ಆಧರಿಸಿಕೊಂಡೇ ವಿಮರ್ಶೆ ಮಾಡಬೇಕು. ಕನ್ನಡ/ ಕರ್ನಾಟಕದ ಸಂಸ್ಕೃತಿಗಳು ಹಲವು ಪ್ರಾದೇಶಿಕ ಸಂಸ್ಕೃತಿಗಳ ಒಕ್ಕೂಟವಾಗಿದೆ. ಪ್ರಾಚೀನ ಕಾಲದಿಂದಲೂ ನಮ್ಮ ನೆಲೆ ಸಂಸ್ಕೃತಿಗಳನ್ನು ಕಾಪಿಟ್ಟುಕೊಂಡು ಬರ ಲಾಗಿದೆ. ಕನ್ನಡದ ನವೋದಯಕ್ಕೆ ಹಲವು ಮುಖಗಳಿದ್ದವು. ಧಾರವಾಡ, ಮೈಸೂರು, ಹೈದರಾಬಾದ್‌ ಕರ್ನಾಟಕದಂತೆ ಕರಾವಳಿ ಭಾಗವೂ ಇಲ್ಲಿನ ನೆಲೆಯನುಸಾರ ಸಾಹಿತ್ಯದ ಸೃಷ್ಟಿಯಾಯಿತು. ಇಲ್ಲಿ ವಿದ್ವತ್ತು ಮತ್ತು ಸಾಹಿತ್ಯದ ಸೃಷ್ಟಿಯಾಯಿತು ಎಂದರು.

ಮುದ್ದಣ ಪುರಸ್ಕಾರ
ಯಕ್ಷಗಾನ ಕಲಾವಿದ ಗಣೇಶ ಕೊಲೆಕಾಡಿ ಮತ್ತು ಜಾನಪದ ವಿದ್ವಾಂಸ, ಪತ್ರಕರ್ತ ಕೆ.ಎಲ್‌. ಕುಂಡಂತಾಯ ಅವರನ್ನು ಮುದ್ದಣ 150 ವರ್ಷಾಚರಣೆ ಪ್ರಯುಕ್ತ ಮುದ್ದಣ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಪ್ರಾಂಶುಪಾಲ ಡಾ| ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗ ಮುಖ್ಯಸ್ಥ ಡಾ| ಪುತ್ತಿ ವಸಂತಕುಮಾರ್‌ ಸ್ವಾಗತಿಸಿ, ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಕೃತಿ ವಿಶ್ಲೇಷಣೆ ನಡೆಸಿದರು.

Advertisement

ನಂದಳಿಕೆ ಮುದ್ದಣ ಪ್ರಕಾಶನದ ಮುಖ್ಯಸ್ಥ ನಂದಳಿಕೆ ಬಾಲಚಂದ್ರ ರಾವ್‌ ಶುಭ ಕೋರಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಲಕ್ಷ್ಮೀನಾರಾಯಣ ಕಾರಂತ ವಂದಿಸಿದರು. ಉಪನ್ಯಾಸಕ ಪ್ರಶಾಂತ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ| ಎಂ.ಎಲ್‌. ಸಾಮಗ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನವ್ಯಶ್ರೀ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.

ಸಹಿಸದ ಪರಂಪರೆ
ದಿಲ್ಲಿಯಲ್ಲಿ ಭಿನ್ನಮತದ ಧ್ವನಿಗಳನ್ನು ಸಹಿಸದ ಪರಂಪರೆ ಕಂಡು ಬರುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ, ಆರ್ಥಿಕತೆ ಕುಸಿಯುತ್ತಿದೆ, ನಷ್ಟ ವೆಂದು ತೋರಿಸಿ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಮುಖ್ಯ ಅತಿಥಿ, ಡಾ| ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾ ಧಿಕಾರಿ ಡಾ| ಮಹಾಬಲೇಶ್ವರ ರಾವ್‌ ಕಳವಳ ವ್ಯಕ್ತಪಡಿಸಿದರು. ಸಾಹಿತ್ಯದ ಅಧ್ಯಯನಕ್ಕಿಂತಲೂ ಈಗ ಸಂಸ್ಕೃತಿಯ ವಿಮರ್ಶೆ, ತಣ್ತೀಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರದಂತಹ ವಿಷಯಗಳ ಅಧ್ಯಯನ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next