Advertisement

ಸಾಹಿತ್ಯ ಸಮ್ಮೇಳನ ವಿವಾದ: ಕಸಾಪಗೆ ದೂರು

05:02 PM Jan 02, 2021 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸದೆ 23ನೇ ಸಾಹಿತ್ಯ ಸಮ್ಮೇಳನವನ್ನು ವಿಜಯಪುರದಲ್ಲಿ ನಡೆಸಲು ಮುಂದಾಗಿರುವ ಬೆಂ.ಗ್ರಾ. ಕಸಾಪ ಜಿಲ್ಲಾ ಅಧ್ಯಕ್ಷ ಅವರ ಮೇಲೆ ಕ್ರಮ ಕೈಗೊಂಡು, ನಿಯಮಾನುಸಾರ ಸಮ್ಮೇಳನ ನಡೆಸಬೇಕು. ಹಾಗೂ 22ನೇ ಸಾಹಿತ್ಯ ಸಮ್ಮೇಳನದ ಹಣ ದುರುಪಯೋಗದ ಬಗ್ಗೆ ತನಿಖೆ ಮಾಡಬೇಕು ಎಂದುದೊಡ್ಡಬಳ್ಳಾಪುರದ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ದೂರು ನೀಡಲಾಗಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಜೀವ್‌ ನಾಯಕ್‌,ಡಿ.ಪಿ.ಆಂಜನೇಯ, ಚೌಡರಾಜ್‌, ಬೆಂಗಳೂರುಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾಗಿರುವ ಚಿ.ಮಾ.ಸುಧಾಕರ್‌ ಅವರು, “ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿದ್ದ ಸಮ್ಮೇಳನವನ್ನು ನಡೆಸದೆ ವಿಜಯಪುರದಲ್ಲಿಮತ್ತೂಂದು ಸಮ್ಮೇಳನ ನಡೆಸಲುಮುಂದಾಗಿರುವುದು ಖಂಡನೀಯ. 22ನೇಸಮ್ಮೇಳನ ನಡೆಸದೇ, 23ನೇ ಸಮ್ಮೇಳನಕ್ಕೆಬೇರೊಬ್ಬ ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಿರುವುದಕ್ಕೆ ಸಂಬಂಧಪಟ್ಟವರ ಅನುಮತಿಸಹ ಪಡೆದಿಲ್ಲ. ಹಿರಿಯ ಕನ್ನಡಪರಹೋರಾಟಗಾರರಾದ ತ.ನ.ಪ್ರಭುದೇವ್‌ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿ, ಇದೀಗ ಅಪಮಾನಿಸುವ ಕೆಲಸ ಆಗುತ್ತಿದೆ. ಈ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರೊಂದಿಗೆ ಮಾತನಾಡಿದರೆ ಅವರು ಹಾರಿಕೆ ಉತ್ತರ ನೀಡಿದ್ದಾರೆ’ ಎಂದರು.

ಈ ಸಂಬಂಧ ಜಿಲ್ಲಾಧ್ಯಕ್ಷರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕಳೆದ 5 ವರ್ಷಗಳಿಂದಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗಬಿಡುಗಡೆಯಾದ ಹಣ ಹಾಗೂ ವಿನಿಯೋಗದಬಗ್ಗೆ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿಪ್ರಕಟಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಪರಿಷತ್ತಿಗೆ ಮನವಿ ಸಲ್ಲಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಕೆ.ರಾಜ್‌ಕುಮಾರ್‌ ಮನವಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next