Advertisement
ಏನಿದು ಕಾರ್ಯಕ್ರಮ?: ನವ ಭಾರತ ಸಾಕ್ಷರತಾ ಕಾರ್ಯಕ್ರಮವು ದೇಶಾದ್ಯಂತ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ 2022ರಿಂದ 2027ರ ಅವಧಿಯೊಳಗೆ ಅನುಷ್ಠಾನಗೊಳ್ಳುತ್ತಿದೆ. ಹದಿನೈದು ವರ್ಷ ಮೇಲ್ಪಟ್ಟ ಅನಕ್ಷರಸ್ಥರಿಗೆ ಮೊಬೈಲ್ ಆ್ಯಪ್ ಮತ್ತು ಇನ್ನಿತರ ಆನ್ ಲೈನ್ ಕಲಿಕಾ ಮಾದರಿಗಳ ಮೂಲಕ ಅಕ್ಷರ ಮತ್ತು ಸಂಖ್ಯಾ ಜ್ಞಾನವನ್ನು ಕಲಿಸುವುದು ಈ ಯೋಜನೆಯ ಉದ್ದೇಶ. ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಕಲಿಸುವು ದರ ಜೊತೆಗೆ ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ವಾಣಿಜ್ಯ ಕೌಶಲ್ಯಗಳು, ಆರೋಗ್ಯ ರಕ್ಷಣೆ ಮತ್ತು ಜಾಗೃತಿ, ಮಕ್ಕಳ ಆರೈಕೆ ಮತ್ತು ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮ ಪರಿಚಯಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ನೆರವು ಪಡೆಯಲಾಗುತ್ತಿದೆ.
Related Articles
Advertisement
ವಿವಿಧ ಇಲಾಖೆಗಳ ಕಾರ್ಯಪಡೆ : 2030ಕ್ಕೆ ನಮ್ಮ ದೇಶದ ಅನಕ್ಷರತೆ ಯನ್ನು ತೊಡೆದು ಹಾಕಿ ಶೇಕಡಾ ನೂರರಷ್ಟು ಸಾಕ್ಷರತೆಯನ್ನು ಸಾಧಿ ಸುವ ಗುರಿ ನವ ಭಾರತ ಸಾಕ್ಷರತಾದ ಕಾರ್ಯಕ್ರಮದ ಉದ್ದೇಶವಾಗಿದೆ. ಜಿಲ್ಲೆಯಲ್ಲಿಯೂ ಇದನ್ನು ಅನುಷ್ಠಾನಗೊಳಿಸಲು ಸಮಾಜ ಕಲ್ಯಾಣ, ಆರೋಗ್ಯ, ಡಿಡಿಪಿಐ, ಡಿಡಿಪಿಯು, ನಗರಸಭೆ ಮತ್ತಿತರ ಇಲಾಖೆಗಳನ್ನೊಳಗೊಂಡ ಕಾರ್ಯ ಪಡೆಯನ್ನು ರಚಿಸಲಾಗಿದೆ.
32,000 ಮಂದಿ ಅನಕ್ಷರಸ್ಥರು : ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಉಲ್ಲಾಸ್ ಆ್ಯಪ್ ಮೂಲಕ 32 ಸಾವಿರ ಮಂದಿ ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಈ ಪೈಕಿ ಕಳೆದ ವರ್ಷ 16 ಮಂದಿಗೆ ಯೋಜನೆಯನ್ನು ಆರಂಭಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆಯ್ದ 23 ಗ್ರಾಪಂಗಳ 16 ಸಾವಿರ ಮಂದಿಗೆ ಕಲಿಕೆ ಆರಂ ಭಿಸಲಾಗುತ್ತದೆ. ಪರಿಣಾಮಕಾರಿ ಕಲಿಕೆಗಾಗಿ ಭೌತಿಕ ಸಿದ್ಧತೆ ಹಾಗೂ ಆನ್‌ಲೈನ್ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ 2027 ರವರೆಗೂ ಕಲಿಕೆ ಮುಂದುವರಿಯಲಿದೆ.
ಕೇಂದ್ರ ಸರ್ಕಾರದ ಅಯವ್ಯಯದಲ್ಲಿ ನವಭಾರತ ಸಾಕ್ಷರತಾ ಕಾರ್ಯಕ್ರಮ ಎಂಬ ಶೀರ್ಷಿಕೆಯಡಿ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಹೊಸ ಯೋಜನೆ ಘೋಷಿಸಲಾಗಿದ್ದು, ಈ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು. ಬ್ಲಾಕ್ ಪಡೆಯೊಂದಿಗೆ ನಿಯಮಿತವಾಗಿ ಪ್ರತಿ ತಿಂಗಳು ಸಂವಹನಕ್ಕೆ ಅವಕಾಶ ಮಾಡಿಕೊಂಡು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಬೇಕಾಗುತ್ತದೆ. – ಅಕ್ರಂ ಪಾಷ, ಜಿಲ್ಲಾಧಿಕಾರಿ
ಮನೆ ಮನೆ ಭೇಟಿ, ಫೋನ್ ಮೂಲಕ ಹಾಗೂ ಉಲ್ಲಾಸ್ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ಅನಕ್ಷರಸ್ಥರನ್ನು ಪತ್ತೆ ಮಾಡಿ ಅವರಿಗೆ ಬಿಎಡ್, ಡಿಎಡ್ ವಿದ್ಯಾರ್ಥಿಗಳ ಮೂಲಕ ಬೋಧಿಸುವ ಮೂಲಕ ವಿವಿಧ ಹಂತಗಳಲ್ಲಿ 2027 ರೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಶೇ.16 ರಷ್ಟು ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸಿ ಸಂಪೂರ್ಣ ಸಾಕ್ಷರತೆಯನ್ನು ಸಾಧಿಸುವುದು ನವಭಾರತ ಸಾಕ್ಷರತಾ ಕಾರ್ಯಕ್ರಮದ ಗುರಿಯಾಗಿದೆ. -ಸಿ.ಆರ್.ಅಶೋಕ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ
-ಕೆ.ಎಸ್.ಗಣೇಶ್