Advertisement

ಹೃದಯದ ಮಾತು ಕೇಳಿ

10:23 AM Sep 30, 2019 | mahesh |

ನಮ್ಮನ್ನು ಕಾಡುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹೃದಯದ ಕಾಯಿಲೆಯೂ ಒಂದು. ಇದಕ್ಕೆ ವಯಸ್ಸಿನ ಭೇದವಿಲ್ಲದೆ ಜನ ಬಲಿಯಾಗುತ್ತಿದ್ದು, ಜಾಗೃತಿ ಅಗತ್ಯ. ಸಕಲ ಜೀವಿಗಳ ಅಸ್ತಿತ್ವಕ್ಕೆ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ದಿನವನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ.

Advertisement

ಶೇ.45 ರೋಗಿಗಳು
ದೇಶದಲ್ಲಿ ಶೇ.45 ರಷ್ಟು ಜನರಲ್ಲಿ ಹೃದಯ ಸಮಸ್ಯೆ ಕಂಡುಬರುತ್ತದೆ. ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ 2.6 ಕೋಟಿ ಜನರು ಹೃದಯಾ ಘಾತದಿಂದ ಸಾಯುತ್ತಿದ್ದಾರೆ. 2017ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ ಶೇ.50 ರಷ್ಟು ಜನ ಮಾತ್ರ ಹೃದಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಲಿನ್ಯವೂ ಕಾರಣ!
ವಾಯು ಮಾಲಿನ್ಯದಿಂದ ಬರುವ ಮಿಥೇನ್‌ ಅನಿಲವೂ ಹೃದಯದ ಸಮಸ್ಯೆಗೆ ಕಾರಣವಾಗಬಹುದಾಗಿದೆ. ಇದು ಶ್ವಾಸಕೋಶದಲ್ಲಿ ರಕ್ತದ ಹರಿವಿಗೆ ಅಡ್ಡಿಯನ್ನುಂಟು ಮಾಡಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ.

ಹೃದಯ ವೈಫ‌ಲ್ಯ ಹೇಗಾಗುತ್ತದೆ?
ಪದೇ ಪದೇ ಉಂಟಾಗುವ ಹೃದಯಾಘಾತವು ಹೃದಯದ ಪಂಪಿಂಗ್‌ ಸಾಮರ್ಥ್ಯವನ್ನು ಶೇ.70 ರಿಂದ ಶೇ.30ಕ್ಕೆ, ಕೆಲವು ಸಲ ಇನ್ನೂ ಕಡಿಮೆಯಾಗುತ್ತದೆ. ಹೃದಯದ ನಾಳದಲ್ಲಿ ಸಮಸ್ಯೆ, ಪರಿಧಮನಿಯ ಕಾಯಿಲೆ, ಹೆಚ್ಚಿನ ರಕ್ತದೊತ್ತಡಗಳು ಕಾರಣವಾಗುತ್ತವೆ.

ಕೊಲೆಸ್ಟ್ರಾಲ್‌ನಿಂದ ದೂರ ಇರಿ
ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಿಸುವ ಆಹಾರವನ್ನು ಸೇವಿಸುವುದರಿಂದ ರಕ್ತನಾಳಗಳಲ್ಲಿ ಅವುಗಳು ಸಂಗ್ರಹ ಗೊಳ್ಳುತ್ತವೆ. ಇವು ಒಂದು ಹಂತದ ಬಳಿಕ ಹೃದಯದ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದ ಹೃದಯಸ್ತಂಭನ ಸಂಭವಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ನಾರು ಪದಾರ್ಥ, ಕಡಿಮೆ ಕೊಲೆಸ್ಟ್ರಾಲ್‌ ಇರುವ ಆಹಾರ ಸೇವನೆ, ವ್ಯಾಯಾಮಗಳನ್ನು ಅನುಸರಿಸಬಹುದಾಗಿದೆ.

Advertisement

ಬಿ.ಪಿ. ನಿಯಂತ್ರಣ
ಅಧಿಕ ರಕ್ತದೊತ್ತಡ ಹೃದಯಕ್ಕೆ ಕಂಟಕವಾದುದು. ರಕ್ತನಾಳ‌ಗಳೊಳಗೆ ಸಂಗ್ರಹಗೊಳ್ಳುವ ಕೊಬ್ಬು, ಜಿಡ್ಡುಗಳು ರಕ್ತದೊತ್ತಡಕ್ಕೆ ಕಾರಣವಾಗುತ್ತವೆ. ಇದನ್ನು ವೈದ್ಯರ ಚಿಕಿತ್ಸೆಯಿಂದ ನಿಯಂತ್ರಣಕ್ಕೆ ತರಬಹುದು.

ತೂಕ ಕಡಿಮೆ ಮಾಡಿ
ರಕ್ತದೊತ್ತಡ ಕಡಿಮೆ ಮಾಡ ಬೇಕಾದರೆ ತೂಕ ಇಳಿಸುವುದೂ ಅನಿವಾರ್ಯ. ಸ್ಥೂಲ ಕಾಯದವರಲ್ಲಿ ಮಧುಮೇಹ, ಹೆಚ್ಚಿನ ಕೊಲೆಸ್ಟ್ರಾಲ್‌ ಸಾಮಾನ್ಯವಾಗಿವೆ. ಇದನ್ನು ದೂರವಿಡಲು ಆಹಾರ ಮತ್ತು ಜೀವನಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಮುಖ್ಯ.

ಹಣ್ಣು-ತರಕಾರಿ ಸೇವಿಸಿ
ಹಣ್ಣು ಮತ್ತು ಹಸಿ ತರಕಾರಿಗಳನ್ನು ಸೇವಿಸಬೇಕು. ಇವುಗಳಲ್ಲಿ ವಿಟಮಿನ್‌, ಇತರ ಪೋಷಕಾಂಶಗಳು ಹೇರಳ ವಾಗಿರುತ್ತದೆ. ಜತೆಗೆ ನಾರುಗಳು, “ಆ್ಯಂಟಿ ಆಕ್ಸಿಡೆಂಟ್‌’ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಲಬ್‌-ಡಬ್‌ ಯಾಕೆ ಗೊತ್ತಾ..?
ಹೃದಯದಲ್ಲಿ 4 ಕವಾಟಗಳಿವೆ. ಅವುಗಳ ಕಾರ್ಯ ಏನೆಂದರೆ ರಕ್ತವನ್ನು ದೇಹದ ಮೂಲೆ ಮೂಲೆಗೆ ಪಂಪ್‌ ಮಾಡುವುದು. ಈ 4 ಕವಾಟಗಳು ಮುಚ್ಚಿ ತೆರೆದುಕೊಳ್ಳುವುದರಿಂದ ಈ ಲಬ್‌-ಡಬ್‌ ಶಬ್ದ ಬರುತ್ತದೆ.

ಕಾಯಿಲೆಗೆ ಕಾರಣಗಳು?
·  ಮದ್ಯಪಾನ, ಧೂಮಪಾನ ದಿಂದ ಬರುತ್ತದೆ.
·  ಸಂಸ್ಕರಿಸಿದ ಆಹಾರ ಮತ್ತು ಜಂಕ್‌ಫ‌ುಡ್‌ ಸೇವನೆಯಿಂದ.
·  ಅಧಿಕ ಒತ್ತಡ, ವ್ಯಾಯಾಮ ರಹಿತ ಜೀವನ ಇತ್ಯಾದಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ಈ ವರ್ಷದ ಧ್ಯೇಯವಾಕ್ಯ ಏನು?
ಈ ವರ್ಷ ನನ್ನ ಹೃದಯ-ನಿಮ್ಮ ಹೃದಯ ಎಂಬ ಧ್ಯೇಯವಾಕ್ಯದೊಡನೆ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ನಿಮ್ಮ ಹೃದಯದೊಂದಿಗೆ‡ ನಿಮ್ಮವರ ಹೃದಯದ ಕಾಳಜಿಯೂ ನಿಮ್ಮ ಹೊಣೆಗಾರಿಕೆ ಎಂಬ ಸಂದೇಶವನ್ನು ನೀಡಿದೆ.

·  ದಿನಕ್ಕೆ 1ಲಕ್ಷ ಬಾರಿ ಹೃದಯ ಪಂಪ್‌ ಆಗುತ್ತದೆ.
·  ಜೀವಿತಾವಧಿಯಲ್ಲಿ ಇದು ಪಂಪ್‌ ಮಾಡುವ ರಕ್ತದ ಪ್ರಮಾಣ 10 ಲಕ್ಷ ಬ್ಯಾರೆಲ್‌.
·  ಭಾರತದಲ್ಲಿ ಶೇ.40 ರಷ್ಟು ಮಂದಿ ಹೃದಯ ವೈಫ‌ಲ್ಯದಿಂದ ಸಾವನ್ನಪ್ಪುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next