Advertisement
ಒಂದೆಡೆ ಅಭ್ಯರ್ಥಿಗಳ ಆಯ್ಕೆ ಸಮಸ್ಯೆ ಆಗುತ್ತಿರುವುದರಿಂದ ಅದನ್ನು ಸಮರ್ಥವಾಗಿ ಎದುರಿಸುವುದು, ಕೈ ತಪ್ಪಿದ ಅಭ್ಯರ್ಥಿ-ಬೆಂಬಲಿಗರನ್ನು ಸಮಾಧಾನಿಸಲು ಪಕ್ಷಗಳು ಗಮನ ನೀಡುತ್ತಿದೆ. ಹೀಗಾಗಿ ಇಂದು-ನಾಳೆ ಮಂಗಳೂರಿನ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ.
Related Articles
Advertisement
“ಸಮಾಧಾನ ಮೀಟಿಂಗ್’!ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಗೊಳ್ಳುತ್ತಿದ್ದಂತೆ 5-6 ವಾರ್ಡ್‌ಗಳ ಆಕಾಂಕ್ಷಿ ಗಳಿಂದ, ಬೆಂಬಲಿಗರಿಂದ ಅಸಮಾಧಾನದ ಮಾತು ಕೇಳಿಬಂದಿವೆ. ವಾರ್ಡ್ ಬಿಜೆಪಿ ಸಮಿತಿ ಸಭೆಯಲ್ಲಿ ಆಯ್ಕೆಗೊಂಡ ಹೆಸರು ಪಟ್ಟಿಯಲ್ಲಿ ಬಿಡುಗಡೆಯಾಗದ ಬಗ್ಗೆ ಕೆಲವು ಅಭ್ಯರ್ಥಿಗಳು ಪಕ್ಷದ ಪ್ರಮುಖರಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಅವರನ್ನು ಸಮಾಧಾನಿಸುವ ಕೆಲಸ ಪಕ್ಷದ ಕಚೇರಿಯಲ್ಲಿ ಮಂಗಳವಾರ ಬಿರು ಸಿನಿಂದ ನಡೆದಿದೆ. ಅದರಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ಕಚೇರಿಯಲ್ಲಿ ಮಂಗಳ ವಾರ ಇದ್ದ ಹಿನ್ನೆಲೆಯಲ್ಲಿ ಅಸಮಾಧಾನ ತಿಳಿಮಾಡುವ ಕೆಲಸ ನಡೆದಿದೆ. ಈ ಮಧ್ಯೆ ಜೆಡಿಎಸ್ ಕೂಡ ಅಭ್ಯರ್ಥಿ ಆಯ್ಕೆಯ ಪಟ್ಟಿಯನ್ನು ಬುಧವಾರ ಪ್ರಕಟಿಸಲು ನಿರ್ಧರಿಸಿದೆ. ಜೆಡಿಎಸ್ ರಾಜ್ಯ ಸಮಿತಿ ಪ್ರಮುಖರು ಪಟ್ಟಿ ಪ್ರಕಟನೆ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಕಾಂಗ್ರೆಸ್-ಜೆಡಿಎಸ್; ಇಂದು ಸಂಜೆ ಅಭ್ಯರ್ಥಿಗಳ ಪಟ್ಟಿ
ಜಿಲ್ಲಾ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಬಂಡಾಯ ಸಾಧ್ಯತೆಗಳನ್ನು ಮಟ್ಟಹಾಕುವ ಕಾರ್ಯತಂತ್ರ ಅನುಸರಿಸುತ್ತಿದೆ. ಇದಕ್ಕಾಗಿ ಪಟ್ಟಿಯನ್ನು ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗ ಪ್ರಕಟಿಸಲು ನಿರ್ಧರಿಸಿದೆ. ಬುಧವಾರ ಸಂಜೆ ಕಾಂಗ್ರೆಸ್ ಪಕ್ಷದ ವೀಕ್ಷಕರಾದ ವಿ.ಆರ್. ಸುದರ್ಶನ್, ಯು.ಬಿ. ವೆಂಕಟೇಶ್ ಆಗಮಿಸಿ ಪಟ್ಟಿ ಪ್ರಕಟಿಸಲಿದ್ದಾರೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು (ಇಂದು ಹೊರತುಪಡಿಸಿ) ಒಂದು ದಿನ ಮಾತ್ರ ಬಾಕಿ ಇದೆ. ಈ ವೇಳೆ ಅವಕಾಶ ವಂಚಿತರಾಗುವ ಅಭ್ಯರ್ಥಿಗಳು ಬಂಡಾಯ ಎದ್ದರೂ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶವಾಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದೆ. ಕಾಂಗ್ರೆಸ್ ಸಿದ್ಧಪಡಿಸಿದ ಪಟ್ಟಿಯ ಸುಳಿವು ಕೆಲವರಿಗೆ ದೊರೆತಿದ್ದು, ಪರಿಣಾಮವಾಗಿ ಅಸಮಾಧಾನ ಈಗಾಗಲೇ ಹೊಗೆಯಾಡಲಾರಂಭಿಸಿದೆ. - ದಿನೇಶ್ ಇರಾ