Advertisement
ಸ್ವಚ್ಛತೆಯಲ್ಲಿ ಪ್ರಗತಿಕಳೆದ ಬಾರಿ ದಕ್ಷಿಣ ಭಾರತದಲ್ಲಿ 273ನೇ ಸ್ಥಾನದಲ್ಲಿದ್ದ ಪುತ್ತೂರು ನಗರ ಈ ಬಾರಿ 43ನೇ ಸ್ಥಾನ ಸಂಪಾದಿಸುವ ಮೂಲಕ ಭಾರೀ ಪ್ರಗತಿ ಕಂಡಿದೆ ಎನ್ನುತ್ತಿದೆ ಅಂಕಿ ಅಂಶ. ರಾಜ್ಯದ ರ್‍ಯಾಂಕ್ ಪಟ್ಟಿ ಗಮನಿಸಿದರೆ ಪುತ್ತೂರು 6ನೇ ಸ್ಥಾನ ಪಡೆದಿದೆ. ದ.ಕ. ಜಿಲ್ಲೆಯಲ್ಲಿ ಅಗ್ರಸ್ಥಾನ ಹೊಂದಿದೆ. ಉಳ್ಳಾಲ 8ನೇ ಸ್ಥಾನ ಪಡೆದು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಸ್ವಚ್ಛ ಸರ್ವೇಕ್ಷಣೆಗೆ ಮಾನದಂಡ ಪಾಲಿಸಲಾಗುತ್ತದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ಬಯಲು ಮುಕ್ತ ಶೌಚಾಲಯ ಪ್ರಮುಖ ಪಾತ್ರ ವಹಿಸು ತ್ತವೆ. ನಗರದ ಸ್ವತ್ಛತೆ ಬಗ್ಗೆ ಪಾಲಿಕೆ ಅಧಿಕಾರಿಗಳಿಂದ ಕೇಂದ್ರದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ನಗರಸಭೆಗೆ ಮುನ್ಸೂಚನೆ ನೀಡದೆ ಬಂದು ಪರಿಶೀಲನೆ ನಡೆಸುತ್ತಾರೆ. ಜತೆಗೆ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತದೆ. ಒಟ್ಟು ಒಂದು ವರ್ಷದ ಎಲ್ಲ ಅಂಕಿ ಅಂಶ ಆಧರಿಸಿ ಸ್ವತ್ಛತಾ ಪಟ್ಟಿಯ ರ್‍ಯಾಂಕ್ ನೀಡಲಾಗುತ್ತದೆ. ಸ್ವಚ್ಛತೆಯ ನೋಟ
31 ವಾರ್ಡ್ ಹೊಂದಿರುವ ಪುತ್ತೂರು ನಗರಸಭೆ ವಿಸ್ತಾರವಾದ ವ್ಯಾಪ್ತಿ ಹೊಂದಿದೆ. ಈಗಿನ ಲೆಕ್ಕಾಚಾರದಲ್ಲಿ ನಗರದಲ್ಲಿ 60 ಸಾವಿರ ಜನಸಂಖ್ಯೆ ಇದೆ. 12,500 ಸಾವಿರ ಮನೆ, 2,500 ವಾಣಿಜ್ಯ ಸಹಿತ ಇತರ ಕಟ್ಟಡಗಳಿವೆ. ನಗರದಲ್ಲಿ ದಿನಂಪ್ರತಿ 18 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಸಂಗ್ರಹಿತ ತ್ಯಾಜ್ಯವನ್ನು ಬನ್ನೂರಿನ ನೆಕ್ಕಿಲ ಡಂಪಿಂಗ್ ಯಾರ್ಡ್‌ಗೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ಹಸಿ, ಒಣ ತ್ಯಾಜ್ಯ ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಗೆ ಸಿದ್ಧತೆ ನಡೆಯುತ್ತಿದ್ದು, ವೈಜ್ಞಾನಿಕ ಮಾದರಿ ತ್ಯಾಜ್ಯ ವಿಲೇವಾರಿಗೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
Related Articles
ಪ್ರತಿ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಸಲುವಾಗಿ ನಗರಸಭೆ ವತಿಯಿಂದ ಡೋರ್ ಟು ಡೋರ್ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಗೃಹ ಆಧಾರಿತ ಕಟ್ಟಡ ಸಂಪರ್ಕಕ್ಕೆ 10 ಹಾಗೂ ಇತರ ಕಟ್ಟಡ ಸಂಪರ್ಕಕ್ಕೆ 5 ತ್ಯಾಜ್ಯ ಸಾಗಾಟ ವಾಹನಗಳಿವೆ. 82 ಮಂದಿ ಪೌರ ಕಾರ್ಮಿಕರ ಅಗತ್ಯವಿದ್ದು, ಪ್ರಸ್ತುತ 53 ಮಂದಿ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಶೇ. 65ರಷ್ಟು ದಿನಂಪ್ರತಿ ಸಂಗ್ರಹ ಹಾಗೂ ಉಳಿದ ಶೇ. 35 ಸಮಯ ಗೊತ್ತು ಮಾಡಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.
Advertisement
ಸಂತಸದ ವಿಚಾರಸ್ವಚ್ಛತೆಯಲ್ಲಿ ಪುತ್ತೂರು ನಗರ ರಾಜ್ಯಕ್ಕೆ 6ನೇ ಸ್ಥಾನ ಸಂಪಾದಿಸಿರುವುದು ಸಂತಸ ತಂದಿದೆ. ಇಲ್ಲಿನ ಮೂಲ ಅಗತ್ಯಗಳಿಗೆ ಶಾಸಕರ ಬೇಡಿಕೆಗೆ ಸಂಪೂರ್ಣ ಸ್ಪಂದನೆ ನೀಡಲಾಗುವುದು. ಅಗತ್ಯವಿರುವ ಪೂರ್ಣ ಅನುದಾನ ಒದಗಿಸುತ್ತೇನೆ.
– ಡಾ| ಕೆ.ಸಿ. ನಾರಾಯಣ ಗೌಡ, ಪೌರಾಡಳಿತ ಸಚಿವರು, ಕರ್ನಾಟಕ ಸರಕಾರ ಇನ್ನಷ್ಟು ಪೂರಕ ವ್ಯವಸ್ಥೆ
ಈ ಬಾರಿ ನಗರಕ್ಕೆ ರಾಜ್ಯದಲ್ಲಿ 6, ದಕ್ಷಿಣ ಭಾರತದಲ್ಲಿ 43ನೇ ಸ್ಥಾನ ದೊರೆತಿದೆ. ಸ್ವತ್ಛತೆಗೆ ಇನ್ನಷ್ಟು ಪೂರಕ ವ್ಯವಸ್ಥೆ ಒದಗಿಸಲು ಡಂಪಿಂಗ್ ಯಾರ್ಡ್ ವೈಜ್ಞಾನಿಕವಾಗಿ ಅಭಿವೃ ದ್ಧಿಗೊಳಿಸಲು ಕಾಮಗಾರಿ ಕೈಗೆತಿ ¤ಕೊಳ್ಳಲಾ ಗಿದೆ.
-ಗುರುಪ್ರಸಾದ್ ಶೆಟ್ಟಿ, ಪರಿಸರ ಅಭಿಯಂತ, ನಗರಸಭೆ ಪುತ್ತೂರು ಕಿರಣ್ ಪ್ರಸಾದ್ ಕುಂಡಡ್ಕ