Advertisement

2018 ಹಾಕಿ ವಿಶ್ವಕಪ್‌: ಅತಿಥಿಗಳಿಗೆ ಮದ್ಯ ಪೂರೈಕೆ

06:00 AM Jun 06, 2018 | Team Udayavani |

ಹೊಸದಿಲ್ಲಿ: ಭುವನೇಶ್ವರದಲ್ಲಿ ನ. 28ರಿಂದ ಡಿ. 16ರ ವರೆಗೆ ನಡೆಯಲಿರುವ ಹಾಕಿ ವಿಶ್ವಕಪ್‌ ವೇಳೆ ಕಳಿಂಗ ಕ್ರೀಡಾಂಗಣದಲ್ಲಿ ಉಪಸ್ಥಿತರಿರುವ ಆಯ್ದ ಅತಿಥಿಗಳಿಗೆ ಮದ್ಯ ಪೂರೈಕೆ ಮಾಡಲಾಗುತ್ತದೆ. ಕೂಟದ ವೇಳೆ ಕ್ರೀಡಾಂಗಣದಲ್ಲಿ ಆಯ್ದ ಅತಿಥಿಗಳಿಗೆ ಮದ್ಯ ಪೂರೈಸಲು ಅನುಮತಿ ನೀಡುವಂತೆ ಒಡಿಶಾ ಸರಕಾರದ ಕಾರ್ಯದರ್ಶಿ ತಥಾ ಆಯುಕ್ತ ವಿಶಾಲ್‌ ದೇವ್‌ ಅವರು ಒಡಿಶಾದ ಎಕ್ಸೆ„ಸ್‌ ಆಯುಕ್ತರಿಗೆ ಜೂ. 3ರಂದು ಪತ್ರವೊಂದನ್ನು ಬರೆದಿದ್ದಾರೆ. 

Advertisement

ಹಾಕಿ ಫೆಡರೇಶನ್‌ಗಳ ಮತ್ತು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ ಅಧಿಕಾರಿ/ ಪ್ರತಿನಿಧಿಗಳಿಗೆ ಮದ್ಯ/ಬೀರ್‌ ಪೂರೈಸಲು ಅನುಮತಿ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಸಂಬಂಧ ದೇವ್‌ ಅವರನ್ನು ಸಂಪರ್ಕಿಸಿದಾಗ ಬೃಹತ್‌ ಕೂಟಗಳ ವೇಳೆ ಮದ್ಯ ಪೂರೈಸುವುದು ದೊಡ್ಡ ವಿಷಯವಲ್ಲ. ಕೇವಲ ಮದ್ಯ ಮತ್ತು ಬೀರ್‌ ಪೂರೈಸಲಾಗುತ್ತದೆ. ಅವುಗಳನ್ನು ಎಫ್ಐಎಚ್‌ ಮತ್ತು ರಾಷ್ಟ್ರೀಯ ಫೆಡರೇಶನ್‌ಗಳ ಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸರಕಾರ ಆತಿಥ್ಯ ವಹಿಸುತ್ತಿರುವ ಕಾರಣ ಅನುಮತಿ ನೀಡುವಂತೆ ಪತ್ರ ಸಲ್ಲಿಸಲಾಗಿದೆ. ರಾಜ್ಯದ ಫೆಡರೇಶನ್‌ ಈ ಕೂಟವನ್ನು ಆಯೋಜಿಸುತ್ತಿದೆ. ಹಾಗಾಗಿ ರಾಜ್ಯ ಸರಕಾರ ಇದಕ್ಕಾಗಿ ಖರ್ಚು ಮಾಡುತ್ತಿಲ್ಲ ಎಂದವರು ತಿಳಿಸಿದರು.

ಸಿದ್ಧತೆ ಸಾಗುತ್ತಿದೆ
ಪುರುಷರ ಹಾಕಿ ವಿಶ್ವಕಪ್‌ಗಾಗಿ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಆತಿಥ್ಯ ನಗರವನ್ನು ಸುಂದರ ಗೊಳಿಸಲು ಸರಕಾರ ಮತ್ತು ಭುವನೇಶ್ವರ್‌ ಮುನಿಸಿ ಪಾಲ್‌ ಕಾರ್ಪೊರೇಶನ್‌ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಭುವನೇಶ್ವರದಲ್ಲಿ 2017ರಲ್ಲಿ ಹಾಕಿ ವಿಶ್ವ ಲೀಗ್‌ ಫೈನಲ್‌ ಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅದೇ ಉತ್ಸಾಹದಲ್ಲಿ ವಿಶ್ವಕಪ್‌ ಆಯೋ ಜಿಸಲು ನಗರ ಸಜ್ಜುಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next