ಸಾಗರ: ತಾಲೂಕಿನ ಪಡವಗೋಡು ಗ್ರಾಪಂ ವ್ಯಾಪ್ತಿಯಬೆಳ್ಳಿಕೊಪ್ಪ ಗ್ರಾಮದಲ್ಲಿ ಎಂಎಸ್‌ಐಎಲ್ ಮದ್ಯದಂಗಡಿಮುಚ್ಚುವಂತೆ ಒತ್ತಾಯಿಸಿ ತಾಲೂಕು ಪ್ರಗತಿಪರ ಯುವಒಕ್ಕೂಟ, ಗ್ರಾಮ ಸುಧಾರಣಾ ಸಮಿತಿ ಮತ್ತು ಸ್ತ್ರೀಶಕ್ತಿಸಂಘಗಳ ಆಶ್ರಯದಲ್ಲಿ ಉಪ ವಿಭಾಗಾ ಧಿಕಾರಿಗಳಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಅಬಕಾರಿ ಜಿಲ್ಲಾ ಧಿಕಾರಿ ಡಾ| ಅಜಿತ್‌ಕುಮಾರ್ ಭೇಟಿ ನೀಡಿ, ಹದಿನೈದು ದಿನಗಳೊಳಗೆಮದ್ಯದಂಗಡಿ ಮುಚ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು.
ಇದಕ್ಕೂ ಮುನ್ನ ಪ್ರತಿಭಟನಾಕಾರರನ್ನುದ್ದೇಶಿಸಿಮಾತನಾಡಿದ ರಾಜ್ಯ ರೈತಸಂಘದ ಉಪಾಧ್ಯಕ್ಷಶಿವಾನಂದ ಕುಗ್ವೆ, ತಮ್ಮ ಗ್ರಾಮದ ಮಕ್ಕಳು ಹೆಂಡದಅಂಗಡಿ ವಾತಾವರಣದಲ್ಲಿ ಬೆಳೆಯಬಾರದು. ಗ್ರಾಮದಯುವಕರು ಮದ್ಯಪಾನ ಚಟಕ್ಕೆ ಬೀಳಬಾರದು ಎಂದು ಗ್ರಾಮಸ್ಥರು ಎರಡು ವರ್ಷದಿಂದ ಮದ್ಯದಂಗಡಿಸ್ಥಾಪನೆ ವಿರೋ ಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಊರಿನಬಾಗಿಲಿನಲ್ಲಿ ಗ್ರಾಮಸ್ಥರು ಉಪವಾಸ ಕುಳಿತಿದ್ದಾರೆ.ಆದರೆ ಅ ಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಶಾಸಕರುಬೆಂಗಳೂರಿನಲ್ಲಿ ಆರಾಮಾಗಿದ್ದಾರೆ. ಜನರಿಗೆ ಉದ್ಯೋಗಸೃಷ್ಟಿಸಬೇಕಾದ ಶಾಸಕರು ಗ್ರಾಮಗಳಲ್ಲಿ ಹೆಂಡದ ಅಂಗಡಿಸ್ಥಾಪನೆಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಖಂಡನೀಯ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆಮಾತನಾಡಿ, ಜಿಲ್ಲೆ ಅಬಕಾರಿ ಆಯುಕ್ತರಾಗಿ ಕ್ಯಾಪ್ಟನ್‌ಅಜಿತ್‌ಕುಮಾರ್ ಬಂದ ಮೇಲೆ ಜಿಲ್ಲೆಯಲ್ಲಿ ಸೆಕೆಂಡ್ಸ್‌ಮದ್ಯದ ಹಾವಳಿ ಜಾಸ್ತಿಯಾಗುತ್ತಿದೆ. ಬೆಳ್ಳಿಕೊಪ್ಪದಲ್ಲಿಅಕ್ರಮವಾಗಿ ಮದ್ಯದಂಗಡಿ ತೆರೆದಿರುವುದಕ್ಕೆ ನೇರ ಹೊಣೆ ಅಜಿತ್‌ಕುಮಾರ್. ಶಾಸಕರು ಇಂತಹ ಅಧಿ ಕಾರಿಗಳಿಗೆಬೆಂಬಲವಾಗಿ ನಿಂತಿದ್ದಾರೆ.
ಗ್ರಾಮಗಳ ಅಭಿವೃದ್ಧಿಗೆ ಶಾಸಕರು ಪ್ರಯತ್ನ ನಡೆಸುತ್ತಿಲ್ಲ. ಒಂದು ಮನೆಯನ್ನು ಕ್ಷೇತ್ರಕ್ಕೆ ಮಂಜೂರಾತಿ ಮಾಡಿಸಿ ತಂದಿಲ್ಲ. ಆದರೆ 15ಕ್ಕೂಹೆಚ್ಚು ಬಾರ್‌ಗಳನ್ನು ಮಂಜೂರು ಮಾಡಿಸಿದ್ದಾರೆ ಎಂದು ವ್ಯಂಗ್ಯ ಚಾಟಿ ಬೀಸಿದರು.
ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್‌ಕೆಳದಿ, ಪ್ರಮುಖರಾದ ದಿನೇಶ್ ಶಿರವಾಳ, ಸುರೇಶ್,ವೀರೇಂದ್ರ, ಲಿಂಗರಾಜ್, ರಾಮಚಂದ್ರ, ವಿಶಾಲಾಕ್ಷಮ್ಮ,ಗಿರಿಜಮ್ಮ, ಕೃಷ್ಣಮೂರ್ತಿ ಇನ್ನಿತರರು ಇದ್ದರು.