Advertisement

ಮದ್ಯ ಮಾರಾಟ: ಮಹಿಳೆ ಸೆರೆ

06:38 PM Apr 20, 2020 | mahesh |

ಆನೇಕಲ್‌: ಲಾಕ್‌ಡೌನ್‌ ಹಿನ್ನೆಲೆ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ. ಆದರೆ ಒಂದಕ್ಕೆ ನಾಲ್ಕರಷ್ಟು ಹಣಕ್ಕೆ ಅಕ್ರಮವಾಗಿ ಮದ್ಯ ಮಾರಾಟದ ದೂರು ಕೇಳಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ತಹಶೀಲ್ದಾರ್‌ ಮಹದೇವಯ್ಯ ದಾಳಿ ನಡೆಸಿ, ಮದ್ಯ ವಶಪಡಿಸಿಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಲಾಕ್‌ಡೌನ್‌ನಿಂದ ಮದ್ಯ ಮಾರಾಟಕ್ಕೆ ಬ್ರೇಕ್‌ ಬಿದ್ದಿದ್ದು, ಅದನ್ನೇ ಬಂಡವಾಳ ಮಾಡಿಕೊಂಡು, ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡು ಎಂಆರ್‌ಪಿ ಬೆಲೆಗಿಂತ ನಾಲ್ಕರಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಖಚಿತ ಮಾಹಿತಿ ಪಡೆದ ತಹಶೀಲ್ದಾರ್‌,ಬ ತಾಲೂಕಿನ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಅಂಗಡಿಯೊಂದರಲ್ಲಿ ಮಳೆಯೊಬ್ಬರು ಅಕ್ರಮ ಮದ್ಯ ಮಾರಾಟ ಮಾಡುವ ವೇಳೆ ದಾಳಿ ನಡೆಸಿ, ಮದ್ಯ ವಶಕ್ಕೆ ಪಡೆದು ಅಂಗಡಿ ಸೀಜ್‌ ಮಾಡಿದ್ದಾರೆ.

Advertisement

ತಹಶೀಲ್ದಾರ್‌ ಮಹಾದೇವಯ್ಯ ಮಾತನಾಡಿ, ಮದ್ಯ ಅಕ್ರಮ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಮದ್ಯದ ದಾಸರು ಮನೆಯಲ್ಲಿನ ವಸ್ತುಗಳನ್ನು ಮಾರಿ ಕುಡಿಯುತ್ತಿದ್ದಾರೆ. ಕ್ರಮಕೈಗೊಳ್ಳಬೇಕಾದ ಅಬಕಾರಿ ಅಧಿಕಾರಿಗಳು ಕಂಡು ಕಾಣದಂತ್ತಿದ್ದಾರೆ. ಮದ್ಯ ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಶಾಸಕ ಬಿ.ಶಿವಣ್ಣ ಮಾತನಾಡಿ, ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಾಗಿ ನಡೆಯುತ್ತಿದೆ. ಪಕ್ಕದ ತಮಿಳುನಾಡಿನಿಂದ ಜನರು ಮದ್ಯ ಖರೀದಿಗೆ ಬರುತ್ತಿದ್ದು, ಅಬಕಾರಿ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಈ ವಿಷಯವನ್ನು ಸಿಎಂ ಗಮನಕ್ಕೆ ತಂದು ಕ್ರಮಕ್ಕೆ ಆಗ್ರಹಿಸುತ್ತೇನೆನೆಂದರು.

Advertisement

Udayavani is now on Telegram. Click here to join our channel and stay updated with the latest news.

Next