Advertisement

ನಾಳೆಯಿಂದ ರಾಜ್ಯದ ಲಾಡ್ಜ್, ಬಾರ್, ಕ್ಲಬ್ ಗಳಲ್ಲಿ ಮದ್ಯ ಮಾರಾಟ

08:23 AM May 09, 2020 | keerthan |

ಬೆಂಗಳೂರು: ರಾಜ್ಯದ ಲಾಡ್ಜ್ ,ಬಾರ್, ಕ್ಲಬ್ ಗಳಲ್ಲಿ ನಾಳೆಯಿಂದ ಮದ್ಯ ಮಾರಾಟ ನಡೆಸಬಹುದು ಎಂದು ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ.

Advertisement

ನಾಳೆಯಿಂದ ಲಾಡ್ಜ್, ಬಾರ್, ಕ್ಲಬ್ ಗಳಲ್ಲಿ ಮದ್ಯ ಮಾರಾಟ ಮಾಡಬಹುದು. ಆದರೆ ಎಂಆರ್ ಪಿ ಬೆಲೆಗೆ ಮಾರಾಟ ಮಾಡಬೇಕು. ಒಂದು ವೇಳೆ ಎಂಆರ್ ಪಿ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡಿದ್ರೆ ಲೈಸನ್ಸ್ ಖಾಯಂ ಆಗಿ ರದ್ದು ಮಾಡಲಾಗುವುದು, ಇದರ ಜವಾಬ್ದಾರಿ ಮಾಲೀಕರದ್ದು ಎಂದು ಅಬಕಾರಿ ಸಚಿವರು ಹೇಳಿದರು.

ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದ ಅವರು ಆನ್ ಲೈನ್ ಮದ್ಯ ಮಾರಾಟದ ಬಗ್ಗೆ ಸುಪ್ರೀಂ ಕೋರ್ಟು ನೀಡಿದ ಆದೇಶ ನೋಡಿಲ್ಲ. ಆನ್ ಲೈನ್ ಮಾರಾಟಕ್ಕೆ ಅವಕಾಶ ನೀಡಿದರೆ ತಪ್ಪಿಲ್ಲ. ಮೊದಲಿಂದಲೂ ಆ ಬಗ್ಗೆ ಚರ್ಚೆ ಇತ್ತು. ವರ್ಷಕ್ಕೆ ಅಬಕಾರಿ ಆದಾಯ ಸರ್ಕಾರಕ್ಕೆ 25 ಸಾವಿರ ಕೋಟಿ ಬರಲಿದೆ. ಈ ವರ್ಷ 2500 ಕೋಟಿ ಹೆಚ್ಚಾಗಲಿದೆ. 22500 ಕೋಟಿ ಆದಾಯಕ್ಕೆ 2500 ಕೋಟಿ ಹೆಚ್ಚಳ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next