Advertisement

“ಇಲ್ಲಿ” ಮದ್ಯಪ್ರಿಯರ ಜೇಬಿಗೆ ಕತ್ತರಿ..!

04:08 PM Jul 20, 2021 | |

ನವ ದೆಹಲಿ : ಹಣದುಬ್ಬರ ಹೆಚ್ಚಳವಾಗುತ್ತಿರುವುದರ ನಡುವೆ ಮಧ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರತಿ ಬಾಟಲಿ ಮೇಲೆ ಶೇ. 20 ರಷ್ಟು ತೆರಿಗೆ ಹೆಚ್ಚಳ ವಾಗಿರುವ ಕಾರಣದಿಂದಾಗಿ ಮದ್ಯಪಾನ ಪ್ರಿಯರ ಜೇಬಿಗೆ ಕತ್ತರಿ ಬೀಳುವಂತಾಗಿದೆ. 200 ರೂ.ಗಳ ಮೌಲ್ಯದ ಮದ್ಯದ ಬೆಲೆ ಈಗ 240 ರೂ. ಆಗಿದೆ.

Advertisement

ಪುದುಚೆರಿಯಲ್ಲಿ ಜುಲೈ 15ರಿಂದ ಮದ್ಯದ ಬೆಲೆ ಹೆಚ್ಚಳವಾಗಿದ್ದು,ಪುದುಚೇರಿಯ ಅಬಕಾರಿ ಇಲಾಖೆಯಿಂದ ಬೆಲೆ ಹೆಚ್ಚಿಸಲು ಪ್ರಕಟಂಎಯಲ್ಲಿ ಸೂಚನೆ ನೀಡಿದೆ.

ಇದನ್ನೂ ಓದಿ : ಸಚಿವ ನಿರಾಣಿ ವಿರುದ್ಧ ಪಾಷಾ ಸಿಡಿ ಆರೋಪ : ಸಿಬಿಐ ತನಿಖೆಗೆ ಯತ್ನಾಳ್ ಆಗ್ರಹ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮದ್ಯದ ಬೆಲೆಯನ್ನು ಏರಿಸಲಾಗಿದ್ದು, ಈ ಬೆಲೆ ಹೆಚ್ಚಳದ ನಂತರ ತಮಿಳುನಾಡು, ಕರ್ನಾಟಕ ಮತ್ತು ಇತರೆ ರಾಜ್ಯಗಳಿಗೆ ಹೋಲಿಸಿದರೆ ಪುದುಚೇರಿಯಲ್ಲಿ ಮದ್ಯದ ಬೆಲೆ ಕಡಿಮೆ ಇರುವುದನ್ನು ಗಮನಿಸಬಹುದಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಪುದುಚೇರಿ ಆಡಳಿತವು ಮದ್ಯದ ಮೇಲಿನ 7.5 ವಿಶೇಷ ಕೋವಿಡ್ ಶುಲ್ಕವನ್ನು ರದ್ದುಪಡಿಸಿತ್ತು.

Advertisement

ಏಪ್ರಿಲ್ 7 ರಂದು, ಲೆಫ್ಟಿನೆಂಟ್ ಗವರ್ನರ್ ತಮಿಳುಸಾಯಿ ಸುಂದರರಾಜನ್ ಅವರು ಮದ್ಯದ ಬೆಲೆಯನ್ನು ಕಡಿಮೆ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದರು. ಇದರ ನಂತರ ಇಲ್ಲಿ ಮದ್ಯದ ಬೆಲೆಯನ್ನು ಇಳಿಸಲಾಯಿತು. ಆದರೆ ಇದರಿಂದಾಗಿ ರಾಜ್ಯವು ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತಾಯಿತು.

ಲೆಫ್ಟಿನೆಂಟ್ ಗವರ್ನರ್ ವಿಶೇಷ ಅಬಕಾರಿ ಸುಂಕವನ್ನು ರದ್ದುಪಡಿಸಿದರು ಮತ್ತು ಎಲ್ಲಾ ಪಬ್‌ ಗಳು, ಮದ್ಯದಂಗಡಿಗಳು ಮತ್ತು ರೆಸ್ಟೋರೆಂಟ್‌ ಗಳಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದ್ದರು.

ಇದನ್ನೂ ಓದಿ : ನಳೀನ್ ಕುಮಾರ್ ಕಟೀಲ್ ಆಡಿಯೋ ವೈರಲ್ ಹಿಂದೆ ಕಾಂಗ್ರೆಸ್ ಕೈವಾಡವಿದೆ : ವಿ ಸೋಮಣ್ಣ

Advertisement

Udayavani is now on Telegram. Click here to join our channel and stay updated with the latest news.

Next