Advertisement
ಎಲ್ಲೆಡೆ ಜನಜಂಗುಳಿ: ಬನ್ನೂರು ರಸ್ತೆಯ ನಾಗಣ್ಣ ವೈನ್ಸ್, ನೂರಡಿ ರಸ್ತೆಯ ಮಾರ್ತಾಂಡ ವೈನ್ಸ್, ಮಧುಲೋಕ, ಗುತ್ತಲು ರಸ್ತೆಯ ಮಾರ್ತಾಂಡ ವೈನ್ಸ್ ಸೇರಿದಂತೆ ನಗರದ ಎಲ್ಲಾ ವೈನ್ಸ್‌ಸ್ಟೋರ್‌ಗಳ ಬಳಿ ಮದ್ಯ ಖರೀದಿಗೆ ಜನಜಂಗುಳಿ ನೆರೆದಿತ್ತು. ಮಾಸ್ಕ್ ಧರಿಸಿ ಬಂದವರಿಗಷ್ಟೇ ಮದ್ಯ ವಿತರಣೆ ಮಾಡಲಾಗುತ್ತಿತ್ತು. ಅಂಗಡಿಯೊಳಗೆ ಪ್ರತಿ 5 ಜನರಿಗೆ ಮಾತ್ರ ಪ್ರವೇಶ ನೀಡುತ್ತಿದ್ದು, ಎಲ್ಲರೂ ಯಾವುದೇ ನೂಕುನುಗ್ಗಲಿಲ್ಲದೆ, ಗಲಾಟೆಗೆ ಅವಕಾಶವಾಗದಂತೆ ಸಮಾಧಾನ ದಿಂದ ಮದ್ಯ ಖರೀದಿಸಿದರು. ನಲವತ್ತು ದಿನಗಳಿಂದ ಬಾಯಿ ಒಣಗಿಸಿಕೊಂಡಿದ್ದ ಮದ್ಯಪ್ರಿಯರು ಸೋಮವಾರ ತಮಗಿಷ್ಟದ ಬ್ರಾಂಡ್ ಖರೀದಿಸಿ ಕುಡಿಯುವುದರೊಂದಿಗೆ ತೃಪ್ತರಾಗಿ ನಶೆಯಲ್ಲಿ ತೇಲಾಡಿದರು.
ಬ್ಯಾಗ್‌ಗಳು, ಏರ್‌ಬ್ಯಾಗ್‌ಗಳು, ಬ್ಯಾಸ್ಕೆಟ್ ಸೇರಿದಂತೆ ವಾಹನಗಳನ್ನು ತಂದು ಅವುಗಳಲ್ಲಿ ಮದ್ಯ ಕೊಂಡೊಯ್ಯುತ್ತಿದ್ದುದು ಕಂಡು ಬಂದಿತು.
Related Articles
ಜಿಲ್ಲೆಯಲ್ಲಿ ಮದ್ಯ ಮಾರಾಟದ ಅವಧಿಯನ್ನು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ರಾಜ್ಯಸರ್ಕಾರದ ಮಾರ್ಗಸೂಚಿ ಪ್ರಕಾರ ಮದ್ಯದಂಗಡಿಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಜೆ 7 ಗಂಟೆಯ ಬದಲು 5 ಗಂಟೆಯವರೆಗೆ ಮಾತ್ರ ಮದ್ಯದಂಗಡಿಗಳು ಬಾಗಿಲು ತೆರೆಯಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ನಡೆದ ಸಭೆ ಯಲ್ಲಿ ಮಾರ್ಪಾಡು ಮಾಡಲಾಗಿದೆ. ಸಂಜೆ 7ರವರೆಗೆ ಮದ್ಯ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಮದ್ಯ ಖರೀದಿಸಿ ಹಳ್ಳಿಗಳಿಗೆ ಹೋಗುವವರು ಅಸಭ್ಯವಾಗಿ ವರ್ತಿಸಿ ಸಾರ್ವಜನಿ ಕರಿಗೆ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ಮದ್ಯ ಮಾರಾಟ ಅವಧಿಯನ್ನು ಕಡಿತಗೊಳಿಸಲಾಗಿದೆ.
Advertisement
ಒಬ್ಬರಿಗೆ 2.3 ಲೀಟರ್ ಮದ್ಯ ರಾಜ್ಯಸರ್ಕಾರ ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಇಷ್ಟಬಂದಷ್ಟು ಮದ್ಯ ಖರೀದಿಗೆ ನಿರ್ಬಂಧ ಹೇರಲಾಗಿತ್ತು. ಮದ್ಯ ಖರೀದಿಗೆ ಬಂದ ಪ್ರತಿ ವ್ಯಕ್ತಿಗೆ 2.3 ಲೀ.
(ಮೂರು ಫುಲ್ ಬಾಟಲ್) ಖರೀದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಇಷ್ಟೇ ಪ್ರಮಾಣದಲ್ಲಿ ಜನರು ಮದ್ಯ ಖರೀದಿ ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ.
ಏಕೆಂದರೆ, ಒಂದು ಅಂಗಡಿಯಲ್ಲಿ ಮದ್ಯ ಖರೀದಿಸಿದ ಬಳಿಕ ಮತ್ತೂಂದು ಅಂಗಡಿಯಲ್ಲಿ ಮದ್ಯ ಖರೀದಿ ಮಾಡಲೂಬಹುದು. ಅದನ್ನು ತಡೆಯುವುದು ಹಾಗೂ ಪತ್ತೆಹಚ್ಚುವುದು ಕಷ್ಟ
ಎಂದು ಅಬಕಾರಿ ಉಪ ಆಯುಕ್ತ ಶಿವ ಪ್ರಸಾದ್ ಹೇಳಿದರು. ಮದ್ಯ ಖರೀದಿಗೆ ಇರುವ ಷರತ್ತುಗಳು
ಮದ್ಯದ ಮಳಿಗೆಗಳ ಒಳಗೆ 5 ಜನ ಗ್ರಾಹಕರು ಮಾತ್ರ ಇರಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು. ಮಾಸ್ಕ್ ಧರಿಸಿ ಬರದವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ. ಒಬ್ಬರಿಂದ ಒಬ್ಬರಿಗೆ ಕನಿಷ್ಠ 6 ಅಡಿ ಅಂತರವಿರಬೇಕು. ಷರತ್ತು ಉಲ್ಲಂ ಸಿದ ಮದ್ಯ ಮಳಿಗೆಗಳ ಅನುಮತಿ ರದ್ದುಗೊಳಿಸುವುದಾಗಿ ಅಬಕಾರಿ ಉಪ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ 100 ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. 52 ಗ್ರಾಮೀಣ ಹಾಗೂ ನಗರ ಪ್ರದೇಶದ 48 ವೈನ್‌ಶಾಪ್‌ಗಳು. ಅದೇ ರೀತಿ ನಗರದಲ್ಲಿ 12 ಹಾಗೂ 22 ಗ್ರಾಮೀಣ ಸೇರಿದಂತೆ ಒಟ್ಟು 34 ಎಂಎಸ್‌ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ. ಮದ್ಯಕ್ಕೆ ನೂಕು ನುಗ್ಗಲು: ಲಘು ಲಾಠಿ ಪ್ರಹಾರ
ಮಂಡ್ಯ: ನಗರದಲ್ಲಿ ಮದ್ಯ ಖರೀದಿಗೆ ನೂಕು ನುಗ್ಗಲು ನಡೆಸಿದ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ ಘಟನೆ ನೂರಡಿ ರಸ್ತೆಯ ಮಧುಲೋಕ ಬಳಿ ಸೋಮವಾರ ನಡೆದಿದೆ. ಅಂಗಡಿ ತೆರೆಯುವ ಮುನ್ನವೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಲ್ಲದೆ, ಮದ್ಯ ಖರೀದಿಗೆ ಬಂದವರು ಅಲ್ಲಲ್ಲಿ ಗುಂಪುಗೂಡಿದ್ದರು. ಅಂಗಡಿ ತೆರೆದ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮದ್ಯ ಖರೀದಿಸಲು ಮುಗಿ ಬಿದ್ದ ಸಮಯದಲ್ಲಿ ಸ್ವಲ್ಪ ನೂಕು ನುಗ್ಗಲು ಉಂಟಾಯಿತು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಜಿಲ್ಲಾ ವ್ಯಾಪ್ತಿಯಲ್ಲಿ 100 ವೈನ್‌ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. 52 ಗ್ರಾಮೀಣ ಹಾಗೂ ನಗರ ಪ್ರದೇಶದ 48 ವೈನ್‌ಶಾಪ್‌ಗಳು. ಅದೇ ರೀತಿ ನಗರದಲ್ಲಿ 12 ಹಾಗೂ 22 ಗ್ರಾಮೀಣ ಸೇರಿದಂತೆ ಒಟ್ಟು 34 ಎಂಎಸ್‌ಐಎಲ್ ಮಳಿಗೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ.
● ಡಾ.ವೆಂಕಟೇಶ್, ಜಿಲ್ಲಾಧಿಕಾರಿ ಮಂಡ್ಯ ಮಂಜುನಾಥ್