Advertisement

ಮದ್ಯಪಾನದಿಂದ ಜೀವನ-ನೆಮ್ಮದಿ ಹಾಳು

09:51 AM Jan 21, 2019 | |

ಸಂಡೂರು: ಮದ್ಯಪಾನ ಮಾಡುವ ಲಕ್ಷಾಧಿಪತಿಗಳೇ, ಒಂದು ಬಾರಿ ಅಲೋಚನೆ ಮಾಡುವ ಮೂಲಕ ನೀವು ಕೋಟ್ಯಾಧಿಪತಿಗಳೂ ಅಗಬಹುದು. ಮದ್ಯ ವ್ಯಸನದಿಂದ ಮುಕ್ತವಾದಾಗ ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಮಂಜುನಾಥ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು, ಒಂದು ಬಾರಿ ಯೋಚಿಸಿ ನೀವು ಲಕ್ಷಾಧಿಪತಿಗಳಲ್ಲವೇ ಎಂದು, ಕಾರಣ ಒಂದು ದಿನಕ್ಕೆ 100 ರೂ. ಮದ್ಯಕ್ಕೆ ಖರ್ಚು ಮಾಡಿದರೆ ಒಂದು ವರ್ಷಕ್ಕೆ 36 ಸಾವಿರವಾಗುತ್ತದೆ. ಕಳೆದ 10-15 ವರ್ಷಗಳಿಂದ ನೀವು ಮದ್ಯಪಾನ ಮಾಡುತ್ತಿದ್ದೀರಿ ಎಂದು 3.6 ಲಕ್ಷದಿಂದ 5 ಲಕ್ಷದವರೆಗೆ ಇಲ್ಲಿಯವರೆಗೆ ಖರ್ಚು ಮಾಡಿದ್ದೀರಿ. ಆದ್ದರಿಂದ ನೀವು ಲಕ್ಷಾಧಿಪತಿಗಳೇ ಅಗಿದ್ದೀರಿ, ಅದರ ಜೊತೆಯಲ್ಲಿ ಪ್ರತಿ ವರ್ಷ ಮದ್ಯಪಾನದಿಂದ ಆರೋಗ್ಯ ರಕ್ಷಣೆಗೆ 20,000 ಸಾವಿರ ಖರ್ಚು ಮಾಡುತ್ತೀದ್ದೀರಿ. 15 ವರ್ಷಗಳಲ್ಲಿ 3 ಲಕ್ಷ ಖರ್ಚಾಗಿದೆ. ಆದ್ದರಿಂದ ನೀವು ಮದ್ಯವ್ಯಸನದಿಂದ ಮುಕ್ತರಾಗುವ ಮೂಲಕ ನೀವು ಭವಿಷ್ಯದಲ್ಲಿ ನಿಮ್ಮ ಆದಾಯ ಹೆಚ್ಚು ಗಳಿಸಬಹುದು. ಆದ್ದರಿಂದ ದುಶ್ಚಟದಿಂದ ದೂರವಾಗಿ ಸ್ವಸ್ಥ ಸಮಾಜ ನಿರ್ಮಿಸಿ ಎಂದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ಎಂ. ಶಿವಕುಮಾರ ಮಾತನಾಡಿ, ಮದ್ಯಪಾನ ನಿಷೇಧಿಸಿ ಎಂದು ಚಿತ್ರದುರ್ಗದಿಂದ ಬೆಂಗಳೂರುವರೆಗೆ ಮಹಿಳೆಯರು ಪಾದಯಾತ್ರೆ ಮೂಲಕ ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ. ಕಾರಣ ಇಡೀ ಕುಟುಂಬ ಬೀದಿಗೆ ಬೀಳುತ್ತಿವೆ. ಮದ್ಯಪಾನದಿಂದ ಮುಕ್ತರಾಗುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡೋಣ ಎಂದರು. ವಕೀಲರ ಸಂಘದ ಅಧ್ಯಕ್ಷ ನಾರಾಯಣಾಚಾರ್‌, ಉಪಾಧ್ಯಕ್ಷ ಅರಳಿಮಲ್ಲಪ್ಪ, ವಕೀಲರಾದ ಎಚ್.ಕೆ. ಬಸವರಾಜ, ರಾಮಾಂಜಿನಿ, ಕುಮಾರಸ್ವಾಮಿ, ಕಣ್ಣಿ ಓಂಕಾರಪ್ಪ, ಅಂಜಿನಪ್ಪ ಇತರ ವಕೀಲರು, ವರದಿಗಾರ ಬಸವರಾಜ ಬಣಕಾರ ಮಾತನಾಡಿದರು. ಧರ್ಮಸ್ಥಳ ಸಂಘದ ತಾಲೂಕು ಯೋಜನಾಧಿಕಾರಿ ಪ್ರಸಾದ್‌, ಅಜಿತ್‌, ಸುನೀಲ್‌, ವೈದ್ಯರು ಇತರ ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next