Advertisement

ಲಿಕ್ವಿಡ್‌ ಬಫೆ ಮೇಳ

07:08 PM Jan 31, 2020 | Lakshmi GovindaRaj |

ಚಳಿಗಾಲಕ್ಕೆ ತೆರೆ ಬೀಳುತ್ತಿದೆ. ಬಿಸಿಲು ಮೇಳೈಸುತ್ತಿದೆ. ಬೇರೆಲ್ಲ ಋತುಗಳಿಗಿಂತ ಈ ವೇಳೆ ದಾಹ ತುಸು ಜಾಸ್ತಿ. ಏನಾದ್ರೂ ಕುಡಿದು ತಂಪಾಗೋಣ ಎಂದು ದೇಹ ಬಯಸುತ್ತಿರುತ್ತದೆ. ಆದರೆ, ಏನು ಕುಡಿಯೋದು? ಪಾನೀಯಪ್ರಿಯರಿಗಾಗಿಯೇ ಲಿಕ್ವಿಡ್‌ ಬಫೆಟ್‌ ಮೇಳವೊಂದು ಆಯೋಜನೆಗೊಂಡಿದೆ. ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್‌ ರೆಸಾರ್ಟ್‌ ಸ್ಪಾನಲ್ಲಿ, ಬಗೆ ಬಗೆಯ ಹಣ್ಣುಗಳಿಂದ ತಯಾರಿಸಿದ ಪಾನೀಯ ಪ್ರದರ್ಶನವಿರಲಿದೆ. ಡೆಸ್ಮಂಡ್ಜಿ ಅಗಾವೆ (ತಾಳೆ), ಡೆಸ್ಮಂಡ್ಜಿ ಕಿತ್ತಳೆ, ಬ್ಲ್ಯಾಕ್‌ಬೆರಿ, ಕೆಟೊ, ಸ್ಟ್ರಾಬೆರಿ ಮುಂತಾದ ಹಣ್ಣುಗಳ ಪಾನೀಯ ಕುಡಿಯಬಹುದು.

Advertisement

ಯಾವಾಗ?: ಫೆ.10ರ ವರೆಗೆ, ಮಧ್ಯಾಹ್ನ 12- ರಾ. 10.45

ಎಲ್ಲಿ?: ಇಲ್ಯೂಷನ್‌ ಲ್ಯಾಂಜ್‌ ಬಾರ್‌, ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್‌ ರೆಸಾರ್ಟ್‌ ಸ್ಪಾ, ಕೆಐಎ ರಸ್ತೆ, ಸ್ವಿಸ್‌ ಟೌನ್‌, ಹಾಲಿವುಡ್‌ ಜಂಕ್ಷನ್‌, ಸಾದಹಳ್ಳಿ ಗೇಟ್‌

ಬೆಲೆ: 249 ರೂ.ನಿಂದ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next