Advertisement

ಅರ್ಜೆಂಟೀನಾ ತಂಡಕ್ಕೆ ಮೆಸ್ಸಿ ಮತ್ತೆ ನಾಯಕ

03:45 AM Mar 05, 2017 | |

ನವದೆಹಲಿ: ವಿಶ್ವಕಪ್‌ ಅರ್ಹತಾ ಪಂದ್ಯಕ್ಕೆ 26 ಆಟಗಾರರ ಅರ್ಜೆಂಟೀನಾ ತಂಡವನ್ನು ಪ್ರಕಟಿಸಲಾಗಿದ್ದು, ವಿಶ್ವಶ್ರೇಷ್ಠ ಫ‌ುಟ್‌ಬಾಲ್‌ ಆಟಗಾರ ಲಯೋನೆಲ್‌ ಮೆಸ್ಸಿ ಮತ್ತೆ ನಾಯಕನಾಗಿ ಆಯ್ಕೆಯಾಗಿದ್ದಾರೆ. 

Advertisement

2018ರ ಫಿಫಾ ಫ‌ುಟ್ಬಾಲ್‌ ವಿಶ್ವಕಪ್‌ ಹಿನ್ನೆಲೆಯಲ್ಲಿ ಅರ್ಜೆಂಟೀನಾ ತಂಡ ಮಾ.23ರಂದು ಚಿಲಿ ಮತ್ತು ಮಾ.28ರಂದು ಬೊಲಿವಿಯಾ ವಿರುದ್ಧ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿದೆ. 

ಈ ಎರಡೂ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮೆಸ್ಸಿ ಮುನ್ನಡೆಸಲಿದ್ದಾರೆ. 2016ರ ಕೊಪಾ ಅಮೆರಿಕ ಫ‌ುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಚಿಲಿ ವಿರುದ್ಧ ಸೋಲುಂಡಿತ್ತು. ಹೀಗಾಗಿ ಮೆಸ್ಸಿ ಅಂತಾರಾಷ್ಟ್ರೀಯ ಫ‌ುಟ್ಬಾಲ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದರು. ಆನಂತರ ಅಭಿಮಾನಿಗಳ ಒತ್ತಾಯ ಮತ್ತು ಅರ್ಜೆಂಟೀನಾ ಅಧ್ಯಕ್ಷರ ಒತ್ತಾಯದ ಮೇಲೆ ನಿವೃತ್ತಿಯನ್ನು ವಾಪಸ್‌ ಪಡೆದಿದ್ದರು. 2018 ವಿಶ್ವಕಪ್‌ ಟೂರ್ನಿಗೂ ಕೂಡ ಮೆಸ್ಸಿ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next