Advertisement

ಮೆಸ್ಸಿ-ನೇಯ್ಮರ್‌ ಸೌಹಾರ್ದ ಫ‌ುಟ್ಬಾಲ್‌ ಪಂದ್ಯ

03:45 AM Feb 11, 2017 | Team Udayavani |

ಸಿಡ್ನಿ: ಇಲ್ಲಿನ ಮೆಲ್ಬರ್ನ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸ್ಟಾರ್‌ ಫ‌ುಟ್ಬಾಲಿಗರಾದ ಲಿಯೊನೆಲ್‌ ಮೆಸ್ಸಿ ಮತ್ತು ಬ್ರೆಜಿಲ್‌ನ ನೇಯ್ಮರ್‌ ಸೌಹಾರ್ದ ಪಂದ್ಯವೊಂದರಲ್ಲಿ ಮುಖಾಮುಖೀಯಾಗುತ್ತಿದ್ದಾರೆ. ಅರ್ಜೆಂಟೀನಾ ಮತ್ತು ಬ್ರೆಜಿಲ್‌ ನಡುವೆ ಜೂ.9ರಂದು ಹಣಾಹಣಿ ನಡೆಯಲಿದೆ. ಸುಮಾರು 1ಲಕ್ಷ ಅಭಿಮಾನಿಗಳು ಈ ಪಂದ್ಯ ವೀಕ್ಷಿಸಲಿದ್ದಾರೆ ಎಂದು ಕೂಟದ ಸಂಘಟಕರು ತಿಳಿಸಿದ್ದಾರೆ. ಈಗಾಗಲೇ ಪಂದ್ಯಕ್ಕೆ ಭರ್ಜರಿ ಪೂರ್ವ ಸಿದ್ಧತೆ ನಡೆಯುತ್ತಿದೆ. 

Advertisement

ಕ್ರೀಡಾಂಗಣದ ಹೊರಗೆ ಮೆಸ್ಸಿ ಮತ್ತು ನೇಯ್ಮರ್‌ ವರ್ಣಚಿತ್ರವನ್ನು ಬರೆಯಲಾಗಿದೆ. ಇದು ಫ‌ುಟ್ಬಾಲ್‌ ಪ್ರೇಮಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ. ಅರ್ಜೆಂಟೀನಾಗೆ ಬ್ರೆಜಿಲ್‌ ಯಾವಾಗಲೂ ಪ್ರಬಲ ಎದುರಾಳಿ.  2012ರಿಂದ ಅರ್ಜೆಂಟೀನಾ ವಿರುದ್ಧ ಯಾವುದೇ ಪಂದ್ಯವನ್ನು ಬ್ರೆಜಿಲ್‌ ಸೋತಿಲ್ಲ. ಈ ಬಾರಿ ಸೋಲಿನ ಸುಳಿಯಿಂದ ಮೆಸ್ಸಿ ಪಡೆ ಹೊರಬರಬಹುದೇ ಎಂದು ಅಭಿಮಾನಿಗಳು ಕಾತರದ ಕಣ್ಣುಗಳಿಂದ ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next