ಬಾರ್ಸಿಲೋನಾ: ವಿಶ್ವಕಂಡ ಆಪ್ರತಿಮ ಫುಟ್ಬಾಲಿಗ ಬಾರ್ಸಿಲೋನಾದ ಲಿಯೋನೆಲ್ ಮೆಸ್ಸಿ ಮದುವೆಗೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ಆದರೆ ಮದುವೆಗೆ ಬಾರ್ಸಿಲೋನಾ ತಂಡದ ತಾರಾ ಆಟಗಾರ ಗೆರಾರ್ಡ್ ಪಿಕ್ ಹಾಗೂ ಆತನ ಪತ್ನಿ ಖ್ಯಾತ ಪಾಪ್ ಗಾಯಕಿ ಶಕೀರಾರನ್ನೇ ಮೆಸ್ಸಿ ಆಹ್ವಾನಿಸಿಲ್ಲ. ಇದಕ್ಕೆ ಕಾರಣ ಸ್ವತಃ ಮೆಸ್ಸಿ ಭಾವಿ ಪತ್ನಿಯಂತೆ..!,
ಹೌದು ಮೆಸ್ಸಿ ಭಾವಿ ಪತ್ನಿ ಆಂಟೊನೆಲ್ಲಾ ರೊಕೊÕಝೋಗೆ ಗೆರಾರ್ಡ ಪಿಕ್ ಮಾಜಿ ಗೆಳತಿ ನುರಿಯಾ ಥಾಮಸ್
ಆತ್ಮೀಯ ಗೆಳತಿ. ಗೆರಾಡ್ ಪಿಕ್ ಹಾಗೂ ನುರಿಯಾ ಥಾಮಸ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ 2010ರ ವಿಶ್ವಕಪ್ ವೇಳೆ ಶಕೀರಾ ವಾಕಾ…ವಾಕಾ ಹಾಡಿನ ಮೂಲಕ ವಿಶ್ವ ಪರಿಚಿತರಾದರು.
ಈ ವೇಳೆ ಕೂಟದಲ್ಲಿದ್ದ ಗೆರಾರ್ಡ್ ಪಿಕ್ ಮನಸ್ಸು ನುರಿಯಾ ಬಿಟ್ಟು ಶಕೀರಾ ಕಡೆ ವಾಲಿತು. ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರು ಒಂದಾದರು. ಅತ್ತ ನುರಿಯಾಗೆ ಮಾಡಿದ ಮೋಸದಿಂದ ಮೆಸ್ಸಿಯ ಭಾವಿ ಪತ್ನಿ ಆಂಟೋನೆಲ್ಲಾ ಕೊಥಕೊಥ ಕುದಿದಿದ್ದಾರೆ. ಪಿಕ್-ಶಕೀರಾಗೆ ಮದುವೆಗೆ ಆಹ್ವಾನ ನೀಡದಂತೆ ಮೆಸ್ಸಿಗೆ ಆಂಟೋನೆಲ್ಲಾ ಹೇಳಿದ್ದಾರೆ. ಹೀಗಾಗಿ ಗೆಳಯ ಪಿಕ್‌ರನ್ನು ಮೆಸ್ಸಿ ಮದುವೆಗೆ ಕರೆದಿಲ್ಲ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಜೂ.30ರಂದು ಮೆಸ್ಸಿ ಮದುವೆ ರೊಸಾರಿಯೋದಲ್ಲಿ ನಡೆಯಲಿದೆ.