Advertisement
ಫ್ರಾನ್ಸ್ ಫುಟ್‌ಬಾಲ್ ನಿಯತ ಕಾಲಿಕೆ ನೀಡುವ ಬ್ಯಾಲನ್ ಡಿ’ಓರ್ ಪ್ರಶಸ್ತಿ 2009, 2010, 2011, 2012, 2015 ಮತ್ತು 2019ರಲ್ಲೂ ಮೆಸ್ಸಿಗೆ ಪಾಲಾಗಿತ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಆರ್ಜೆಂಟೀನಾಗೆ ಮೊದಲ ಬಾರಿಗೆ “ಕೊಪಾ ಅಮೆರಿಕ ಟ್ರೋಫಿ’ಯನ್ನು ತಂದುಕೊಟ್ಟ ಸಾಧನೆಗಾಗಿ ಈ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿ ಮೆಸ್ಸಿಗೆ ಒಲಿದು ಬಂತು.
“ಇಂದು ನಾನು ಪ್ಯಾರಿಸ್‌ನಲ್ಲಿದ್ದೇನೆ ಎನ್ನಲು ನನಗೆ ಬಹಳ ಸಂತಸವಾಗುತ್ತಿದೆ. ನನ್ನ ಆಟ ಇನ್ನು ಎಷ್ಟು ವರ್ಷಗಳ ಕಾಲ ಎನ್ನುವುದು ತಿಳಿದಿಲ್ಲ. ಕೊನೆಯ ವರೆಗೂ ಹೋರಾಟ ಮುಂದುವರಿಸುವೆ. ಬಾರ್ಕಾ, ಪ್ಯಾರಿಸ್ ಮತ್ತು ಆರ್ಜೆಂಟೀನಾ ತಂಡಗಳ ಸಹ ಆಟಗಾರರಿಗೆ ಕೃತಜ್ಞತೆಗಳು’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೆಸ್ಸಿ ಹೇಳಿದರು. ಇದನ್ನೂ ಓದಿ:ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್ ತೀರ್ಪು
Related Articles
ಮಹಿಳೆಯರ ವಿಭಾಗದಲ್ಲಿ ಈ ಪ್ರಶಸ್ತಿ ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಪಾಲಾಯಿತು. 27 ವರ್ಷದ ಅಲೆಕ್ಸಿಯಾ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ 3ನೇ ಆಟಗಾರ್ತಿ. 2018ರಲ್ಲಿ ಮಹಿಳಾ ವಿಭಾಗದ ಬ್ಯಾಲನ್ ಡಿ’ಓರ್ ಪ್ರಶಸ್ತಿ ನೀಡಲು ಆರಂಭಿಸಲಾಗಿತ್ತು. ಮೊದಲೆರಡು ವರ್ಷ ಅದಾ ಹಿಗರ್ಬರ್ಗ್ ಮತ್ತು ಮೆಗಾನ್ ರಾಪಿನೊ ಈ ಪ್ರಶಸ್ತಿ ಪಡೆದಿದ್ದರು.
Advertisement