Advertisement

ಬಾರ್ಸಿಲೋನಾ ಜತೆಗಿನ ಮೆಸ್ಸಿ ಗುತ್ತಿಗೆ ವಿಸ್ತರಣೆ: ಮುಗಿದ ಗೊಂದಲ

03:45 AM Jul 06, 2017 | Team Udayavani |

ಬಾರ್ಸಲೋನ: ಫ‌ುಟ್ಬಾಲ್‌ ದಿಗ್ಗಜ ಆರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಮತ್ತು ಬಾರ್ಸಲೋನ ಫ‌ುಟ್ಬಾಲ್‌ ಕ್ಲಬ್‌ ಜತೆಗಿನ ಒಪ್ಪಂದ 2021ರವರೆಗೆ ವಿಸ್ತರಣೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Advertisement

ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಇದಕ್ಕೂ ಮುನ್ನ ಈ ಒಪ್ಪಂದ ನಡೆಯುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಸ್ಪೇನ್‌ ಸರಕಾರಕ್ಕೆ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪದಡಿ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮೆಸ್ಸಿಗೆ 21 ತಿಂಗಳ ಕಣ್ಗಾವಲು ಜೈಲು ಶಿಕ್ಷೆಯನ್ನು ವಿಧಿಸಿದ್ದವು. 

ಆದ್ದರಿಂದ ಸ್ಪೇನಿನ ಬಾರ್ಸಲೋನ ಕ್ಲಬ್‌ ಜೊತೆಗೆ ಮೆಸ್ಸಿ ಒಪ್ಪಂದ ಮುಂದುವರಿಸುವುದಿಲ್ಲ ಎಂದು ಹೇಳಲಾಗಿತ್ತು.
ಮೆಸ್ಸಿ ತಮ್ಮ 13ನೇ ವರ್ಷದಲ್ಲಿರುವಾಗಲೇ ಬಾರ್ಸಲೋನ ಕ್ಲಬ್‌ಗ ಸೇರ್ಪಡೆಯಾಗಿದ್ದರು. ಅನಂತರ 16ನೇ ವರ್ಷದಲ್ಲಿಯೇ ಕ್ಲಬ್‌ ಪರವಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದಾರೆ. ಮೆಸ್ಸಿ ಇಲ್ಲಿಯವರೆಗೆ 583 ಪಂದ್ಯಗಳನ್ನು ಆಡಿದ್ದು, 507 ಗೋಲು ದಾಖಲಿಸಿದ್ದಾರೆ. ಬಾರ್ಸಲೋನ ಪರ ಅತಿ ಗರಿಷ್ಠ ಗೋಲು ದಾಖಲಿಸಿದ ಖ್ಯಾತಿ ಮೆಸ್ಸಿ ಅವರದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next