Advertisement

ಶೇ. 97ರಷ್ಟು ವಂಶ ವೃದ್ಧಿಸಿಕೊಂಡ ವನರಾಜ

12:24 PM Jul 11, 2020 | sudhir |

ಗುಜರಾತ್: ಏಷ್ಯಾ ಸಿಂಹಗಳ ಆಶ್ರಯತಾಣವಾದ ಗುಜರಾತ್‌ನಲ್ಲಿ ರಕ್ಷಿತಾರಣ್ಯಕ್ಕಿಂತ ಅದರ ಹೊರಗಿನ ವಲಯಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿರುವ ಅಚ್ಚರಿಯ ಬೆಳವಣಿಗೆ ವರದಿಯಾಗಿದೆ. ಗುಜರಾತ್‌ ಅರಣ್ಯ ಇಲಾಖೆ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸುವ ಪೂನಂ ಅವಲೋಕನ್‌ ಎಂಬ ಸಿಂಹಗಳ ಗಣತಿಯನ್ನು ಕಳೆದ ತಿಂಗಳು ನಡೆಸಲಾಗಿದೆ. ಅದರಲ್ಲಿ, ರಕ್ಷಿತಾರಣ್ಯದ ಹೊರವಲಯಗಳಲ್ಲಿ ವನರಾಜನ ಸಂಖ್ಯೆ ಶೇ. 97ರಷ್ಟು ಹೆಚ್ಚಾಗಿರುವುದು ತಿಳಿದುಬಂದಿದೆ.

Advertisement

ಸಂರಕ್ಷಿತ ವಲಯದಲ್ಲಿ ಕುಸಿತ
2015ರಲ್ಲಿ ರಕ್ಷಿತಾರಣ್ಯಗಳನ್ನು ಹೊರತುಪಡಿಸಿದ ಪ್ರಾಂತ್ಯಗಳಲ್ಲಿ ನಡೆಸಿದ್ದ ಗಣತಿಯ ವೇಳೆ 167 ಸಿಂಹ ಗಳು ಪತ್ತೆಯಾಗಿದ್ದವು. ಈಗ ಅವುಗಳ ಸಂಖ್ಯೆ 329 ಕ್ಕೇರಿದೆ. ಅಲ್ಲಿಗೆ ಅವುಗಳ ವಂಶಾಭಿವೃದ್ಧಿ ಶೇ. 97ರಷ್ಟು ಹೆಚ್ಚಾ ದಂತಾಗಿದೆ. ಆದರೆ, ರಕ್ಷಿತಾ ವಲಯಗಳಲ್ಲಿ 2015ರ ಹೊತ್ತಿಗೆ 356ರಷ್ಟಿದ್ದ ಸಿಂಹಗಳು, ಈ ವರ್ಷ 345ಕ್ಕೆ ಇಳಿದಿವೆ. ಅಲ್ಲಿಗೆ, ಅವುಗಳ ಸಂಖ್ಯೆ ಶೇ. 3.1ರಷ್ಟು ಕಡಿಮೆಯಾದಂತಾಗಿದೆ.

ನಾಲ್ಕು ಜಿಲ್ಲೆಗಳಲ್ಲಿ 647 ಸಿಂಹ!
ಭಾವನಗರ್‌, ಅಮ್ರೇಲಿ, ಜುನಾಗಢ ಹಾಗೂ ಗಿರ್‌ ಸೋಮನಾಥ್‌ – ಈ ನಾಲ್ಕು ಜಿಲ್ಲೆಗಳಲ್ಲಿ 647 ಸಿಂಹಗಳ ಲೆಕ್ಕ ಪತ್ತೆಯಾಗಿದೆ. ಆದರೆ, ಈ ಹಿಂದೆಲ್ಲಾ ಅವು ಸಾಮಾನ್ಯವಾಗಿ ಕಾಣಸಿಗುತ್ತಿದ್ದ ಬೋಟಾಡ್‌, ಸುರೇಂದ್ರ ನಗರ್‌, ರಾಜಕೋಟ್‌ಗಳಲ್ಲಿ ಈ ಬಾರಿ ಒಂದೇ ಒಂದು ಸಿಂಹವೂ ಕಾಣಸಿಕ್ಕಿಲ್ಲ. ಅವುಗಳೆಲ್ಲಾ ದೇಶದ ಆಗ್ನೇಯ ದಿಕ್ಕಿನತ್ತ ಪ್ರಯಾಣ ಬೆಳೆಸಿರಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next