ಬೆಂಗಳೂರು: ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ಸಂಖ್ಯೆ ಹಾಗೂ ರೈತರ ಆಧಾರ್ ಸಂಖ್ಯೆ ಜೋಡಣೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ನೀಡಿದ್ದ ಗಡುವು ಸನ್ನಿಹಿತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಜೋಡಣೆಗೆ ಕ್ರಮ ಕೈಗೊಳ್ಳುವಂತೆ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸರಕಾರ ಆದೇಶಿಸಿದೆ. ಇನ್ನು 2 ತಿಂಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗಬೇಕಾಗಿದೆ.
ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಬಳಕೆ ಉತ್ತೇಜಿಸಲು ಕ್ರಮ ಕೈಗೊಳ್ಳುವಂತೆಯೂ ಆದೇಶಿಸಲಾಗಿದೆ. ಅದ್ಕಕಾಗಿ ಐಪಿ ಸೆಟ್ ಫೀಡರ್‌ಗಳನ್ನೂ ಸೌರ ವಿದ್ಯುತ್‌ಗೆ ಅಳವಡಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 34.17 ಲಕ್ಷ ಐಪಿ ಸೆಟ್‌ಗಳಿದ್ದು, 20 ಸಾವಿರ ಮೆಗಾವ್ಯಾಟ್‌ಗೂ ಅಧಿಕ ವಿದ್ಯುತ್ ಬಳಕೆಯಾಗುತ್ತಿದೆ. ವಿದ್ಯುತ್ ಬೇಡಿಕೆ ಹೆಚ್ಚಿರುವುದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆಯೂ ಸವಾಲಾಗಿ ಪರಿಣಮಿಸಿದ್ದು, ಸೌರವಿದ್ಯುತ್ ಬಳಕೆ ಅನಿವಾರ್ಯವಾಗುತ್ತಿದೆ.
ಎಲ್ಲ ಕೃಷಿ ಪಂಪ್‌ಸೆಟ್‌ಗಳಿಗೂ ರೈತರ ಆಧಾರ್ ಸಂಖ್ಯೆ ಜೋಡಣೆ ಗೊಳಿಸಲು ಮೇ ತಿಂಗಳಿನಲ್ಲಿ ಕೆಇಆರ್‌ಸಿ ಆದೇಶಿಸಿ, 6 ತಿಂಗಳ ಗಡುವು ವಿಧಿಸಿತ್ತು. ಈಗಾಗಲೇ ನಾಲ್ಕು ತಿಂಗಳು ಮುಗಿದಿದೆ.
2015ರಿಂದೀಚೆಗಿನ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಕರ್ಯ ಒದಗಿಸ ಲಾಗುತ್ತಿದ್ದು, ಸೆ. 22ರೊಳಗೆ ನೋಂದಾಯಿಸ ಲ್ಪಟ್ಟ ಐಪಿ ಸೆಟ್‌ಗಳ ಸಂಖ್ಯೆಗಳನ್ನು ಕೂಡಲೇ ದೃಢ ಪಡಿಸಿಕೊಂಡು ಮೂಲಸೌಕರ್ಯ ಒದಗಿಸಲು ಟೆಂಡರ್ ಕರೆಯುವಂತೆ ಆದೇಶಿಸಿದೆ.