Advertisement
ಚಾರಿತ್ರಿಕ, ಸಾಂಸ್ಕೃತಿಕ, ಧಾರ್ಮಿಕ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯಡಿ ಒಂದಕ್ಕೊಂದು ಸಂಪರ್ಕ ಕಲ್ಪಿಸಿ, ಆಯಾ ಜಿಲ್ಲೆಯ ಪ್ರವಾಸೋದ್ಯಮ ಸಮಗ್ರ ಮಾಹಿತಿ ಒಂದೆಡೆ ಲಭ್ಯವಾಗುವ ಜತೆಗೆ ಪ್ರವಾಸಿಗರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಇದರಿಂದ ಅನುಕೂಲವಾಗಲಿದೆ.
Related Articles
ಪ್ರವಾಸೋದ್ಯಮದ ಅಭಿವೃದ್ಧಿಗೆ ಪ್ರಮುಖವಾಗಿರುವ ಈ ಐದು ಅಂಶಗಳನ್ನು ಒಳಗೊಂಡಂತೆ ಆಯಾ ಜಿಲ್ಲೆಗಳ ಪ್ರಮುಖ ಪ್ರವಾಸೋದ್ಯಮ ಸ್ಥಳಗಳು, ಅಲ್ಲಿರುವ ಸೌಲಭ್ಯ, ಯಾವ ಅಂಶಗಳನ್ನು ಹೇಗೆ ಲಿಂಕ್ ಮಾಡಬಹುದು ಎಂಬಿತ್ಯಾದಿ ಎಲ್ಲ ಮಾಹಿತಿಯನ್ನು ಒಳಗೊಂಡ ಪ್ರಸ್ತಾವನೆಯನ್ನು ಜಿಲ್ಲೆ ಗಳಿಂದ ಪಡೆಯುತ್ತಿದ್ದೇವೆ. ಕೆಲವು ಜಿಲ್ಲೆಗಳಿಂದ ಈಗಾಗಲೇ ಪ್ರಸ್ತಾವನೆ ಬಂದಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಪ್ರಸ್ತಾವನೆ ಸಿದ್ಧಪಡಿಸುವ ಸಂಬಂಧ ಸಭೆಗಳು ನಡೆಯುತ್ತಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
Advertisement
ಸರ್ಕ್ಯೂಟ್ ಲಿಂಕೇಜ್ ಹೇಗೆ?ಇದಕ್ಕೆ ಜಿಲ್ಲೆಗಳ ಗಡಿ ರೇಖೆ ಇರುವುದಿಲ್ಲ. ರಾಜ್ಯವ್ಯಾಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಡೆಸಿರುವ ಯೋಚನೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಈ ಮೂರು ಜಿಲ್ಲೆಗಳನ್ನು ಸೇರಿಸಿಕೊಂಡು ಬೀಚ್‌ಗಳ ಅಭಿವೃದ್ಧಿಯ ಜತೆಗೆ ಅದಕ್ಕೆ ಹೊಂದಿಕೊಂಡಿರುವ ಧಾರ್ಮಿಕ ಕೇಂದ್ರಗಳ ಲಿಂಕೇಜ್ ಮಾಡಲಾಗುತ್ತದೆ. ಚಿಕ್ಕಮಗಳೂರು, ಹಾಸನ ಮೊದಲಾದ ಜಿಲ್ಲೆಗಳನ್ನು ಒಳಗೊಂಡು ಪರಿಸರ ಪ್ರವಾಸೋ ದ್ಯಮ, ವನ್ಯಜೀವಿ ತಾಣಗಳಿರುವ ಜಿಲ್ಲೆಗಳನ್ನು ಸೇರಿಸಿಕೊಂಡು (ಕೊಡಗು, ಚಾಮರಾಜನಗರ ಇತ್ಯಾದಿ) ವನ್ಯಜೀವಿ ಪ್ರವಾಸೋದ್ಯಮ, ಸಾಂಸ್ಕೃತಿಕ ರಾಜಧಾನಿ ಎಂದೇ ಕರೆಯಲ್ಪಡುವ ಮೈಸೂರನ್ನು ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಪರಿಸರ, ಪಾರಂಪರಿಕ, ಗ್ರಾಮೀಣ, ಆಧ್ಯಾತ್ಮಕ ಹಾಗೂ ವನ್ಯಜೀವಿ ಪ್ರವಾಸೋದ್ಯದ ಲಿಂಕೇಜ್ ಮಾಡಲಾಗುತ್ತದೆ. ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳನ್ನು ಸಿದ್ಧ ಪಡಿಸುತ್ತಿದ್ದೇವೆ. ಧಾರ್ಮಿಕ ಸ್ಥಳಗಳಿಗೆ ಬರುವವರಿಗೆ ಇನ್ನಷ್ಟು ಧಾರ್ಮಿಕ ಸ್ಥಳ ವನ್ನು ಪರಿಚಯಿಸುವುದು, ಟ್ರಕ್ಕಿಂಗ್ ಮಾಡುವವರಿಗೆ ಮಾಹಿತಿ ಒದಗಿಸುವುದು ಹೀಗೆ ಹಲವು ಯೋಚನೆಗಳು ನಡೆಯುತ್ತಿವೆ. ಇದಕ್ಕೆ ರಾಜ್ಯದ ಒಪ್ಪಿಗೆ ಬೇಕಾಗುವುದಿಲ್ಲ. ಆದರೆ ಅವರ ವೆಬ್‌ಸೈಟ್‌ನಲ್ಲಿ ಮಾಹಿತಿ ಅಳವಡಿಸಲು ಅಲ್ಲಿಗೆ ಸಲ್ಲಿಸಲಾಗುತ್ತದೆ.
-ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ ಪ್ರವಾಸೋದ್ಯಮದ ಲಿಂಕೇಜ್‌ಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಲಿದ್ದೇವೆ. ಬೀಚ್, ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ಇವೆ.
– ಕೂರ್ಮಾ ರಾವ್ ಎಂ., ಉಡುಪಿ ಜಿಲ್ಲಾಧಿಕಾರಿ -ರಾಜು ಖಾರ್ವಿ ಕೊಡೇರಿ