Advertisement

ಲಿಂಗಾಯತ ಪ್ರತ್ಯೇಕ ಧರ್ಮ ಯಾವುದೇ ತ್ಯಾಗಕ್ಕೂ ಸಿದ್ಧ

08:15 AM Aug 03, 2017 | Team Udayavani |

ಬೆಂಗಳೂರು: “ಲಿಂಗಾಯತ ಬಸವ ಧರ್ಮ ವಿಚಾರ ಕಾಂಗ್ರೆಸ್‌ ಅಥವಾ ಬಿಜೆಪಿ ಪ್ರಶ್ನೆಯಲ್ಲ. ಇದು ಬಸವಾದಿ
ಶರಣರಿಗೆ ಗೌರವ ನೀಡುವ ಪ್ರಶ್ನೆ. ಈ ವಿಷಯದಲ್ಲಿ ನಾನು ಎಲ್ಲ ರೀತಿಯ ತ್ಯಾಗಕ್ಕೂ ಸಿದಟಛಿ, ಯಾವುದೇ ಪರಿಣಾಮ
ಎದುರಿಸಲು ಸಿದಟಛಿ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,”ನಾವು ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುತ್ತಿಲ್ಲ. 800
ವರ್ಷಗಳ ಹಿಂದಿಯೇ ಅಸ್ತಿತ್ವಕ್ಕೆ ಬಂದಿರುವ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಕೇಳುತ್ತಿದ್ದೇವೆ ಅಷ್ಟೇ’ ಎಂದು ಹೇಳಿದರು. ವೀರಶೈವ-ಲಿಂಗಾಯತ ಧರ್ಮ ಎಂಬ ಬೇಡಿಕೆ ಇಟ್ಟರೆ ಅದಕ್ಕೆ ಸಂವಿಧಾನದ ಮಾನ್ಯತೆ ಸಿಗುವುದಿಲ್ಲ. ಹೀಗಾಗಿ, ಲಿಂಗಾಯತ ಧರ್ಮದ ಬೇಡಿಕೆ ಇಡಬೇಕು. ಇದರಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ನಮ್ಮ ಉದ್ದೇಶವೂ ರಾಜಕೀಯಲಾಭ ಅಲ್ಲ ಎಂದರು. ಬಸವಾದಿ ಶರಣರಿಗೆ 900 ವರ್ಷಗಳಿಂದ ನನ್ನನ್ನು ಒಳಗೊಂಡಂತೆ ಎಲ್ಲರೂ ಅವಮಾನ ಮಾಡಿದ್ದೇವೆ. ಭಗವಾನ್‌ ಬುದಟಛಿ, ಮಹಾವೀರ, ಮಹಮದ್‌ ಪೈಗಂಬರ್‌ ಅವರ ರೀತಿಯ ಸ್ಥಾನ ಬಸವಣ್ಣನವರಿಗೆ ಸಿಗಬೇಕಿತ್ತು. ಆದರೆ, ನಮ್ಮಲ್ಲಿನ ಒಡಕಿನಿಂದ ಬಸವಣ್ಣನನ್ನು ಸೀಮಿತಗೊಳಿಸಿದ್ದೇವೆ.

ಇನ್ನು ಮುಂದಾದರೂ ಆಗಿರುವ ತಪ್ಪು ಸರಿಪಡಿಸಬೇಕಿದೆ ಎಂದು ತಿಳಿಸಿದರು. ಈ ವಿಚಾರ ಏಕಾಏಕಿ ತೀರ್ಮಾನ
ಕೈಗೊಳ್ಳುವುದು ಬೇಡ. ವೀರಶೈವ ಮಹಾಸಭಾ, ಪಂಚಾಚಾರ್ಯರು, ಎಲ್ಲ ಮಠಾಧೀಶರನ್ನೂ ಒಂದೆಡೆ ಸೇರಿಸಿ
ಚರ್ಚಿಸಿ ನ್ಯಾಯಸಮ್ಮತ ಹಾಗೂ ಸತ್ಯ ಏನಿದೆ ಅದರ ಪರವಾಗಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು.
ಮಾತೆ ಮಹಾದೇವಿ ಅವರಿಂದಲೂ ಪ್ರಮಾದವಾಗಿದೆ. ನಾನು ಅವರನ್ನು ಎಂದೂ ಭೇಟಿಯೇ ಆಗಿಲ್ಲ. ಮಾತನಾಡಿಯೂ
ಇಲ್ಲ. ಆದರೆ, ರಂಭಾಪುರಿ ಶ್ರೀಗಳಿರಲಿ, ಬೇರೆ ಮಠಾಧೀಶರಿರಲಿ ಈ ವಿಚಾರದಲ್ಲಿ ಸೂಕ್ಷ್ಮವಾಗಿ ಮಾತನಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next