ಕಲಬುರಗಿ: ಲಿಂಗಾಯತ ಧರ್ಮದ ಸ್ವತಂತ್ರ ಮಾನ್ಯತೆಗೆ ಆಗ್ರಹಿಸಿ ಸೆ. 24ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಲಿಂಗಾಯತ ಮಹಾರ್ಯಾಲಿ ಯಶಸ್ವಿ ಅಂಗವಾಗಿ ಇಂಜಿನಿಯರ್ಸ್ ಆಫ್ ಇನ್ಸಿಟಿಟ್ಯೂಟ್ ನಲ್ಲಿ ಸೋಮವಾರ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ವಕೀಲರು, ವೈದ್ಯರು, ಉದ್ಯಮಿಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆದು ಸಮಾವೇಶ
ಯಶಸ್ವಿಗೆ ರೂಪುರೇಷೆ ಹಾಕಲಾಯಿತು. ನಾವು ಹಿಂದೂ ವಿರೋಧಿಗಳಲ್ಲ. ಮೊದಲು ನಾವೆಲ್ಲರು ಲಿಂಗಾಯತರು, ಬಳಿಕ ಹಿಂದೂಗಳು.
ಹಿಂದೂವಾದಿಗಳು. ಲಿಂಗಾಯತ ಧರ್ಮದ ಮಾನ್ಯತೆ ಸಿಕ್ಕರೆ ದೇಶದಲ್ಲಿ ಭಾವೈಕ್ಯತೆ ಇನ್ನಷ್ಟು ಗಟ್ಟಿಗೊಳ್ಳಲಿದೆ ಹೊರತು, ಯಾರ ಭಾವನೆಗಳು ಇಬ್ಭಾಗವಾಗಲ್ಲ. ಪ್ರತ್ಯೇಕ ಧರ್ಮವಾದರೂ ಹಿಂದೂ ಭಾಗವಾಗಿಯೇ ಉಳಿಯುತ್ತೇವೆ. ಭಾರತೀಯರಾಗಿಯೇ ಇರುತ್ತೇವೆ ಎಂದು ಹಲವರು ಹೇಳಿದರು.
ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸಂಚಾಲಕ ಆರ್.ಜಿ.ಶೆಟಗಾರ, ಮಹಾಂತ ದೇವರು, ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಡೀನ್ ಡಾ| ಎಸ್.ಆರ್. ಹರವಾಳ, ನ್ಯಾಯವಾದಿಗಳಾದ ಚಂದ್ರಕಾಂತ ಕಾಳಗಿ, ಬಸವರಾಜ ಬಿರಾದಾರ ಸೊನ್ನ, ಸಂತೋಷ ಪಾಟೀಲ ದುಧನಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಪ್ರಾಚಾರ್ಯರಾದ ಈಶ್ವರ ಮಠ, ಕುಪೇಂದ್ರ ಪಾಟೀಲ, ಸೋಮಣ್ಣ ನಡಕಟ್ಟಿ, ಕೆ.ಎ. ಕಲಬುರ್ಗಿ, ಉಮಾಕಾಂತ ನಿಗ್ಗುಡಗಿ, ರಾಹುಲ್ ಹೊನ್ನಳ್ಳಿ, ಡಾ| ಲಿಂಗರಾಜ ಕೋಣಿನ್, ಸುಭಾಷ ಕೋಣಿನ್, ಜಂಬನಗೌಡ ಶೀಲವಂತ ಸಿದ್ದಪ್ಪ ಗುರುಗಳು, ಸಂಜಯ್ ಮಾಕಲ್, ಡಾ|ಬಸವರಾಜ ಮೋದಿ, ಪಿ.ಎಸ್. ಮಾಲಿಪಾಟೀಲ ಬಳಬಟ್ಟಿ, ಶರಣು ಕಲ್ಲಾ, ಉದಯಕುಮಾರ ಸಾಲಿಮಠ, ಶಿವಕುಮಾರ ಬಿದರಿ, ಜಗದೀಶ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಯಾರೂ ಇಲ್ಲ ಸಲ್ಲದ ಗೊಂದಲಕಾರಿ ಹೇಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಆಸಕ್ತಿ ಹಾಗೂ ಅಭಿಮಾನವಿದ್ದಲ್ಲಿ ನಮ್ಮೊಂದಿಗೆ ಬಂದು ರ್ಯಾಲಿಯಲ್ಲಿ ಭಾಗವಹಿಸಿರಿ. ಇಲ್ಲದಿದ್ದರೆ ಸುಮ್ಮನೆ ಇರಿ ಎಂದು ಸಮಾಜ ವಿರೋಧಿ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಲಾಯಿತು.
ಮಲ್ಲಣ್ಣ ನಾಗರಾಳ, ಐ.ಎಸ್. ಮಹಾಗಾಂವಕರ್, ಮೇಹರಾಜ್ ಪಟೇಲ್, ರವೀಂದ್ರ ಶಾಬಾದಿ, ಮಹಾಂತೇಶ್ವರಿ ನಡಕಟ್ಟಿ,
ಡಾ| ಬಾಬುರಾವ ಶೇರಿಕಾರ, ಜಂಬನಗೌಡ ಶೀಲವಂತ, ನಾಗರಾಜ ನಿಂಬರ್ಗಿ, ಸಿದ್ದರಾಮ ಯಳವಂತಗಿ, ಉದಯಕುಮಾರ ಸಾಲಿ, ಶಿವರಾಜ ಬಳಗಾನೂರ, ಬಿ.ಎಂ. ಪಾಟೀಲ ಕಲ್ಲೂರ, ಡಿ. ಸಿದ್ದಪ್ಪ, ರಾಜಶೇಖರ ಯಂಕಂಚಿ, ರಾಜಶೇಖರ ಡೊಂಗರಗಾಂವ, ಮಹಾದೇವ ಬಡಾ, ಎಂ.ಎಂ. ಕಾಡಾದಿ, ಶಿವಾನಂದ ಪಿಸ್ತಿ, ರಾಜಶೇಖರ ಡೊಂಗರಗಾಂವ ಇದ್ದರು.