Advertisement

ಲಿಂಗಾಯತ ಧರ್ಮ ರಚನೆ ಶತಃಸಿದ್ಧ: ಎಂ.ಬಿ. ಪಾಟೀಲ

10:57 AM Sep 24, 2018 | |

ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮ ರಚನೆಯಾಗಿ ಅಸ್ಥಿತ್ವಕ್ಕೆ ಬರುವುದು ಖಂಡಿತ. ಕೇಂದ್ರ ಸರ್ಕಾರ ಲಿಂಗಾಯತ
ಧರ್ಮಕ್ಕೆ ಮಾನ್ಯತೆ ಕೊಡದಿದ್ದರೆ, ಸುಪ್ರೀಂಕೋರ್ಟ್‌ ಐತಿಹಾಸಿಕ ದಾಖಲೆಗಳನ್ನು ಪುರಸ್ಕರಿಸಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡುತ್ತದೆ ಎಂದು ಶಾಸಕ ಎಂ.ಬಿ. ಪಾಟೀಲ ತಿಳಿಸಿದರು.

Advertisement

ಜಯ ನಗರದಲ್ಲಿರುವ ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ರವಿವಾರ ನಡೆದ ಡಾ| ಬಸಪ್ಪ ದಾನಪ್ಪ ಜತ್ತಿ ಅವರ 106ನೇ ಜನ್ಮದಿನೋತ್ಸವ ಆಚರಣೆ, ಅರಿವಿನ ಮನೆಯ 566ನೇ ದತ್ತಿ ಕಾರ್ಯಕ್ರಮ, ಡಾ| ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನೀಡಲಾಗುವ 2018ನೇ ಸಾಲಿನ ಡಾ| ಬಿ.ಡಿ. ಜತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. 

ಸ್ವಾತಂತ್ರ್ಯಾಪೂರ್ವದಿಂದಲೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆಯುತ್ತಿದೆ. 1941ರಿಂದ ಲಿಂಗಾಯತ ಪ್ರತ್ಯೇಕ ಧರ್ಮ ರಚಿಸಬೇಕೆಂಬ ಬೇಡಿಕೆಯ ದಾಖಲೆಗಳು ಸಿಗಲಿವೆ. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲೂ ಪ್ರತ್ಯೇಕ ಧರ್ಮದ ಹೋರಾಟಗಳು ನಡೆದಿವೆ ಎಂದರು.

ಬೀದರ್‌ನಲ್ಲಿ ಸ್ವಯಂ ಪ್ರೇರಿತವಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಆರಂಭಗೊಂಡಾಗ ಅದಕ್ಕೆ ಶಕ್ತಿ
ತುಂಬಲು ವಿನಯ ಕುಲಕರ್ಣಿ, ಡಾ| ಶರಣಪ್ರಕಾಶ ಪಾಟೀಲ, ಬಸವರಾಜ ಹೊರಟ್ಟಿ ಸೇರಿದಂತೆ ನಾನು ಕೈಜೋಡಿಸಿದ್ದೆ. ರಾಜ್ಯ ಸರ್ಕಾರವೂ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಕೇಂದ್ರ ಸರ್ಕಾರ ಶೇ.99ರಷ್ಟು ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಲೆಬೇಕಾಗುತ್ತದೆ. ಒಂದು ವೇಳೆ ಕೇಂದ್ರ ಕೊಡದಿದ್ದರೆ ದೇಶದ ಸರ್ವೋತ್ಛ ನ್ಯಾಯಾಲಯ ಧರ್ಮದ ಐತಿಹಾಸಿಕ ಹೋರಾಟದ ದಾಖಲೆಗಳನ್ನು ಮಾನ್ಯ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒಪ್ಪಿಗೆ ಕೊಡುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಡಾ| ಬಿ.ಡಿ. ಜತ್ತಿ ಅವರು ಮುಖ್ಯಮಂತ್ರಿ, ರಾಜ್ಯಪಾಲ, ಉಪರಾಷ್ಟ್ರಪತಿ, ಹಂಗಾಮಿ ರಾಷ್ಟ್ರಪತಿ ಹುದ್ದೆಗೇರಿದರೂ
ಬಸವ ತತ್ವಗಳನ್ನು ಬಿಟ್ಟಿರಲಿಲ್ಲ. ಬಸವ ಸಮಿತಿ ಮೂಲಕ ಬಸವ ತತ್ವವನ್ನು ಜಗತ್ತಿಗೆ ಪರಿಚಯಿಸಿದರು. ಡಾ| ಬಿ.ಡಿ ಜತ್ತಿ ನಡೆದ ಸತ್ಯ ಮಾರ್ಗ, ಬಸವ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

Advertisement

ಬೆಂಗಳೂರಿನ ಬೇಲಿಮಠ ಮಹಾಸಂಸ್ಥಾನದ ಅಧ್ಯಕ್ಷ ಪೂಜ್ಯ ಶಿವರುದ್ರ ಮಹಾಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಮಹಿಮ ಸಂಗನ ಬಸವಣ್ಣ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿಯ ಹಾರೋಗೇರಿ ಬಸವತತ್ವ ಪ್ರಸಾರ ಸಂಸ್ಥೆ ಅಧ್ಯಕ್ಷ ಐ.ಆರ್‌. ಮಠಪತಿ ಮುಖ್ಯ ಅತಿಥಿಯಾಗಿದ್ದರು. 

ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ಸ್ವಾಗತಿಸಿದರು, ಡಾ| ಬಿ.ಡಿ. ಜತ್ತಿ ವಚನ ವಚನ ಅಧ್ಯಯನ
ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ| ವೀರಣ್ಣ ದಂಡೆ ಪ್ರಶಸ್ತಿ ಪುರಷ್ಕೃತರನ್ನು ಪರಿಚಯಿಸಿದರು. ಮಾಜಿ
ಸಚಿವ ಡಾ| ಶರಣಪ್ರಕಾಶ್‌ ಪಾಟೀಲ, ಡಾ| ಜಯಶ್ರೀ ದಂಡೆ ಪಾಲ್ಗೊಂಡಿದ್ದರು.

ಸಚಿವ ಸ್ಥಾನ ಸಿಗೋರಿಗೆ ಸಿಗುತೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ
ಆರಂಭವಾದ್ದರಿಂದ ನಮ್ಮ ವಿರುದ್ಧ ಅಪಪ್ರಚಾರ ನಡೆಸಲಾಯಿತು. ನನ್ನನ್ನು, ವಿನಯ ಕುಲಕರ್ಣಿ, ಡಾ| ಶರಣಪ್ರಕಾಶ ಪಾಟೀಲ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಯತ್ನಿಸಿದರು ಎಂದು ಎಂ.ಬಿ. ಪಾಟೀಲ ಇದೇ ವೇಳೆ ಹೇಳಿದರು. ಹೊಸ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೈತಪ್ಪಿದಾಗ ಕೆಲವರು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಕೈ ಬಿಡುತ್ತಾರೆ ಎಂಬಂತೆ ಮಾತನಾಡಿದರು. ಆಗ ನಾನು ಯಾರಿಗೆ ಸಚಿವ ಸ್ಥಾನ ಸಿಗಬೇಕೋ ಅವರಿಗೆ ಸಿಗುತ್ತದೆ, ಯಾರು ಸಚಿವರಾಗಬೇಕೂ ಅವರು ಆಗುತ್ತಾರೆ, ಹೋರಾಟ ಬೇರೆ, ರಾಜಕೀಯ ಬೇರೆ ಎಂದು ಹೇಳಿದ್ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next