Advertisement

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ನೀಡಿ: ಗಂಗಾದೇವಿ

10:08 AM May 26, 2019 | Suhan S |

ಧಾರವಾಡ: ಪ್ರಚಂಡ ಬಹುಮತದೊಂದಿಗೆ ಮತ್ತೂಮ್ಮೆ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲಿಂಗಾಯತ ಧರ್ಮಕ್ಕೆ ಸ್ವತಂತ್ರ್ಯ ಧರ್ಮದ ಮಾನ್ಯತೆ ನೀಡುವ ನಿರ್ಧಾರ ಕೈಗೊಳ್ಳಲಿ. ಇದು ಅವರ ಪ್ರಥಮ ನಿರ್ಧಾರವಾಗಲಿ ಎಂದು ಕೂಡಲ ಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

Advertisement

ನಗರದ ಜಗನ್ಮಾತಾ ಅಕ್ಕಮಹಾದೇವಿ ಮಠದ ಬಸವ ಮಂಟಪದಲ್ಲಿ ಮಠದ 51ನೇ ವಾರ್ಷಿಕೋತ್ಸವ ಹಾಗೂ 10ನೇ ಶರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಲಿಂಗಾಯತರ ಅಸ್ಮಿತೆಗಾಗಿ ನಡೆದ ಹೋರಾಟ ಅರ್ಥ ಮಾಡಿಕೊಂಡು ಈ ಹಿಂದಿನ ರಾಜ್ಯ ಸರಕಾರ ಮಾಡಿದ ಶಿಫಾರಸನ್ನು ಕೇಂದ್ರ ಸರಕಾರ ಅಂಗೀಕರಿಸಬೇಕು. ಈ ಮೂಲಕ ಬಿಜೆಪಿ ಬೆಂಬಲಿಸಿದ ಲಿಂಗಾಯತರ ಋಣ ತೀರಿಸಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ 1940ರಿಂದಲೇ ಆರಂಭವಾಗಿದೆ. ಇದು ಯಾರ ಪರ ಹಾಗೂ ವಿರುದ್ಧದ ಹೋರಾಟವಲ್ಲ ಎಂದರು.

ಈ ಮೊದಲು ಕೇಂದ್ರದಲ್ಲಿ ಒಬ್ಬ ಲಿಂಗಾಯತರೂ ಮಂತ್ರಿಯಾಗಿಲ್ಲ. ಆದ್ದರಿಂದ ಈ ಬಾರಿ 4 ಲಿಂಗಾಯತ ಸಂಸದರನ್ನು ಕೇಂದ್ರ ಮಂತ್ರಿ ಮಾಡಿ ತಮಗೆ ಬೆಂಬಲಿಸಿದ ಲಿಂಗಾಯತರಿಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದರು.

ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ, ಮಾತೆ ಸತ್ಯದೇವಿ, ಸಿದ್ದಣ್ಣ ನಟೇಗಲ್, ಕೆ.ಎಸ್‌. ಕೌಜಲಗಿ, ಕೆ.ಎಸ್‌. ಕೋರಿಶೆಟ್ಟರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next