Advertisement

ಲಿಂಗಾಯತ ಪಂಚಶಕ್ತಿ ಸಮಾವೇಶ: ಡಿ. 22ರಂದು ಬೆಳಗಾವಿ ರಾ.ಹೆ. ಮಾರ್ಗ ಬದಲಾವಣೆ

09:45 PM Dec 21, 2022 | Team Udayavani |

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜದವರು ಗುರುವಾರ ಡಿ. 22ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಮುಖ ಮಾರ್ಗದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

Advertisement

ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಮಂಡಲದ ಚಳಗಾಲದ ಅಧಿವೇಶನ ಪ್ರಾರಂಭವಾಗಿದ್ದು , ಡಿ. 22ರಂದು ಅಂಗಾಯತ ಸಮಾಜದವರು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ.

ಆ ಕಾಲಕ್ಕೆ ಸುಮಾರು 4-5 ಲಕ್ಷ ಜನರು ಹಿರೇಬಾಗೇವಾಡಿಯಿಂದ ಬಸ್ತವಾಡ ಸಮಾವೇಶ ಸ್ಥಳದವರೆಗೆ ಪಾದಯಾತ್ರೆ ಮೂಲಕ ಬೆಳಗಾವಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬರುವವರಿದ್ದು, ಆ ಕಾಲಕ್ಕೆ ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ .

ಬೆಳಗಾವಿಯಿಂದ ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡ ಕಡೆಗೆ ಹೋಗುವ ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ -48 ರ ಎಡಬದಿಯ ರಸ್ತೆಯನ್ನು ಉಪಯೋಗಿಸತಕ್ಕದ್ದು .

ಬೆಳಗಾವಿಯಿಂದ ಧಾರವಾಡ ಕಡೆಗೆ ಹೋಗುವ ಭಾರಿ ವಾಹನಗಳ ಸಂಚಾರವನ್ನು ಬಾಗೇವಾಡಿ ಮಾರ್ಗವಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ.‌ ಭಾರಿ ವಾಹನಗಳು ಬೆಳಗಾವಿಯಿಂದ ಸಾಂಬ್ರಾ – ನೇಸರಗಿ – ಬೈಲಹೊಂಗಲ ಕ್ರಾಸ್ – ಎಂ.ಕೆ.ಹುಬ್ಬಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೋಗಿ ಸೇರುವುದು .

Advertisement

3. ಧಾರವಾಡ ಕಡೆಯಿಂದ ಬೆಳಗಾವಿಗೆ ಬರುವ ಲಘು ವಾಹನಗಳು ಬಾಗೇವಾಡಿ ಟೋಲ್ ಗೇಟ್ ದಾಟಿದ ನಂತರ ಬಲಗಡೆಯ ರಸ್ತೆಗೆ ಹೋಗುವುದು. ಎಡಗಡೆಯ ರಸ್ತೆಯಲ್ಲಿ ಪಾದಯಾತ್ರೆ ಇರುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಲಗಡೆಯ ರಸ್ತೆಯನ್ನು ಕಿರ್ಲೋಸ್ಕರ್‌ ಶೋರೂಂ ವರೆಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮೇಲಿನಂತೆ ಹಿರೇಬಾಗೇವಾಡಿಯಿಂದ ಬೆಳಗಾವಿ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು , ಸಾರ್ವಜನಿಕರು ಬದಲಾದ ಮಾರ್ಗಗಳಲ್ಲಿ ಸಂಚರಿಸಿ ಸಹಕರಿಸಲು ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next