Advertisement

ಲಿಂಗಾಯತ ಸ್ವತಂತ್ರ ಧರ್ಮವಾದರೆ ಸಮಾಜಕ್ಕಿಲ್ಲ ಯಾವುದೇ ಹಾನಿ: ಕೌಲಗಿ

12:31 PM Jul 26, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎನಿಸಿಕೊಳ್ಳುವುದರಿಂದ ಸಮಾಜಕ್ಕೆ ಯಾವುದೇ ಹಾನಿ ಇಲ್ಲ. ಇದರಿಂದ ಪ್ರಗತಿಪರ ಚಿಂತನೆಗೆ ಅನುಕೂಲವಾಗುವುದು. ಈ ವಿಚಾರದಲ್ಲಿ ಕೋಮುವಾದಿಗಳ ಒತ್ತಡಕ್ಕೆ ಅನ್ಯಧರ್ಮದ ಮಠಾಧೀಶರು ಲಿಂಗಾಯತ ಸ್ವತಂತ್ರ ಧರ್ಮವಾಗುವುದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲವೆಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಹೇಳಿದ್ದಾರೆ. 

Advertisement

ವೀರಶೈವ ಹಾಗೂ ಲಿಂಗಾಯತ ನಡುವೆ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ವಾದ-ವಿವಾದ ಏರ್ಪಟ್ಟಿರುವಾಗ ಹಿಂದೂ ಧರ್ಮಕ್ಕೆ ಸ್ವತಂತ್ರ ಲಿಂಗಾಯತ ಧರ್ಮದಿಂದ ಧಕ್ಕೆಯಾಗುವುದೆಂದು ಪೇಜಾವರ ಶ್ರೀಗಳು ಆತಂಕ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ.

ಇದುವರೆಗೂ ಕೋಮುವಾದಿಗಳು ವೀರಶೈವ ಲಿಂಗಾಯತ ಯುವಕರಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್‌ ರನ್ನು ದ್ವೇಷಿಸುವ ಭಾವನೆ ಬಿತ್ತುತ್ತ ಬಂದಿದ್ದು, ಅದರ ರಾಜಕೀಯ ಲಾಭ ಪಡೆಯುತ್ತಿದ್ದರು. ಆದರೆ ಬಸವ ತತ್ವ ಅಳವಡಿಸಿಕೊಂಡವರು, ಬಸವಣ್ಣನ ಅನುಯಾಯಿಗಳು, ಜಾತಿ ವ್ಯವಸ್ಥೆ ವಿರೋಧಿಸುವವರು ಲಿಂಗಾಯತ ಸ್ವತಂತ್ರ ಧರ್ಮದ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುವುದರಲ್ಲಿ ಯಾವುದೇ ತಪ್ಪಿಲ್ಲ.

ಆದರೆ ಹಿಂದುತ್ವದ ಮೂಲಕ ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಮೇಲು-ಕೀಳೆಂಬ ವಿಚಾರದವರನ್ನು ವಿರೋಧಿಸಬೇಕಾಗುತ್ತದೆ. ಆದರೆ ಹಿಂದುತ್ವದ ಮೂಲಕ ಕೋಮು ಸಾಮರಸ್ಯ ಹದಗೆಡಿಸುವವರ ಬಗ್ಗೆ ಎಚ್ಚರದಿಂದಿರಬೇಕು. ಬ್ರಾಹ್ಮಣರಲ್ಲೂ ದ್ವೆ„ತ, ಅದ್ವೆ„ತ ಎಂಬ ಪಂಗಡಗಳಿವೆ. ವಿಶಿಷ್ಟಾದ್ವೆ„ತವು ನಮ್ಮಲ್ಲಿಲ್ಲ.

ಶಂಕರಚಾರ್ಯರು ಅದ್ವೆ„ತ ಮತ ಸ್ಥಾಪಕರಾಗಿ ಅಹಂ ಬ್ರಹ್ಮಾಸ್ಮಿ ಎಂದರೆ, ಜಗತ್ತು ಮಿಥ್ಯ ಎಂದರೆ, ಮಧ್ವಾಚಾರ್ಯರು ಜಗತ್ತು ಸತ್ಯ ಎಂದರು. ಇನ್ನು ಮಧ್ವ ಸಿದ್ಧಾಂತದ ಮೇಲೆ ಸ್ಥಾಪಿತಗೊಂಡ ಉತ್ತರಾದಿಮಠ, ರಾಯಮಠ ಉಡುಪಿ ಮಠಗಳು ತಮ್ಮದೇ ಕೆಲವು ರೀತಿ ನೇಮಗಳನ್ನು ಹೊಂದಿವೆ. ಕೆಲವು ವೃಂದಾವನಗಳ ಬಗ್ಗೆ ರಾಯರ ಮಠ, ಉತ್ತರಾದಿಮಠದ ಬಗ್ಗೆ ವ್ಯಾಜ್ಯಗಳಿವೆ.

Advertisement

ಹೀಗಿರುವಾಗ ವೀರಶೈವ ಲಿಂಗಾಯತರಲ್ಲೂ ಕೆಲವು ಭೇದಗಳಿವೆ. ಹೀಗಿರುವಾಗ ಕೋಮುವಾದಿಗಳು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ಹಿಂದೂ ಧರ್ಮ ಒಡೆಯುವ ಪ್ರಶ್ನೆಯೇ ಇಲ್ಲ. ಹಿಂದೂ ಹಾಗೂ ಹಿಂದುತ್ವದ ಮಧ್ಯೆ ಭೇದವಿದೆ. ಈ ವಿಚಾರದಲ್ಲಿ ಅನ್ಯಧರ್ಮಿಯರ ಪ್ರವೇಶ ಸರಿಯಲ್ಲವೆಂದು ಕೌಲಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next